ಯೂ ಸಿಲ್ಲಿ, ನಾನ್ಯಾವತ್ತೂ ಆಕ್ಷೇಪಣೆ ಮಾಡಿಲ್ಲ!
ಮೇನಕೆಯ ತಂಗಿಯಂತಿರುವ ಲವೀನಾಗೆ ಬ್ಲೈಂಡ್ ಡೇಟ್ ಮಾಡಬೇಕೆಂಬ ಆಸೆಯಾಗುತ್ತದೆ. ಅಕ್ಕ ಯಾಕೆ ಹುಡುಕುವುದು ಪಕ್ಕದಲ್ಲೇ ಇರುವ ದಿನೇಶನ ಜೊತೆ ಡೇಟಿಂಗ್ ಮಾಡಬೇಕೆಂಬ ತೀರ್ಮಾನಕ್ಕೆ ಬರುತ್ತಾಳೆ. ಅದನ್ನು ಒನ್ ಫೈನ್ ಡೇ ದಿನೇಶನಿಗೂ ಹೇಳುತ್ತಾಳೆ. ಲವೀನಾಳಂಥ ಸ್ಟನ್ನಿಂಗ್ ಬ್ಯೂಟಿ ಡೇಟಿಂಗ್ ಕೇಳಿದರೆ ಇಲ್ಲವೆನ್ನಲು ಆಗುತ್ತದೆಯೆ? ಸೂಪರ್ ಹ್ಯಾಂಡ್ಸಮ್ ಆಗಿದ್ದ ದಿನೇಶ ಕೂಡ ಯಸ್ ಅಂದು ಹೇಳಿಬಿಟ್ಟ.
ಸರಿ, ತಿಂಗಳ ನಡುವಿನ ದಿನವೊಂದನ್ನು ಆಯ್ಕೆ ಮಾಡಿಕೊಂಡು ಲವೀನಾ ಮತ್ತು ದಿನೇಶ ಡೇಟಿಂಗಿಗೆ ಹೋಗುತ್ತಾರೆ. ಇಡೀ ದಿನ ಸಖತ್ ಮಜವಾಗಿ ಕಾಲ ಕಳೆಯುತ್ತಾರೆ. ಲವೀನಾ ಸಂಗದಲ್ಲಿ ಇಡೀ ದಿನ ಇದ್ದು ಇದ್ದು ಇದ್ದು ದಿನೇಶನಿಗೆ ಲವೀನಾ ಮೇಲೆ ಟ್ರೂ ಲವ್ ಆಗಿಬಿಡುತ್ತದೆ. ಕೈಕೈ ಹಿಡಿದುಕೊಂಡು ಅಡ್ಡಾಡಿದ್ದು ಸಾಕೆನಿಸಿ ಸೂರ್ಯ ಮುಳುಗುವ ಹೊತ್ತಿನಲ್ಲಿ ಒಮ್ಮೆ ತಬ್ಬಿಕೊಳ್ಳಬೇಕೆಂಬ ಆಸೆಯಾಗಿದೆ ಎಂದು ದಿನೇಶ ಹೇಳುತ್ತಾನೆ. ಅದೂ ಆಗುತ್ತದೆ.
ಕೆಲ ಹೊತ್ತು ಸ್ಪರ್ಶ ಸುಖ ಅನುಭವಿಸಿದ ನಂತರ ದಿನೇಶ, "ಡಾರ್ಲಿಂಗ್ ಲವೀನಾ, ಒಂದು ಮಾತು ಕೇಳಬೇಕೆಂದು ಅನಿಸ್ತಾ ಇದೆ. ಕೇಳಲಾ ಬೇಡವಾ?" ಎಂದು ಸಂದೇಹದಿಂದ ಕೇಳುತ್ತಾನೆ.
"ನೋ ಪ್ಲಾಬ್ಸ್ ಯಾ, ಕೇಳು, ಸಂಕೋಚ ಯಾಕೆ" ಅಂದು ಸ್ವೀಟಾಗಿ ಉಲಿದಳು.
"ಏನಿಲ್ಲ ಕಣೆ, ಕೈಕೈ ಹಿಡಿದುಕೊಂಡು ಇಡೀ ದಿನ ಓಡಾಡಿದ್ವಿ, ಒಂದು ಬಾರಿ ತಬ್ಬಿಕೊಂಡಿದ್ವಿ ಕೂಡ. ಈಗ ಒಂದು ರಾತ್ರಿ ಒಟ್ಟಿಗೆ ಕಳೆಯಲು ನಿನ್ನ ಆಕ್ಷೇಪಣೆ ಇಲ್ಲ ತಾನೆ?" ಎಂದು ಹಿಂಜರಿಯುತ್ತಲೇ ದಿಟ್ಟವಾಗಿ ಕೇಳಿದ.
"ನಾನು ನನ್ನ ಜೀವನದಲ್ಲಿ ಆ ತರ ಯಾವತ್ತೂ ಮಾಡಿಲ್ಲ" ಎಂದು ದಿನೇಶನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಳು ಲವೀನಾ.
"ಹೌದಾ, ನೀನು ಯಾವತ್ತೂ ಯಾರೊಂದಿಗೂ ಲವ್ ಮಾಡೇ ಇಲ್ವಾ? ಓಹ್, ಹಾಗಿದ್ರೆ ನೀನಿನ್ನೂ ಕನ್ಯೆ?" ಎಂದು ಪ್ರಶ್ನಾರ್ಥಕ ಚಿಹ್ನೆಯಾದ ದಿನೇಶ.
"ಯೂ ಸಿಲ್ಲಿ, ನಾನು ಹೇಳಿದ್ದು, ನಾನ್ಯಾವತ್ತೂ ಆಕ್ಷೇಪಣೆ ಮಾಡೇ ಇಲ್ಲ ಅಂತ" ಎಂದು ಹೇಳಿ ಲವೀನಾ ಕಣ್ಣು ಮುಟಿಕಿಸಿದಳು.












Click it and Unblock the Notifications