ಯಾವೋನೋ ಅವನು ಬಾಗಿಲು ಬಡೀತಿರೋದು, ಥತ್!
ಚರ್ಚಿನ ಪಾದ್ರಿ ಒಂದು ದಿನ ಪ್ರೇಯರ್ ಮುಗಿಸಿ ಇನ್ನೇನು ತೆರಳುವವರಿರುತ್ತಾರೆ, ದಿಢೀರನೆ ಓರ್ವ ಯೌವನ ತುಂಬಿರುವ ಯುವತಿ ಚರ್ಚೊಳಗೆ ಓಡೋಡಿ ಬರುತ್ತಾಳೆ. ಆಕೆ ಓಡಿಬಂದ ಧಾವಂತಕ್ಕೆ, ಏದುಸಿರನ್ನು ನೋಡಿದ ಪಾದ್ರಿ ಕ್ಷಣಕಾಲ ಸುಧಾರಿಸಿಕೊಳ್ಳು ಎಂದು ಆಕೆಯ ಬೆನ್ನು ಸವರುತ್ತಾರೆ. ಆಕೆಯನ್ನು ನೋಡಿ ಪಾದ್ರಿಯೂ ಕ್ಷಣಕಾಲ ವಿಚಲಿತರಾಗಿಬಿಡುತ್ತಾರೆ.
ಏರಿಳಿತ ನಿಂತಮೇಲೆ ಆಕೆ ಪಾದ್ರಿಗೆ ಹೇಳುತ್ತಾಳೆ, "ಫಾದರ್, ನಾನೊಂದು ಮಾಡಬಾರದ ತಪ್ಪು ಮಾಡಿಬಿಟ್ಟೆ. ಜೀಸಸ್ ಎದಿರು ನಾನು ಆ ತಪ್ಪನ್ನು ಒಪ್ಪಿಕೊಂಡು ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೆಂದಿದ್ದೇನೆ ಫಾದರ್, ದಯವಿಟ್ಟು ಅವಕಾಶ ಮಾಡಿಕೊಡಿ" ಅಂತ ಹೇಳುತ್ತಾಳೆ.
"ನೋ ಪ್ರಾಬ್ಲಂ" ಅಂತ ಹೇಳಿ ಆಕೆಯನ್ನು ತಪ್ಪೊಪ್ಪಿಕೊಳ್ಳುವ ಬಾಕ್ಸಿಗೆ ಕರೆದೊಯ್ಯುತ್ತಾರೆ. ಚರ್ಚಿನಲ್ಲೆಲ್ಲ ಶಾಂತಿಯೋ ಶಾಂತಿ. ಸೂಜಿ ಬಿದ್ದರೂ ಶಬ್ಧವಾಗುವಷ್ಟು ಶಾಂತಿ ನೆಲೆಸಿರುತ್ತದೆ. ಪಾದ್ರಿ ಆಕೆಯ ಮಾತನ್ನು ಆಲಿಸೋಣವೆಂದು ಆಕೆಯೆಡೆಗೆ ಬಾಗುತ್ತಾರೆ.
ಆಕೆ, "ಒಂದು ಸಂಜೆ, ಧೋಧೋ ಮಳೆ ಸುರಿಯುತ್ತಿತ್ತು. ಆಗ ನಾನು ಮತ್ತು ನನ್ನ ಸೋದರತ್ತೆಯ ಮಗ ಇಬ್ಬರೇ ಇದ್ದವು. ಆಗ..."
"ಮುಂದೇನಾಯಿತು ಹೇಳು ಮಗು..."
"ನೆಂದು ಬಂದಿದ್ದ ನಾನು ಬಟ್ಟೆ ಬದಲಾಯಿಸುತ್ತಿದ್ದೆ. ಆತ ನನ್ನನ್ನೇ ತಿಂದುಬಿಡುವಂತೆ ನೋಡುತ್ತಿದ್ದ. ಆಗ..."
"ಮುಂದೇನಾಯಿತು ವಿವರವಾಗಿ ಹೇಳು ಮಗು..."
"ಆತ ಹಿಂದಿನಿಂದ ಬಂದು ನಿಧಾನವಾಗಿ ನನ್ನ ಹೆಗಲ ಮೇಲೆ ಕೈ ಹಾಕಿದ. ಆಗ..."
"ಮುಂದೇನಾಯಿತು ಹೇಳು ಮಗು, ಹೆದರಬೇಡ..." (ಪಾದ್ರಿಯ ದನಿಯೂ ಸ್ವಲ್ಪ ತಾಳತಪ್ಪಿದಂತಿತ್ತು.)
"ನಾನು ಸುತ್ತಿಕೊಂಡಿದ್ದ ಟವಲ್ಲನ್ನು ಆತ ಕಿತ್ತು ಎಸೆದ. ಆತನೂ ವಿವಸ್ತ್ರನಾಗಿದ್ದ, ಆಗ..."
"(ಸುದೀರ್ಘವಾಗಿ ಉಸಿರೆಳೆದುಕೊಂಡು) ಓಕೆ ಓಕೆ, ಮುಂದೇನಾಯಿತು ಹೇಳು ಮಗು..."
"(ನಾಚಿಕೆಯಿಂದ) ಆತ, ಆತ ನನ್ನ ಎತ್ತಿಕೊಂಡು ಹೋಗಿ ಹಾಸಿಗೆಯ ಮೇಲೆ ಮಲಗಿಸಿದ, ಇನ್ನೇನು..."
"ಮು..ಮು..ಮುಂದೇನಾಯಿತು ಹೇಳು ಮಗು..."
ಆಗ ಇದ್ದಕ್ಕಿದ್ದಂತೆ ಚರ್ಚಿನ ಬಾಗಿಲನ್ನು ಧಬಧಬನೆ ಬಡಿದ ಸದ್ದಾಯಿತು.
"ಏಯ್, ಯಾವೋನೋ ಅವನು ಬಾಗಿಲು ಬಡೀತಿರೋದು, ಥತ್!"












Click it and Unblock the Notifications