ಬೆವರು ಬರಿಸಿಕೊಂಡಿದ್ದ ಗಂಡ, ಪೆಕ್ರನಂತೆ ನಕ್ಕಿದ್ದ

ಹೊರಗಡೆ ರಪರಪನೆ ಮಳೆ ಸುರಿಯುತ್ತಿತ್ತು, ಕಿಟಕಿಯಂಚಿನಿಂದ ಸುಯ್ಯನೆ ಗಾಳಿ ತೂರಿಕೊಂಡು ಬರುತ್ತಿತ್ತು, ಪರದೆಯೊಡನೆ ಗಾಳಿಯ ಸರಸ ಅವ್ಯಾಹತವಾಗಿ ಸಾಗಿತ್ತು. ಗೋಡೆಯಲ್ಲಿ ಜೀರೋ ಬಲ್ಬ್ ಕಣ್ಣು ಹೊಡೆಯುತ್ತ ಬಣ್ಣಗಳನ್ನು ಬದಲಿಸುತ್ತಿತ್ತು. ಮಂಚ ಕಿರಕಿರನೆ ಸದ್ದು ಮಾಡಿತ್ತು ತಾನಿನ್ನೂ ಮಲಗಿಲ್ಲ ಎಂದು ಸಾರುತ್ತಿತ್ತು. ಹೊರಜಗತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗಣನೆಗೆ ಕೂಡ ತೆಗೆದುಕೊಳ್ಳದೆ ಗಂಡ-ಹೆಂಡತಿಯ ರಸಾಸ್ವಾದ ಮುಂದುವರಿದಿತ್ತು.

ಇದ್ದಕ್ಕಿದ್ದಂತೆ ಧಿಡಿಗ್ಗನೆ ಬಾಗಿಲು ತೆರೆದುಕೊಂಡಿತು. ಮಂಚದ ಮೇಲೆ 'ಈ ಸಮಯ ಸರಸಮಯ' ಎಂದು ಹಾಡುತ್ತ ಪ್ರಣಯಕೇಳಿಯಲ್ಲಿ ತೊಡಗಿದ್ದ ದಂಪತಿ ಕಕ್ಕಾಬಿಕ್ಕಿಯಾಗಿದ್ದರು. ಬಾಗಿಲ ಬಳಿಯಲ್ಲಿ ಹದಿಮೂರರ ಹರೆಯದ ಮಗಳು ನಿಂತಿದ್ದಳು. ಕರೆಂಟು ಹೋದ ಕೂಡಲೆ ಫ್ಯಾಕ್ಟರಿಯ ಮಷೀನು ನಿಂತಂತೆ ಇವರ ಕ್ರಿಯೆಯೂ ನಿಂತಿತ್ತು.

ಮಗಳ ಅಮ್ಮ ತನ್ನ ಮುಜುಗರವನ್ನು ತೋರಿಸಿಕೊಳ್ಳದೆ, "ಯಾಕ್ ಸ್ವೀಟಿ ಯಾಕ್ ಎದ್ ಬಂದಿ? ಕೆಟ್ಟ ಕನಸು ಬಿತ್ತಾ ಪುಟ್ಟೀ? ಹೋಗಿ ಮಲಕ್ಕೋ ಚಿನ್ನು, ರಾತ್ರಿ ತುಂಬಾ ಆಗಿದೆ" ಎಂದು ಗಂಡನ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ತಿರುಗಿಕೊಂಡು ಉಸುರಿದ್ದಳು. ಗಂಡ ತುಟಿ ಪಿಟಕ್ ಅಂದಿರಲಿಲ್ಲ.

ಇನ್ನೂ ನಿದ್ದೆಗಣ್ಣಿನಲ್ಲಿದ್ದ ಮಗಳಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದಿರಲಿಲ್ಲ, "ಏನು ಮಾಡ್ತಿದ್ದಿಯಾ ಮಮ್ಮಿ?" ಎಂದು ಕಣ್ಣುಜ್ಜುತ್ತಾ ನಿಂತಲ್ಲಿಯೇ ನಿಂತು ಕೇಳಿ, ಇನ್ನೇನು ಲೈಟ್ ಸ್ವಿಚ್ ಆನ್ ಮಾಡಬೇಕು, ಅಮ್ಮ ಚಿಟ್ಟನೆ ಕಿರುಚಿದಳು.

"ಲೈಟ್ ಹಾಕ್ಬೇಡ ಪುಟ್ಟೀ, ಕಣ್ಣಿಗೆ ಕುಕ್ಕುತ್ತೆ. ಇಲ್ಲಿ ಏನಿಲ್ಲ, ನಿಮ್ಮಪ್ಪನಿಗೆ ಹೊಟ್ಟೆ ಜಾಸ್ತಿ ನೋಡು. ಅದರ ಮೇಲೆ ಕುಳಿತು ಗುದ್ದಿಗುದ್ದಿ ಕರಗಿಸುತ್ತಿದ್ದೇನೆ. ಗುಡ್ ನೈಟ್ ಪುಟ್ಟಾ, ಲವ್ ಯೂ ಸ್ವೀಟಿ" ಎಂದು ಮಗಳನ್ನು ಮರಳಿ ಕಳಿಸಲು ಯತ್ನಿಸಿದಳು.

ಮಗಳು ಕೇಳಬೇಕಲ್ಲ, ಬಲು ತುಂಟಿ. "ಓ ಹೌದಾ, ನೀನು ಜಾಸ್ತಿ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ" ಎಂದಿದ್ದಳು ಮಗಳು.

ಅಮ್ಮ ಅಚ್ಚರಿಯಿಂದ, "ಯಾಕ್ ಪುಟ್ಟಾ, ಯಾಕೆ ಹಾಗೆ ಹೇಳ್ತಿದ್ದೀಯಾ?" ಎಂದು ಏನೂ ತಿಳಿಯದೆ ಕೇಳಿದಳು.

"ನೀನು ಬೆಳಿಗ್ಗೆ ತಿಂಡಿ ಮುಗಿಸಿ ಕೆಲಸಕ್ಕೆ ಹೋಗ್ತೀಯಲ್ಲ, ಪಕ್ಕದ ಮನೆ ಆಂಟಿ ಬಂದು ಅಪ್ಪನ ಹೊಟ್ಟೆ ಕರಗಿಸುವ ಕೆಲಸ ಪ್ರತಿದಿನ ಮಾಡ್ತಿದ್ದಾಳೆ" ಎಂದು ಹೇಳುತ್ತಲೇ ತನ್ನ ಕೋಣೆಗೆ ದೌಡಾಯಿಸಿದ್ದಳು. ನಿಗಿನಿಗಿ ಕೆಂಡ ಕಾರುತ್ತಿದ್ದ ಹೆಂಡತಿಯ ಮುಖ ಗಂಡನ ಕಡೆ ತಿರುಗಿತ್ತು. ಬೆವರು ಬರಿಸಿಕೊಂಡಿದ್ದ ಗಂಡ, ಪೆಕ್ರನಂತೆ ನಕ್ಕಿದ್ದ. [ಗಂಡ ಹೆಂಡತಿ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+