ಅಂದ ಹಾಗೆ, ನಿಮ್ಮೆಜಮಾನ್ರು ಮನೇಲಿ ಇರ್ತಾರಾ?
ಹೈ ಸೊಸೈಟಿ ಸ್ಲೀವ್ಲೆಸ್ ಬ್ಲೌಸ್ ಗೆಳತಿಯರಿಬ್ಬರು ಕ್ಲಬ್ಬಿನಲ್ಲಿ ವೋಡ್ಕಾ ಹೀರಿಕೊಂಡು ಕುಳಿತಿರುತ್ತಾರೆ, ಅವರಿಬ್ಬರ ಬೆರಳ ತುದಿಯಿಂದ ಹೊಗೆ ಸುರುಳಿಸುರುಳಿಯಾಗಿ ಗಾಳಿಗೆ ತಕ್ಕಂತೆ ಲಾಸ್ಯವಾಡುತ್ತಿರುತ್ತದೆ. ಒಬ್ಬಾಕೆ ತನ್ನದೇ ಲೋಕದಲ್ಲಿ ಮುಳುಗಿದ್ದರೆ ಮತ್ತೊಬ್ಬಳು ಯಾಕೋ ಚಿಂತಾಕ್ರಾಂತಳಾಗಿರುತ್ತಾಳೆ.
ಆಕೆ ಹಾಗಿದ್ದುದನ್ನು ಇನ್ನೊಬ್ಬಾಕೆ ಎಂದೂ ನೋಡಿದ್ದಿಲ್ಲ. ಯಾವಾಗಲೂ ಜೋವಿಯಲ್ಲಾಗಿ ಇದ್ದೋಳು ಇಂದು ಯಾಕೋ ಅನ್ಯಮನಸ್ಕಳಂತೆ ಕಂಡುಬರುತ್ತಾಳೆ.
ಇನ್ನೊಬ್ಬಾಕೆ : ಯಾಕ್ರೀ ಏನಾಯ್ತು, ಒಂಥರಾ ಇದ್ದೀರಾ? ಪಪ್ಪಿ ಡಾಗ್ ಏನಾದ್ರೂ ತಂಟೆ ಮಾಡ್ತಾ? ಮಗಳು ನೀವು ಹೇಳಿದ ಹುಡುಗನೊಂದಿಗೆ ಡೇಟಿಂಗ್ ಮಾಡ್ತಿಲ್ವಾ? ರಾತ್ರಿ ಓವರ್ ಡೋಸ್ ಆಯ್ತಾ? ಅಥವಾ ಗಂಡ ಮನೇಲೇ ಇದ್ದಾರಾ?
ಆಕೆ : ಹಾಗೇನಿಲ್ರಿ. ಪಪ್ಪಿದೇನೂ ತೊಂದ್ರೆಯಿಲ್ಲ. ಮಗಳ ಡೇಟಿಂಗ್ ಪ್ಲಾಬ್ಲೆಮ್ಮೇ ಅಲ್ಲ. ಇನ್ನು ರಾತ್ರಿ ನಥಿಂಗ್ ಹ್ಯಾಪನ್ಡ್ ಲೈಕ್ ದಟ್. ಇನ್ನು ಗಂಡ ಇದ್ರೂ ಅಷ್ಟೆ ಇಲ್ಲದಿದ್ದರೂ ಅಷ್ಟೆ. ಆದ್ರೆ, ಯಾಕೋ ಗೊತ್ತಿಲ್ಲ ತೀವ್ರ ತಲೆನೋವು. ಹೋಗ್ತಾನೆ ಇಲ್ಲ.
ಇನ್ನೊಬ್ಬಾಕೆ : ಮೈ ಗಾಡ್, ಅಷ್ಟೇನಾ. ನನಗೆ ತಲೆನೋವು ಬಂದ್ರೆ ಏನು ಮಾಡ್ತೀನಿ ಗೊತ್ತಾ? ನನ್ನ ಗಂಡನ ಸಹಾಯ ತೆಗೆದುಕೊಳ್ಳುತ್ತೇನೆ. ನನ್ನ ತಲೆನೋವಿಗೆ ಅವರೇ ಬಾಮ್.
ಆಕೆ : (ಆಶ್ಚರ್ಯದಿಂದ) ಗಂಡನ ಸಹಾಯಾನಾ?
ಇನ್ನೊಬ್ಬಾಕೆ : ಯಸ್. ಅವರೇನು ಮಾಡ್ತಾರೆ ಗೊತ್ತಾ? ಮೆಲ್ಲನೆ ಭುಜ ಕತ್ತು ಒತ್ತಲು ಆರಂಭಿಸುತ್ತಾರೆ. ನಂತರ ನನ್ನನ್ನು ಬೋರಲು ಮಲಗಿಸಿ ಬೆನ್ನ ಮೇಲೆ ಆಯಿಲ್ ಮಸಾಜ್ ಮಾಡಲು ಪ್ರಾರಂಭಿಸುತ್ತಾರೆ. ಇದಾದ ನಂತರ ನನ್ನ ತಿರುಗಿಸಿ ಎದೆಯ ಮೇಲೆ ತಮ್ಮ ಆಟ ಶುರು ಮಾಡಿಕೊಳ್ಳುತ್ತಾರೆ. ನಿಧಾನವಾಗಿ ಚುಂಬಿಸುತ್ತ ಹೊಕ್ಕಳ ಮೇಲೆ ನವಿಲುಗರಿಯಿಂದ ನವಿರಾಗಿ... ಓ ಮೈ ಗಾಡ್... ಮುಂದೇನಾಗುತ್ತದೆಂದು ನಾನು ಹೇಳಬೇಕಾಗಿಲ್ಲ.
ಆಕೆ : (ಸೆಟೆದು ಕುಳಿತು) ವಾವ್, ನಾನೂ ಹಾಗೇ ಮಾಡಿಸಿಕೊಂಡ್ರೆ ತಲೆನೋವು ಮಾಯವಾಗಬಹುದು. ಅಂದ ಹಾಗೆ, (ನಾಚಿಕೆಯಿಂದ) ಈಗ ನಿಮ್ಮ ಯಜಮಾನ್ರು ಮನೇಲಿ ಇರ್ತಾರಾ?












Click it and Unblock the Notifications