ರಕ್ತ ಪರೀಕ್ಷೆ ಆಗುತ್ತಲೇ ಗುಂಡ ಕುಣಿದಾಡಿದ್ದೇಕೆ?
ಗುಂಡ ರಕ್ತ ಪರೀಕ್ಷೆ ಮಾಡಿಸಿಕೊಳ್ಳೋಕೆ ಡಾಕ್ಟರ್ ತಿಮ್ಮನ ಕ್ಲಿನಿಕ್ಕಿಗೆ ಹೋಗ್ತಾನೆ. ಅಲ್ಲಿ ಮಿನಿ ತೊಟ್ಟಿದ್ದ ಸುಂದರವಾದ ನರ್ಸ್ ಗುಂಡನ ಕೈಯನ್ನು ತನ್ನ ಮುಷ್ಠಿಯಲ್ಲಿ ಹಿಡಿದುಕೊಂಡು ರಕ್ತ ತೆಗೀತಾಳೆ. ರಕ್ತ ಪರೀಕ್ಷೆ ಆದ ಮೇಲೆ ಗುಂಡ ಖುಷೀಲಿ ಒಂದೇ ಸಮನೆ ಡ್ಯಾನ್ಸ್ ಮಾಡೋಕೆ ಶುರು ಮಾಡ್ತಾನೆ.
ನರ್ಸ್ : ಯಾಕ್ರೀ, ಯಾಕೆ ಡ್ಯಾನ್ಸ್ ಮಾಡ್ತಾ ಇದ್ದೀರಾ?
ಗುಂಡ : ಬ್ಲಡ್ ಟೆಸ್ಟ್ ಆಯ್ತಲ್ಲ.. ಇನ್ನು ಮುಂದೆ ಯುರಿನ್ ಟೆಸ್ಟ್!
ನರ್ಸ್ : ಥೂ ಪೋಲಿ.
***
ಗುಂಡ ಮತ್ತು ತಿಮ್ಮ ಇಬ್ಬರ ಸಂಸಾರ ಬೇಸಿಗೆ ರಜೆಗೆ ಊರಿಗೆ ಹೋಗಿರ್ತಾರೆ. ಇಬ್ಬರಿಗೂ ತಡೆಯೋಕೆ ಆಗದೆ ವೇಶ್ಯೆಯ ಮನೆಗೆ ಹೋಗ್ತಾರೆ.
ಗುಂಡ ಮೊದಲು ಆಕೆಯ ರೂಮಿಗೆ ಹೋಗಿ ಸ್ವಲ್ಪ ಹೊತ್ತಿನ ನಂತರ ಹೊರಬಂದು "ಅಯ್ಯೋ ನನ್ನ ಹೆಂಡ್ತೀನೇ ಇವಳಿಗಿಂತ ಪರವಾಗಿಲ್ಲಾ".
ನಂತರ ತಿಮ್ಮ ಆಕೆಯ ರೂಮಿಗೆ ಹೋಗಿ ಸ್ವಲ್ಪ ಹೊತ್ತಿನ ನಂತರ ಹೊರಬಂದು, "ಗುಂಡ ನೀನು ಹೇಳೋದು ಸರಿ.. ನಿನ್ನ ಹೆಂಡ್ತೀನೇ ಇವಳಿಗಿಂತ ವಾಸಿ ಕಣೋ."
***
ಗುಂಡ ಮನೆ ಕೆಲಸದಾಕೆಯನ್ನು ಮೋಹಿಸುತ್ತಾ...
ಗುಂಡ : "ನೀನು ನನ್ನ ಹೆಂಡತಿಗಿಂತ ಬಹಳ ಸ್ವೀಟ್, ಅವಳಿಗಿಂತ ಚೆನ್ನಾಗಿದ್ದೀಯಾ."
ಮನೆಕೆಲಸದಾಕೆ : "ಹೌದಾ.. ನಿಮ್ ಡ್ರೈವರ್ ಹತ್ರ ನಿಮ್ ಹೆಂಡ್ರು 'ನನ್ ಗಂಡನಿಗಿಂತ ನೀನೆ ಚೆನ್ನಾಗಿದ್ದೀಯಾ' ಅಂತ ಹೇಳ್ತಾ ಇದ್ರಂತೆ ಬುದ್ದಿ"












Click it and Unblock the Notifications