ಪಬ್ಲಿಕ್ ಬೂತ್ ಹೋಗ್ತೀರಾ, ನಾನು ಕಾಲ್ ಸೆಂಟರ್ ತೆಗಿತೀನಿ

ತುಂಬಿದ ಮನೆಯಲ್ಲಿ ಹೊಚ್ಚ ಹೊಸದಾಗಿ ಮದುವೆಯಾದ ಗಂಡ ಹೆಂಡತಿಯರ ರಾತ್ರಿಯ ಚಟಪಡಿಕೆಗಳು ಬಲು ತಮಾಷೆಯಾಗಿರುತ್ತವೆ. ಅಲ್ಲಿ ಗಂಡ ರಾತ್ರಿಯೂಟ ಮುಗಿಸಿ ಬ್ರಷ್ ಮಾಡಿ ಸರಸವಾಡುವ ಸಮಯಕ್ಕಾಗಿ ಕಾದುಕುಳಿತು, ಪಂಜರದಲ್ಲಿನ ಕತ್ತೆಕಿರುಬದಂತೆ ಅತ್ತಿಂದಿತ್ತ ಶತಪಥ ಅಡ್ಡಾಡುತ್ತಿರುವಾಗ, ಇಲ್ಲಿ ಅಡುಗೆಮನೆಯಲ್ಲಿ ಏನೇನೋ ಕೆಲಸ ಮಾಡುತ್ತ ಹೆಂಡತಿ ಗಂಡನನ್ನು ಸತಾಯಿಸುತ್ತಿರುತ್ತಾಳೆ.

ಗುಂಡ ಗುಂಡಿಯರದೂ ಅದೇ ಕಥೆಯಾಗಿತ್ತು. ಗುಂಡ ಸಂಕಟ ತಾಳಲಾರದೆ, ತಾಳ್ಮೆ ಕಳೆದುಕೊಂಡು ಅಡುಗೆಮನೆಗೆ ದಾಳಿಯಿತ್ತು, ಸಂಗಾತಿಯ ಕೈಹಿಡಿದು ದರದರ ಎಳೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಅಮ್ಮನೋ ಅಜ್ಜಿಯೋ ಪಕ್ಕದಲ್ಲೇ ಇರುತ್ತಾರೆ. ಆಗ ಬೇರೆ ದಾರಿಯಿಲ್ಲದೆ ಕಣ್ಸನ್ನೆ ಮಾಡಿರುತ್ತಿದ್ದ. ಹೆಂಡತಿ ಗುಂಡಿ ಪ್ರತಿಕ್ರಿಯೆ ಕೂಡ ನೀಡದೆ ಇನ್ನಷ್ಟು ಚೆಲ್ಲಾಟವಾಡಲು ಪ್ರಾರಂಭಿಸುತ್ತಿದ್ದಳು.

ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕು ಎಂದುಕೊಂಡು ರಾತ್ರಿಯೇ ಆಗಲಿ ಮತ್ತಾವುದೇ ಹೊತ್ತಿನಲ್ಲೇ ಆಗಲಿ ರತಿಕ್ರೀಡೆ ಆಡಬೇಕೆಂದು ಅನಿಸಿದಾಗಲೆಲ್ಲ 'ಫೋನ್ ಮಾಡಬೇಕು' ಎಂಬ ಕೋಡ್ ವರ್ಡ್ ಕೂಗಿದರೆ ಸಾಕು ಸರಸಕ್ಕೆ ಸಮಯವಾಗಿದೆ ಎಂದು ತಿಳಿದುಕೊಳ್ಳಬೇಕು ಮತ್ತು ತಕ್ಷಣ ಧಾವಿಸಬೇಕು ಎಂದು ಇಬ್ಬರೂ ಮಾತನಾಡಿಕೊಂಡಿರುತ್ತಾರೆ. ಈ ಕೋಡ್ ವರ್ಡ್ ಯಾರಿಗೂ ಡಿಕೋಡ್ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಬ್ಬರ ಬಲವಾದ ನಂಬಿಕೆ.

ಸರಿ, ಗುಂಡ ಕಚೇರಿಯಿಂದ ವಾಪಸ್ ಬರುವಾಗ ಕಬ್ಬನ್ ಪಾರ್ಕಿನಲ್ಲಿ ಸರಸವಾಡುತ್ತ ಕುಳಿತಿದ್ದ ಜೋಡಿಯನ್ನು ನೋಡಿ ಮನೆಗೆ ಮರಳಿದವನಿಗೆ ಮತ್ತೆ ಅದೇ ಚಟಪಡಿಕೆ ಶುರುವಾಯಿತು. ಶಾಸ್ತ್ರಕ್ಕೆ ಊಟ ಮುಗಿಸಿ, ಕಣ್ಸನ್ನೆ ಮಾಡಿ, ಬೆಡ್ರೂಮಿಗೆ ಬಂದು ಶತಪಥ ತಿರುಗಲು ಪ್ರಾರಂಭಿಸಿದ. ನಂತರ ತಾಳ್ಮೆ ಕಳೆದುಕೊಂಡು "ಸ್ವಲ್ಪ ಫೋನ್ ಮಾಡಬೇಕು ಬೇಗ ಬಾ" ಎಂದು ಕೂಗಿದ.

ಅಡುಗೆಮನೆಯಲ್ಲಿ ಸಿಕ್ಕಾಪಟ್ಟೆ ಬಿಜಿಯಿದ್ದ ಗುಂಡಿ, "ರೀ, ನೆಟ್ವಕ್ ಎಲ್ಲ ಜಾಮ್ ಆಗಿಬಿಟ್ಟಿದೆ, ಇವತ್ತಾಗಲ್ಲಾರೀ" ಎಂದು ಕೂಗಿ ಹೇಳಿದಳು.

ಗುಂಡನಿಗೆ ಪಿತ್ತ ನೆತ್ತಿಗೇರಿಬಿಟ್ಟಿತು. ಇಷ್ಟಾ ಇವಳದ್ದು, ಮಾಡ್ತೀನಿ ತಡಿ ಅಂದು, "ನೆಟ್ವರ್ಕ್ ಜಾಮ್ ಆಗಿದೆನಾ? ಹಾಗಿದ್ರೆ ನಾನು ಈಗಲೇ ಪಬ್ಲಿಕ್ ಬೂತಿಗೆ ಹೋಗ್ತೀನಿ ಕಣೇ" ಎಂದು ಒದರಿದ.

ನಾನೇನು ಕಡಿಮೆ ಅಂತ ಗುಂಡಿ, "ಪಬ್ಲಿಕ್ ಫೋನ್ ಬೂತಿಗೆ ಹೋಗ್ತೀರಾ? ನಾನು ಮನೆಯಲ್ಲೇ ಕಾಲ್ ಸೆಂಟರ್ ಓಪನ್ ಮಾಡಿಬಿಡ್ತೀನಿ ಹುಷಾರ್!" ಎಂದು ವಾಪಸ್ ಉತ್ತರ ನೀಡಿದಳು.

ಗಂಡ ಗುಂಡ ಗಪ್‌ಚಿಪ್. ಇವರಿಬ್ಬರ ಮಾತಿನ ಅರ್ಥ ತಿಳಿಯದೆ ತಬ್ಬಿಬ್ಬಾಗಿ ನಿಂತಿದ್ದ ಅಜ್ಜಿ, "ಅಯ್ಯೋ ಮುಂಡೇವು, ಏನೋ ಬಿಜಿನೆಸ್ ಬಗ್ಗೆ ಮಾತಾಡುತ್ತಿರಬೇಕು" ಎಂದು ಗೊಣಗಿಕೊಂಡಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+