ಕುಡುಕ ಗಂಡನನ್ನು ಬೈದ ಹೆಂಡತಿಗೆ ಗಂಡ ಹೇಳಿದ್ದೇನು ಗೊತ್ತಾ?

ದಿನಾ ಮದ್ಯ ಸೇವಿಸಿ ಬರುತ್ತಿದ್ದ ಗಂಡನನ್ನು ಹೆಂಡತಿ ತರಾಟೆಗೆ ತೆಗೆದುಕೊಳ್ಳುತ್ತಾ..
ಹೆಂಡತಿ: ಡ್ರಿಂಕ್ಸ್ ಗಾಗಿ ಬಹಳ ಹಣ ಹಾಳು ಮಾಡಿದ್ದಾಯಿತು, ಇನ್ಮುಂದೆ ಡ್ರಿಂಕ್ಸ್ ನಿಲ್ಲಿಸಿ, ಅಷ್ಟೇ..
ಗಂಡ: ನೀನು ಪ್ರತೀ ತಿಂಗಳು ಐದು ಸಾವಿರ ರೂಪಾಯಿ ಬ್ಯೂಟಿ ಪಾರ್ಲರಿಗೆ ಹಾಕ್ತೀಯಲ್ಲಾ, ಅದ್ಯಾವ ಲೆಕ್ಕಾ?
ಹೆಂಡತಿ: ರೀ.. ಅದು ನಾನು ನಿಮಗೆ ಸುಂದರವಾಗಿ ಕಾಣಲು..
ಗಂಡ: ಅಯ್ಯೋ ಮಂಕೇ.. ನಾನು ಕೂಡಾ ಕುಡಿಯುವುದು ನೀನು ನನಗೆ ಸುಂದರವಾಗಿ ಕಾಣಲು..
---
ಗುಂಡ ಜ್ಯೋತಿಷಿಯ ಬಳಿ ಹೋಗಿ ಪ್ರಶ್ನೆ ಕೇಳುತ್ತಾನೆ.. (ಡಿಬ್ಬಿಯ ತರ್ಕಬದ್ಧ ಪ್ರಶ್ನೆಗೆ ತಬ್ಬಿಬ್ಬಾದ ಸುಬ್ಬು)

ಗುಂಡ: ಸ್ವಾಮೀ.. ನಾನು ಎಷ್ಟೇ ಪ್ರಯತ್ನ ಪಟ್ಟರೂ ಮದುವೆಯಾಗುತ್ತಿಲ್ಲ, ಇದಕ್ಕಾಗಿ ಏನು ಮಾಡಬೇಕು?
ಜ್ಯೋತಿಷಿ; ಮೊದಲು, ಹಿರಿಯರು 'ಸದಾ ಸಂತೋಷವಾಗಿರು' ಎನ್ನುವ ಆಶೀರ್ವಾದ ನೀಡುವುದರಿಂದ ತಪ್ಪಿಸಿಕೊ..
---
ರಾಜಾ ಮತ್ತು ತಿಮ್ಮ ಎಂಟನೇ ಕ್ಲಾಸಿನಲ್ಲಿ ಎಂಟನೇ ಸಲವೂ ಅನುತ್ತೀರ್ಣರಾದರು..
ರಾಜಾ: ಮನೆಯಲ್ಲಿ ಮುಖ ತೋರಿಸಲಾಗುವುದಿಲ್ಲ, ನಡೀ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ
ತಿಮ್ಮ: ಹುಚ್ಚಾ ನಿನಗೆ.. ಆತ್ಮಹತ್ಯೆ ಮಾಡಿಕೊಂಡರೆ ಮುಂದಿನ ಜನ್ಮದಲ್ಲಿ ಮತ್ತೆ ನರ್ಸರಿಯಿಂದ ಒದುತ್ತೀಯಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+