ಕೈಬೆರಳಿಗೆ ಹಾಕೋ ಮಸಿ ನಂಗ್ ಸ್ವಲ್ಪ ಕೊಡ್ತಿಯೇನು?
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸಾಮಾಜಿಕ ತಾಣದಲ್ಲಿ ಭರಪೂರ ಜೋಕ್ಸುಗಳು ಹರಿದಾಡುತ್ತಿವೆ. ಒಂದೆರಡು ಸ್ಯಾಂಪಲ್:
ಅಜ್ಜಿ : ಈ ಮಸಿ ನೀರಲ್ಲಿ ತೋಳದ್ರ ಹೋಗುತೇನಪ್ಪಾ?
ರಿಟರ್ನಿಂಗ್ ಆಫೀಸರ್: ಇಲ್ಲ
ಅಜ್ಜಿ: ಮತ್ತಾ.. ಎಣ್ಣಿ ಹಚ್ಚಿದ್ರ?
ರಿಟರ್ನಿಂಗ್ ಆಫೀಸರ್ : ಎಣ್ಣೆ ಹಚ್ಚಿದ್ರೂ ಹೋಗೋಲ್ಲ
ಅಜ್ಜಿ : ಮತ್ತ ಸಾಬೂನು ಹಚ್ಚಿದ್ರಾ?
ರಿಟರ್ನಿಂಗ್ ಆಫೀಸರ್: ಏನ್ ಹಚ್ಚಿದ್ರೂ.. ಲಗೂ ಹೋಗೋದಿಲ್ಲಾ
ಅಜ್ಜಿ : ಹಂಗಾದ್ರ.. ಹೋಗಲಿಕ್ಕೆ ಎಷ್ಟ ದಿನಾ ಬೇಕಪ್ಪಾ?
ರಿಟರ್ನಿಂಗ್ ಆಫೀಸರ್: ಸಾಧಾರಣ 2 ರಿಂದ 3 ತಿಂಗಳು ಬೇಕು
ಅಜ್ಜಿ : ಹೌದೇನೋ... ಭೇಷ್.. ಆತ್ ಬಿಡಪಾ, ಕೂದಲ ಹಚ್ಚಿಲಿಕ್ಕ ಸ್ವಲ್ಪ ಕೊಡ್ತಿಯೇನು?
... ರಿಟರ್ನಿಂಗ್ ಆಫೀಸರ್ ಸುಸ್ತು..

ಚುನಾವಣೆಯ ವೇಳೆ ಅಭ್ಯರ್ಥಿಯೊಬ್ಬ ತನ್ನ ಫೇಸ್ ಬುಕ್ ಅಕೌಂಟ್ ಅನ್ನು ಅಪ್ಡೇಟ್ ಮಾಡುತ್ತಿದ್ದ..
ಅಭ್ಯರ್ಥಿ ಗೆಟ್ ಅಪ್ ನಲ್ಲಿರುವ ತನ್ನ ಫೋಟೋ, ವಯಸ್ಸು, ತನ್ನ ಉದ್ಯೋಗ,, ಆದಾಯ, ವಿಳಾಸ ಎಲ್ಲವನ್ನೂ ಅಪ್ಡೇಟ್ ಮಾಡಿದ..
ಆದರೆ, ಅವನಿಗೆ ವಾಲ್ ನಲ್ಲಿ ಏನು ಬರೆಯಬೇಕೆಂದು ತೋಚಲೇ ಇಲ್ಲ...
ಆಲೋಚಿಸಿ.. ಆಲೋಚಿಸಿ.. ಕೊನೆಗೆ ಹೀಗೆ ಬರೆದ..
'ಇಲ್ಲಿ ಯಾರೂ ಮೂತ್ರ ವಿಸರ್ಜನೆ ಮಾಡಬಾರದು'












Click it and Unblock the Notifications