ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಸ್ ಪಡೆದಾಗ ಯಾವತ್ತೂ ತಲೆತಿರುಗಿರ್ಲಿಲ್ಲ!

|
Google Oneindia Kannada News

ಸಲೀಂಗೆ ಅನಾರ್ಕಲಿ ಮೇಲೆ ಪ್ಯಾರ್ಗೆ ಆಗ್ಬಿಟೈತೆ. ತನ್ನ ಪ್ರೀತಿಯನ್ನು ನಿವೇದಿಸಬೇಕೆಂದು ಸಲೀಂ ಅನಾರ್ಕಲಿನ ಪಾರ್ಕಿಗೆ ಬಾ ಅಂತ ಹೇಳ್ತಾನೆ. ಅನಾರ್ಕಲೀನು ಫುಲ್ ಖುಷ್ ಆಗಿ ಅನಾರ್ಕಲಿ ಡ್ರೆಸ್ ಹಾಕ್ಕೊಂಡು ಪಾರ್ಕಿಗೆ ಹೋಗ್ತಾಳೆ. ಬೆಂಚಿನ ಆ ತುದಿಯಲ್ಲಿ ಸಲೀಂ, ಈ ತುದಿಯಲ್ಲಿ ಅನಾರ್ಕಲಿ. ನಾಚ್ಕೊಂಡು ನಾಚ್ಕೊಂಡು ಇಬ್ಬರೂ ಹತ್ತಿರ ಬರುತ್ತಾರೆ.

ಹೂಕೊಟ್ಟು, ಮೈನೆ ಪ್ಯಾರ್ ಕಿಯಾ ಅಂತ ಹೇಳ್ಬಿಟ್ಟಿ ಇನ್ನೇನು ಸಲೀಂ ಕಿಸ್ ಕೊಡಬೇಕು, ಅಷ್ಟರಲ್ಲಿ ಅನಾರ್ಕಲಿ ಮುಖ ಸಿಂಡರಿಸಿ ಬಿಡುತ್ತಾಳೆ. ತಲೆ ಸುತ್ತಿಬಂದವಳ ಹಾಗೆ ಆಡಲು ಶುರು ಮಾಡುತ್ತಾಳೆ. ಸಲೀಂಗೆ ಆಘಾತವೋ ಆಘಾತ.

ಸಲೀಂ : ಯಾಕೆ ಡಾರ್ಲಿಂಗ್, ಕಿಸ್ ಕೊಡೋಕ್ ಬಂದ್ರೆ ತಲೆ ಸುತ್ತಿದವಳ ತರಹ ಆಡ್ತಿದ್ದೀಯಾ? ಮುತ್ತಿಡುವುದು ಅನಾರೋಗ್ಯಕರ ಅಂತ ನಿನ್ನ ಭಾವನೆಯಾ?

ಅನಾರ್ಕಲಿ : ನಂಗೊತ್ತಿಲ್ಲ.

ಸಲೀಂ : ನಿಂಗೊತ್ತಿಲ್ಲ? ಹಾಗಿದ್ರೆ ಇದು ಮೊತ್ತ ಮೊದಲನೇ ಬಾರಿ ನೀನು ಕಿಸ್ ತೆಗೆದುಕೊಳ್ಳುತ್ತಿರುವುದಾ?

ಅನಾರ್ಕಲಿ : ಛೆ ಛೆ ಹಾಗೇನಿಲ್ಲ. ಆದರೆ, ಹಿಂದೆ ಕಿಸ್ ಪಡೆದಾಗ ಯಾವತ್ತೂ ತಲೆತಿರುಗಿ ಬಿದ್ದಿರ್ಲಿಲ್ಲ!

***
ಇಂಥ ಕಿಸ್ ಯಾವತ್ತೂ ಪಡೆದಿಲ್ಲ!

ಹೆಂಡತಿಗೆ ಸುಖ ನೀಡದ ಗಂಡನ ಮೇಲೆ ಎಳ್ಳಷ್ಟೂ ಪ್ರೀತಿ ಉಳಿದಿರಲಿಲ್ಲ. ಸರಿಯಾಗಿ ಮುತ್ತು ಕೊಡೋಕೂ ಬರಲ್ಲ ಆ ಬೆಪ್ಪನಿಗೆ ಅಂತ ಮನದಲ್ಲೇ ಬೈದುಕೊಳ್ತಿರ್ತಾಳೆ. ಹೀಗೇ ಒಂದು ದಿನ, ಆಕೆ ಒಬ್ಬಂಟಿಯಾಗಿರುವಾಗ ಒಬ್ಬ ಹ್ಯಾಂಡ್ಸಮ್ ಸೇಲ್ಸ್‌ಮನ್ ಮನೆಗೆ ಬರುತ್ತಾನೆ. ಆತನನ್ನು ನೋಡಿದ ಕೂಡಲೆ ಈಕೆಗೂ ಆಸೆಯ ನವಿಲುಗರಿ ತೆರೆದುಕೊಂಡು ಬಿಡುತ್ತದೆ.

ಅನಾಯಾಸವಾಗಿ ಸಿಕ್ಕ ಚಾನ್ಸ್ ಯಾರು ಬಿಡ್ತಾರೆ ಅಂತ ಮಾರುವವ ಕೂಡ ಆಕೆಯೊಡನೆ ಸರಸವಾಡಲು ತಯಾರಾಗಿಬಿಡುತ್ತಾನೆ. ಎಂಥಾ ಮುತ್ತು ಕೊಡುತ್ತಾನೆಂದರೆ ಆಕೆ ಅಂಥ ಮುತ್ತನ್ನು ಗಂಡನಿಂದ ಪಡೆದಿರುವುದಿರಲಿ, ಯಾವ ಚಿತ್ರದಲ್ಲಿಯೂ ನೋಡಿದ್ದಿಲ್ಲ.

ಒಂದು ಕ್ಷಣ ಉಸಿರೆಳೆದುಕೊಂಡು, "ಮೈ ಗಾಡ್, ಎಂಥ ಕಿಸ್ ಇದು. ನಾನ್ಯಾವತ್ತೂ ಇಂಥ ಕಿಸ್ ಪಡೆದಿಲ್ಲ, ನೋಡಿಯೂ ಇಲ್ಲ. ಅಂದ ಹಾಗೆ ನೀನು ಏನು ಸೇಲ್ ಮಾಡ್ತೀಯಾ?"

"ವ್ಯಾಕ್ಯೂಮ್ ಕ್ಲೀನಿಂಗ್ ಮಷೀನ್!"

English summary
Adult Kannada jokes : Anarkali suddenly becomes irritated when Salim bends to kiss his love. Why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X