ಸುಂದರಿ, ಪೆದ್ದ ಗಂಡ ಮತ್ತು ರಸಿಕ ನಾವಿಕ!
ಒಬ್ಬಳು ಸುಂದರಿ ಮತ್ತು ಜಾಣ ಮಹಿಳೆ, ಆಕೆಯ ಪೆದ್ದ ಗಂಡ ಮತ್ತು ಸ್ಫುರದ್ರುಪಿಯಾಗಿದ್ದ ನಾವಿಕನಿದ್ದ ದೋಣಿಯೊಂದು ಬಿರುಗಾಳಿಯ ಹೊಡೆತಕ್ಕೆ ಸಿಕ್ಕು ಹೆಸರೇ ಕೇಳದ, ದಿಕ್ಕೇ ತೋಚದ, ನರಪಿಳ್ಳೆಗಳೇ ಇಲ್ಲದ ದ್ವೀಪವೊಂದಕ್ಕೆ ಹೋಗಿ ಡಿಕ್ಕಿ ಹೊಡೆದು ಮುಗುಚಿಬಿದ್ದಿತು. ಮೂವರೂ ಹೇಗೋ ಪಾರಾಗಿ ದಡ ಸೇರಿಕೊಂಡರು.
ಸಿಕ್ಕಿದ್ದು ತಿಂದು, ಕಂಡಲ್ಲಿ ಅಡ್ಡಾಡಿಕೊಂಡು ಆ ರಾತ್ರಿ ಹೇಗೋ ಕಳೆದರು. ಮೂವರಿಗೂ ಏನಾಗಿದೆ, ಏನು ಮಾಡಬೇಕು ಎಂಬ ಅರಿವೂ ಇರಲಿಲ್ಲ. ಮೂವರಿಗೆ ಭಾರೀ ಸುಸ್ತಾಗಿದ್ದರಿಂದ ಭರ್ತಿ ನಿದ್ದೆ. ಬೆಳಗಾಗುತ್ತಿದ್ದಂತೆ ಮೈನಟಿಕೆ ಮುರಿದು ನಾವಿಕ ಎದ್ದ, ಎದುರಿಗೆ ಸಾಕ್ಷಾತ್ ಸುಂದರಿ ಮಲಗಿದ್ದಾಳೆ, ಪಕ್ಕದಲ್ಲಿ ಗಂಡ ಮೈಮರೆತು ಪವಡಿಸಿದ್ದಾನೆ.
ಗಂಡ ಮಹಾಪೆದ್ದು ಎಂಬುದು ಮೊದಲೇ ನಾವಿಕನಿಗೆ ತಿಳಿದಿತ್ತು. ತಾವು ಅಲ್ಲಿಂದ ಪಾರಾಗುವುದನ್ನು ಯೋಚಿಸುವ ಬದಲು, ಪಕ್ಕದಲ್ಲೇ ಇದ್ದ ಒಂದು ಎತ್ತರವಾದ ತೆಂಗಿನಮರವನ್ನೇರಿ ಕುಳಿತ ನಾವಿಕ, ಎಂಟು ದಿಕ್ಕಿಗೂ ಕೇಳಿಸುವಂತೆ, ಆದರೆ ಮಲಗಿದ ಅವರಿಬ್ಬರನ್ನು ನೋಡುತ್ತ, "ದಯವಿಟ್ಟು, ಇಬ್ಬರೂ ಕಾಮಕೇಳಿಯಲ್ಲಿ ತೊಡಗಬೇಡಿ, ಅದಕ್ಕೆ ಇದು ಸಮಯವಲ್ಲ" ಎಂದು ಗಟ್ಟಿಯಾಗಿ ಕೂಗಿದ.
ಗಂಡ ಹೆಂಡತಿಯರಿಬ್ಬರೂ ದಿಗಿಲಿನಿಂದ ಎದ್ದರು. ನಾವಿಕ ಕೂಗುತ್ತಿರುವುದನ್ನು ಕೇಳಿ, ಗಂಡ, "ಯಾಕೆ ಹಾಗೆ ಕೂಗ್ತಿದ್ದಿಯಾ? ನಾವೇನು ಹಾಗೆ ಮಾಡ್ತಿಲ್ಲ, ನೋಡಿಲ್ಲಿ!" ಎಂದು ತಾನೂ ಗಟ್ಟಿಯಾಗಿ ಕೂಗಿದ.
ಅದಕ್ಕೆ ನಾವಿಕ, "ದಯವಿಟ್ಟು ಕ್ಷಮಿಸು, ತುಂಬಾ ಎತ್ತರದ ಮೇಲಿದ್ದೆನಲ್ಲ, ನೀವಿಬ್ಬರೂ ಸಂಭೋಗಿಸುತ್ತಿರುವ ಹಾಗೆ ಕಂಡಿತು. ಬೇಜಾರು ಮಾಡಿಕೋಬೇಡಿ" ಎಂದು ಅಲ್ಲಿಂದಲೇ ಕೂಗಿ ಹೇಳಿದ. ಕೆಳಗಿಳಿದು ಬರಲು ಆತನಿಗೆ ಅರ್ಧಗಂಟೆ ಹಿಡಿಯಿತು. ಯಾಕೋ ಸುಂದರಿ ಮುಸಿಮುಸಿ ನಗುತ್ತಿದ್ದಳು.
ಪ್ರತಿದಿನ ಬೆಳಗಾಗುತ್ತಿದ್ದಂತೆ ನಾವಿಕನದು ಇದೇ ಕೆಲಸವಾಯಿತು. ಅಲ್ಲಿ ಮೇಲಿಂದ ನಾವಿಕ ಗಟ್ಟಿಯಾಗಿ ಕೂಗೋನು, ಗಂಡ ನಾನು ಹಾಗೇನು ಮಾಡುತ್ತಿಲ್ಲ ಎಂದು ಉತ್ತರಿಸೋದು. ಪಕ್ಕದಲ್ಲಿದ್ದ ಸುಂದರಿ ಮುಸಿಮುಸಿ ನಗೋದು ನಡೆಯುತ್ತಲೇ ಇತ್ತು.
ಒಂದು ದಿನ ಗಂಡ, ಅದ್ಯಾಕೆ ಹಾಗೆ ಕಾಣ್ತದೆ ನೋಡೇ ಬಿಡೋಣ ಅಂತ ಎತ್ತರವಾದ ತೆಂಗಿನಮರ ಏರಿದ. ಏರಲು ಆತನಿಗೆ ಕನಿಷ್ಠ ಅರ್ಧಗಂಟೆ ಬೇಕಾಯಿತು. ಆಗ ಆತನಿಗೆ, ನಾವಿಲ್ಲಿ ಏನೂ ಮಾಡದಿದ್ದರೂ ನಾವಿಕ ಹೇಳಿದ್ದು ನಿಜ ಎಂದು ಅನಿಸಲು ಶುರುವಾಯಿತು. ತನ್ನಷ್ಟಕ್ಕೆ ತಾನೇ ಅಂದುಕೊಂಡ, "ಹೌದಲ್ಲ, ಅಲ್ಲಿ ಅವರೇನೂ ಮಾಡದೇ ಇದ್ದರೂ ಇಲ್ಲಿ ಅವರಿಬ್ಬರು ಕಾಮಕೇಳಿಯಲ್ಲಿ ತೊಡಗಿದ ಹಾಗೆ ಕಾಣತ್ತೆ!"
ಈ ಸುಂದರಿ ಮತ್ತು ಆಕೆಯ ಪೆದ್ದ ಗಂಡನ ಹೆಸರು ಹೇಳಿ ನೋಡೋಣ? [ಗೊತ್ತಾಗ್ಲಿಲ್ಲ ಅಂದ್ರೆ ಈ ಜೋಕ್ಸ್ ಓದಿರಿ]











Click it and Unblock the Notifications