ರೀ, ನೀವು ಬೇಕಿದ್ರೆ ಆಪರೇಶನ್ ಮಾಡಿಸ್ಕೊಳ್ಳಿ!

ಮಹಾನ್ ಶ್ರೀಮಂತ ದಂಪತಿಗಳಿಬ್ಬರು ತಮ್ಮ ಒಬ್ಬೇ ಒಬ್ಬ ಮಗನ ಮೊದಲನೇ ಹುಟ್ಟುಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಕೇಕ್ ಕಟಿಂಗ್, ಪಾರ್ಟಿ, ರಾತ್ರಿ ಊಟ ಎಲ್ಲ ಮುಗಿದ ಮೇಲೆ ಉಸ್ಸಂತ ಮನೆಗೆ ಮರಳಿದ ದಂಪತಿಗಳು ಸುಸ್ತಾಗಿದ್ದ ಮಗನನ್ನು ಹಾಸಿಗೆಯ ಮೇಲೆ ಮಲಗಿಸಿ ಏನೇನು ಗಿಫ್ಟ್ ಬಂದಿದೆ ನೋಡೋಣ ಎಂದು ಕುಳಿತರು.

ನೈಟಿಯಲ್ಲಿ ಕುಳಿತಿದ್ದ ಹೆಂಡತಿಯ ಹೆಗಲಿನ ಮೇಲೆ ಕೈಹಾಕಿದ ಗಂಡ, "ಡಾರ್ಲಿಂಗ್, ನಮಗೆ ಸಾಕಷ್ಟು ಶ್ರೀಮಂತಿಕೆಯಿದೆ. ದೇವರು ಹ್ಯಾಗಿದ್ರೂ ಒಬ್ಬ ವಂಶೋದ್ಧಾರಕನನ್ನು ನೀಡಿದ್ದಾನೆ. ಇನ್ನೇನು ಬೇಕು? ನೀನು ಯಸ್ ಅಂದ್ರೆ ನಾಳೆನೇ ಹೋಗಿ ವ್ಯಾಸೆಕ್ಟಮಿ ಆಪರೇಷನ್ ಮಾಡಿಸಿಕೊಂಡು ಬಿಡುತ್ತೇನೆ, ಏನಂತೀಯಾ" ಅಂತ ಗಲ್ಲದ ಮೇಲೆ ಮೆಲ್ಲಗೆ ಚುಂಬಿಸಿದ.

ಥಟ್ಟನೆ ಕೊಸರಿಕೊಂಡು ದೂರಸರಿದ ಹೆಂಡತಿ, "ನೀವು ಬೇಕಾದ್ರೆ ವ್ಯಾಸೆಕ್ಟಮಿಯಾದ್ರೂ ಮಾಡಿಸಿಕೊಳ್ಳಿ, ಗೀಸೆಕ್ಟಮಿಯಾದ್ರೂ ಮಾಡಿಸಿಕೊಳ್ಳಿ. ನನ್ನದೇನೂ ಅಭ್ಯಂತರವಿಲ್ಲ. ಆದರೆ, ನಾನು ಮಾತ್ರ ಮೂರು ಮಕ್ಕಳು ಆದ ಮೇಲೆಯೇ ಟ್ಯೂಬೆಕ್ಟಮಿ ಮಾಡಿಸಿಕೊಳ್ಳುವುದು!"

***
ಇಬ್ಬರು ಸ್ನೇಹಿತರು ಊರ ಹೊರಗಿನ ಅರಳಿ ಕಟ್ಟೆಯ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದರು. ಒಬ್ಬ ಯಾಕೋ ಮ್ಲಾನವದನನಾಗಿ ಕುಳಿತಿದ್ದ. ಇನ್ನೊಬ್ಬನಿಗೆ ಪಿಚ್ ಅನ್ನಿಸಿ ಏನಾಯಿತೆಂದು ವಿಚಾರಿಸಿದ.

ಒಬ್ಬ : ನಿನ್ನೆ ನನಗೂ ನನ್ನ ಹೆಂಡತಿಗೂ ಭಾರೀ ಜಗಳವಾಯಿತು. ನನ್ನ ಸಿಕ್ಕಾಪಟ್ಟೆ ಅವಮಾನ ಮಾಡಿಬಿಟ್ಟಳು.

ಮತ್ತೊಬ್ಬ : ಹೌದಾ, ಏನಾಯಿತೆಂದು ವಿವರವಾಗಿ ಹೇಳು.

ಒಬ್ಬ : ಏನೋ ಮಾತು ಬಂದು, ಹಾಸಿಗೆಯ ಮೇಲೆ ಕುಳಿತಿದ್ದಾಗ ವಾಗ್ವಾದ ಶುರುವಾಯಿತು. ಕಡೆಗೆ, ಹಾಸಿಗೆ ಹೊರಗೆ ಜಿಗಿದ ಆಕೆ, 'ನೀನು ನಿಜವಾದ ಗಂಡಸೇ ಆಗಿದ್ದರೆ ಹಾಸಿಗೆ ಹೊರಗೆ ಬಂದು ವಾದ ಮಾಡು' ಅಂದುಬಿಟ್ಳು ಕಣ್ಲಾ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+