ಸಂತಾನ ಉತ್ತರಕ್ಕೆ ಫಾರಿನ್ ಸ್ನೇಹಿತರು ತಬ್ಬಿಬ್ಬು!
ಒಂದು ಬಾರಿ ಅಮೆರಿಕ, ಟರ್ಕಿ, ಇಟಲಿ ಮತ್ತು ಭಾರತ ದೇಶದವ ಬಾರಿನಲ್ಲಿ ಹರಟೆ ಹೊಡೆದುಕೊಂಡು ಕುಳಿತಿದ್ದರು. ಪ್ರತಿಯೊಬ್ಬರು ತಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ಅಮೆರಿಕದವ, "ನಮ್ಮ ದೇಶದ ಕೇಂದ್ರ ಗುಪ್ತಚರ ಸಂಸ್ಥೆಯ ಬಗ್ಗೆ ಭಾರೀ ಹೆಮ್ಮೆ. ಜಗತ್ತಿನಲ್ಲಿ ಏನೇ ನಡೆಯುತ್ತಿದ್ದರು, ಅದು ನಡೆಯುವ ಮೊದಲೇ ಗುಪ್ತಚರ ಇಲಾಖೆಗೆ ತಿಳಿಯುತ್ತದೆ" ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ.
ಇಟಲಿಯವ, "ನಮ್ಮ ರಾಷ್ಟ್ರದ ಹುಡುಗಿಯರು ಬಲು ಚೆಂದ. ಇಷ್ಟಿದ್ದೂ ಅವರನ್ನು ಒಲಿಸಿಕೊಳ್ಳುವುದು ಬಲು ಕಷ್ಟದ ಕೆಲಸ" ಎಂದು ಒಂದು ಪೆಗ್ ಏರಿಸಿ ನುಡಿದ.
ಟರ್ಕಿಯವ, "ನಮ್ಮ ದೇಶದ ರತ್ನಗಂಬಳಿ ಏನು ಶ್ರೇಷ್ಠ ಅಂತೀರಿ? ಅಂಥ ಕಲೆಗಾರಿಕೆಯಿಂದ ಕೂಡಿದ ರತ್ನಗಂಬಳಿಯನ್ನು ಇಡೀ ಜಗತ್ತಿನಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ" ಎಂದು ಗಹಗಹಿಸಿ ನಕ್ಕ.
ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿದ್ದರೂ ಭಾರತ ದೇಶದ ಪ್ರಜೆ (ಸಂತಾ) ಹೊಗೆ ಬಿಟ್ಟುಕೊಂಡು ತನ್ನ ಲೋಕದಲ್ಲಿ ಮುಳುಗಿದ್ದ. ಆದರೂ ಆತನ ಕಿವಿ ಮಾತ್ರ ಉಳಿದವರ ಮಾತುಗಳನ್ನು ಕೇಳುತ್ತಿತ್ತು.
ನಿಂದೇನಪ್ಪ ಸಮಾಚಾರ ಅಂತ ಎಲ್ಲರೂ ಒಗ್ಗಟ್ಟಿನಿಂದ ತಮ್ಮ ಭಾಷೆಯಲ್ಲಿ ಕೇಳಿದರು.
ಸಂತಾ, "ನಿನ್ನೆ ರಾತ್ರಿ ಟರ್ಕಿ ರತ್ನಗಂಬಳಿಯ ಮೇಲೆ ಇಟಲಿಯಿಂದ ಹಾರಿಸಿಕೊಂಡು ಬಂದಿದ್ದ ಸುರಸುಂದರಾಂಗಿಯ ಜೊತೆ ಕಾಮಕೇಳಿ ನಡೆಸಿದೆ. ಇದು ಅಮೆರಿಕದ ಗುಪ್ತಚರ ಇಲಾಖೆಗೆ ತಿಳಿದೇ ಇಲ್ಲ" ಎಂದು ಹೇಳಿದ ಕೂಡಲೆ ಉಳಿದವರು ಮಕಮಕ ನೋಡಿಕೊಂಡರು.












Click it and Unblock the Notifications