ಆರೋಗ್ಯವಂತ ರೋಗಿಗೆ ವೈದ್ಯರ ಚಿಕಿತ್ಸೆ
ಮಧ್ಯವಯಸ್ಕ ಮನುಜನೊಬ್ಬ ಒಂದು ದಿನ ಲೈಂಗಿಕ ತಜ್ಞ ವೈದ್ಯರ ಬಳಿಗೆ ಹೋಗುತ್ತಾನೆ. ಆತನ ಮುಖ ನಿಸ್ತೇಜವಾಗಿರುತ್ತದೆ, ವಿಶ್ವಾಸ ಕಳೆಗುಂದಿದಂತಿರುತ್ತದೆ. ವೈದ್ಯರು ಏನ್ ಸಮಾಚಾರ ಅಂತ ಗ್ರಾಹಕನನ್ನು ಕೇಳುತ್ತಾರೆ.
"ಏನಿಲ್ಲ ವೈದ್ಯರೆ, ಇತ್ತೀಚಿನ ದಿನಗಳಲ್ಲಿ ನಿಮಿರು ವೈಫಲ್ಯವನ್ನು ಅನುಭವಿಸುತ್ತಿದ್ದೇನೆ. ಜೀವನದಲ್ಲಿ ಆಸಕ್ತಿಯೇ ಹೋದಂತಾಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ" ಎಂದು ಆತ ವೈದ್ಯರಿಗೆ ತನ್ನ ತೊಂದರೆಗಳ ಪಟ್ಟಿಯನ್ನು ಇಡುತ್ತಾನೆ.
ವೈದ್ಯರು ಯಾವುದೇ ಪರೀಕ್ಷೆಯನ್ನು ಕೂಡ ಮಾಡದೆ ಆತನಿಗೆ ತನ್ನ ಹೆಂಡತಿಯೊಡನೆ ಮರುದಿನ ಬರಬೇಕೆಂದು ತಿಳಿಸುತ್ತಾನೆ. ಗ್ರಾಹಕನಿಗೆ ಆಶ್ಚರ್ಯ. ತನ್ನನ್ನು ಪರೀಕ್ಷಿಸದೆ ಹೆಂಡತಿ ಜೊತೆ ಬರಲು ಹೇಳುತ್ತಿದ್ದಾನೆ. ಮರುಪ್ರಶ್ನಿಸದೆ, ಸರಿ ಎಂದು ಹೇಳಿ ಮನೆಗೆ ಮರಳುತ್ತಾನೆ.
ಮರುದಿನ, ಆತನನ್ನು ಹೊರಗಡೆಯೇ ಕಳಿಸಿ ಆತನ ಹೆಂಡತಿಗೆ ಒಳಬರಲು ಹೇಳುತ್ತಾನೆ. ಸುಮಾರು ಹದಿನೈದು ನಿಮಿಷದ ನಂತರ ಹೆಂಡತಿಯನ್ನು ಹೊರಗೆ ಕಳಿಸಿ, ನಿಮಿರು ವೈಫಲ್ಯ ಅನುಭವಿಸುತ್ತಿರುವ ಗಂಡನನ್ನು ಒಳಬರಲು ಹೇಳುತ್ತಾನೆ.
"ಅಯ್ಯಾ, ನಿನಗೇನು ತೊಂದರೆಯಿಲ್ಲ. ನೀನು ಆರೋಗ್ಯವಾಗಿಯೇ ಇದ್ದೀಯಾ" ಎಂದು ಹೇಳಿ, ಕೆಲ ಕ್ಷಣ ಶ್ವಾಸ ಎಳೆದುಕೊಂಡು, "ಅವಳನ್ನು ಪೂರ್ತಿಯಾಗಿ ಪರೀಕ್ಷೆ ಮಾಡಿದಾಗ ನನಗೂ ನಿನ್ನ ಹಾಗೆಯೇ ನಿಮಿರು ವೈಫಲ್ಯ ರೋಗ ಇದೆ ಎಂದು ಅನಿಸಲು ಪ್ರಾರಂಭಿಸಿತು!"












Click it and Unblock the Notifications