ಕನಿಷ್ಠ ವೀಕೆಂಡಾದರೂ ಶಾಂತವಾಗಿರಬಾರದಾ? ಥುತ್
ರಾಜಾ ತನ್ನ ಹೆಂಡತಿ ರಾಣಿಯನ್ನು ವಿಪರೀತ ಪ್ರೀತಿಸುತ್ತಿದ್ದ, ಸಿಕ್ಕಾಪಟ್ಟೆ ಹಚ್ಚಿಕೊಂಡುಬಿಟ್ಟಿದ್ದ, ಕಣ್ಣಲ್ಲಿ ಕಣ್ಣಿಟ್ಟು ಆಕೆಯನ್ನು ನೋಡಿಕೊಂಡಿದ್ದ, ಆಕೆಯ ಎಲ್ಲ ಬೇಕುಬೇಡಗಳನ್ನು ಪೂರೈಸಿದ್ದ, ಯಾವುದಕ್ಕೂ ಕೊರತೆಯಾಗದೇತೆ ನೋಡಿಕೊಂಡಿದ್ದ, ವಿಪರೀತ ಅಟ್ಯಾಚ್ಮೆಂಟ್ ಬೆಳೆಸಿಕೊಂಡುಬಿಟ್ಟಿದ್ದ. ಈ ಅಟ್ಯಾಚ್ಮೆಂಟೇ ಆತನನ್ನು ತೀವ್ರ ದುಃಖದ ಮಡುವಿನಲ್ಲಿಯೂ ದೂಡಿಬಿಟ್ಟಿತು.
ರಾಜಾ ತನ್ನ ಹೆಂಡತಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ. ಇದಕ್ಕೆ ಕಾರಣ ತನ್ನ ಮುದ್ದಿನ ಹೆಂಡತಿ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಆರೋಪ. ವಿಪರೀತ ದುಃಖಿತನಾಗಿದ್ದ ರಾಜಾ ಅರ್ಜಿ ಸಲ್ಲಿಸುವ ಮುನ್ನ ಗೊಳೋ ಎಂದು ಅತ್ತಿದ್ದ. ಒಂದು ದಿನ ವಿಚ್ಛೇದನ ಅರ್ಜಿ ವಿಚಾರಣೆಗೆ ಕೋರ್ಟಿನಲ್ಲಿ ಬಂದೇ ಬಿಟ್ಟಿತು. ವಕೀಲರು ವಿಚಾರಣೆ ಶುರು ಮಾಡಿದರು.
ವಕೀಲ : ರಾಜಾ ಅವರೆ, ವಿಚ್ಛೇದನ ಅರ್ಜಿ ಸಲ್ಲಿಸಲು ಪ್ರಮುಖ ಕಾರಣವೇನು ವಿವರವಾಗಿ ಹೇಳಿರಿ.
ರಾಜಾ : ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದೆ, ಸಿಕ್ಕಾಪಟ್ಟೆ ಆಕೆ ಬಗ್ಗೆ ಪೊಸೆಸೀವ್ ಆಗಿದ್ದೆ.
ವಕೀಲ : ದಟ್ಸಾಲ್ರೈಟ್ ಮುಂದೆ ಹೇಳಿ.
ರಾಜಾ : ನಾನು ಆಗಾಗ ಕೆಲಸದ ಮೇಲೆ ಊರು ಬಿಟ್ಟು ಹೋಗುತ್ತಿರುತ್ತೇನೆ. ವಾಪಸ್ ಬಂದ ಮೇಲೆ ಒಂದು ವಾರದ ಪ್ರೀತಿಯನ್ನೆಲ್ಲ ಒಂದೇ ಬಾರಿಗೆ ಧಾರೆ ಎರೆಯುತ್ತೇನೆ.
ವಕೀಲ : ಅದೆಲ್ಲ ಸರಿ, ಪಾಯಿಂಟಿಗೆ ಬನ್ನಿ.
ರಾಜಾ : ಭಾನುವಾರ ಮರಳಿ ಬಂದವನೆ, ನನ್ನ ಪ್ರೀತಿಯ ಮುದ್ದಿನ ಮಡದಿಯ ಜೊತೆ ಇನ್ನೂ ರಾತ್ರಿಯಾಗಿಲ್ಲ ಎಂಬುದನ್ನೂ ಯೋಚಿಸದೆ ಮಿಲನ ಮಹೋತ್ಸವದಲ್ಲಿ ತೊಡಗಿದ್ದೆ.
ವಕೀಲ : ಆಹಾ, ಮುಂದೇನಾಯ್ತು ಹೇಳಿ.
ರಾಜಾ : ವೀಕೆಂಡಲ್ವಾ ಅಂತಹ ಗಲಾಟೆ ಇರಲಿಲ್ಲ. ಅಕ್ಕಪಕ್ಕ ಎಲ್ಲವೂ ಪ್ರಶಾಂತವಾಗಿತ್ತು. ಅಷ್ಟರಲ್ಲಿ ಪಕ್ಕದ ಮನೆ ಹೆಂಗಸು ಬಾಯಿ ಶುರುಮಾಡಿದಳು ನೋಡಿ.
ವಕೀಲ : ಏನಂದಳು ಪಕ್ಕದ್ಮನೆ ಹೆಂಗಸು?
ರಾಜಾ : 'ವಾರದಿಂದ ಬರೀ ಮಂಚದ್ದೇ ಕಿರಿಕಿರಿ ಶಬ್ದ. ಕನಿಷ್ಠಪಕ್ಷ ವೀಕೆಂಡಾದರೂ ಕಿರಿಕಿರಿ ಇಲ್ಲದೆ ನೆಮ್ಮದಿಯಿಂದ ಇರೋಕೆ ಬಿಡಬಾರದಾ? ಥುತ್' ಅಂದಳು! [ರಾಣಿಗೆ ಮಿಸೆಸ್ ಲಿಲ್ಲಿಗೂ ಏನು ವ್ಯತ್ಯಾಸ?]












Click it and Unblock the Notifications