ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡ್ಡು ಕೊಡೋಕೆ ರೆಡಿಯಿದ್ದೀರೆಂದು ನನಗೆಲ್ಲಿ ಗೊತ್ತಿತ್ತು!

|
Google Oneindia Kannada News

ಆ ರಾತ್ರಿ ಗಂಡ ಮನೆಗೆ ಬರುವುದನ್ನೇ ಹೆಂಡತಿ ಕಾಯುತ್ತಿರುತ್ತಾಳೆ. ಕಣ್ಣು ಕೆಂಡ ಕಾರುತ್ತಿರುತ್ತದೆ, ಕಿವಿ ಹೊಗೆ ಉಗುಳುತ್ತಿರುತ್ತದೆ, ಮೂಗಿನ ಮೇಲೆ ಕೆಂಡದಂತಹ ಕೋಪ ಕುಣಿದಾಡುತ್ತಿರುತ್ತದೆ. ನೈಟ್ ಡ್ರೆಸ್‌ನಲ್ಲಿ ಆಕೆ ಬೆಡ್ ರೂಮಿನಲ್ಲಿ ಶತಪಥ ತಿಗುತ್ತಿರುತ್ತಾಳೆ.

ಅಷ್ಟರಲ್ಲಿಯೇ ಗಂಡನ ಆಗಮನವಾಗುತ್ತದೆ. ಜ್ವಾಲಾಮುಖಿ ಉಗುಳಿದಂತೆ ಗಂಡನ ಮೇಲೆ ಭೋರ್ಗರೆಯಲು ಶುರುಮಾಡುತ್ತಾಳೆ ಹೆಂಡತಿ. ಗಂಡ ಮಾತ್ರ ಇದೆಲ್ಲ ಮಾಮೂಲು ಎಂಬಂತೆ ಶಾಂತಚಿತ್ತನಾಗಿರುತ್ತಾನೆ.

"ರೀರೀ ಏನ್ರೀ ಇದು ಅನ್ಯಾಯ? ನಾನು ನಿಮ್ಮ ಜೊತೆಗಿದ್ದರೂ ನೀವು ಪರಸ್ತ್ರೀಯರ ಮೋಹಕ್ಕೆ ಬಿದ್ದೀರಂತೆ. ನನಗೆಲ್ಲ ತಿಳಿದುಬಂದಿತು" ಎಂದು ಕೋಪದಲ್ಲಿಯೇ ಕಣ್ಣೀರುಗರೆಯುವ ಮುಖ ಮಾಡಿಕೊಂಡು ಗಂಡನ ಜನ್ಮ ಜಾಲಾಡುತ್ತಾಳೆ.

"ನಿನಗೆ ಗೊತ್ತಾದ ಮೇಲೆ ಇನ್ನೇನಿದೆ. ಯಸ್, ಹೌದು. ಇನ್ನೇನು ತಾನೆ ನಾನು ಮಾಡಲಿ ಹೇಳು? ನಿನ್ನಿಂದ ನನಗೆ ಹಾಸಿಗೆಯಲ್ಲಿ ಯಾವ ಸುಖವೂ ಸಿಗುತ್ತಿಲ್ಲ. ಪ್ರತಿ ರಾತ್ರಿ ಏನೋ ಕಾರಣ ಹೇಳಿ ತಪ್ಪಿಸಿಕೊಳ್ತಿದ್ದಿಯಾ" ಗಂಡ ಬೆಂಕಿಯ ಮೇಲೆ ನೀರು ಹುಯ್ಯುವ ಹಾಗೆ ಹೇಳುತ್ತಾನೆ.

"ಇದರಲ್ಲಿ ನಿಮ್ಮ ತಪ್ಪೂ ಇದೆ" ಎಂದು ಕೋಪವನ್ನು ನೈಟ್ ಗೌನಿನಂತೆ ಕಳಚಿದ ಹೆಂಡತಿ, "ನೀವು ಅದಕ್ಕೆ ದುಡ್ಡು ಕೊಡೋಕೆ ರೆಡಿಯಿದ್ದೀರೆಂದು ನನಗೆಲ್ಲಿ ಗೊತ್ತಿತ್ತು!" ಗಂಡನ ಕುತ್ತಿಗೆಗೆ ಕೈಹಾಕಿ, ವೈಯಾರದಿಂದ, ಪ್ರೇಮದಿಂದ ಹೇಳುತ್ತಾಳೆ. [ವಯಸ್ಕರ ಜೋಕ್ಸ್]

English summary
Adult Kannada jokes. Wife was fuming at her husband as she comes to know that he was visiting prostitutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X