ಕೋಮಾ ಹಂತದಲ್ಲೂ ಹೆಂಡತಿಗೆ ತನ್ನ ವಯಸ್ಸಿನ ಚಿಂತೆ!
ಗುಂಡನ ಹೆಂಡತಿ ಐಸಿಯುನಲ್ಲಿದ್ದಳು. ಸತತ ನಾಲ್ಕು ಗಂಟೆಗಳ ಕಾಲ ಡಾಕ್ಟರುಗಳು ತಪಾಸಣೆ ನಡೆಸಿ..
ಡಾಕ್ಟರ್ : ನಾವು ತುಂಬಾ ಟ್ರೈ ಮಾಡ್ತಾ ಇದ್ಧೇವೆ..ಆದರೆ ಅವರು ಚಿಕಿತ್ಸೆಗೆ ಸ್ಪಂದಿಸುತಿಲ್ಲ..
ಗುಂಡ: ಏನಾಗಿರಬಹುದು?ಡಾಕ್ಟರ್ : ಬಹುಶಃ ಕೋಮಾಗೆ ಹೋಗಿರಬಹುದೆಂದು ತೋರುತ್ತದೆ.ಈಗ ಎಲ್ಲಾ ದೇವರ ಕೈಯಲ್ಲಿದೆ. ದೇವರನ್ನೇ ಪ್ರಾರ್ಥಿಸಿ. (ಆತ್ಮಹತ್ಯೆ ಯತ್ನಕ್ಕೆ ಮುನ್ನ ಅವಳ್ಯಾಕೆ ದೀರ್ಘ ಚುಂಬನ ಕೊಟ್ಟಿದ್ದು)
ಗುಂಡ : ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ, ಏನಾದರೂ ಮಾಡಿ ಡಾಕ್ಟರ್.
ಡಾಕ್ಟರ್ : ಇಂತಹ ಕಾಯಿಲೆ ಬರಲು ನಿಮ್ಮ ಪತ್ನಿಗೆ ವಯಸ್ಸಾದರೂ ಎಷ್ಟು?
ಗುಂಡ : ಈಗ ತಾನೇ ಅವಳಿಗೆ 40 ತುಂಬಿದೆ.
ಪತಿ ತನ್ನ ವಯಸ್ಸು 40 ಎಂದು ಹೇಳುತ್ತಲೇ ಗುಂಡನ ಪತ್ನಿಯ ಹೃದಯದ ಗತಿಯ ವೇಗ ಹೆಚ್ಚಿತು. ಕೈ ಬೆರಳುಗಳು ಅಲ್ಲಾಡಿದವು. ತುಟಿಗಳು ನಡುಗಿ, ಗುಂಡನ ಪತ್ನಿ ಜೋರಾಗಿ "ರೀ.. ನನಗೆ ನಲವತ್ತು ಅಲ್ಲಾರೀ.. ಇನ್ನೂ 30 ವರ್ಷ"
ಎಂದಾಗ ಡಾಕ್ಟರ್ ಹೃದಯ ಬಡಿತ ಹೆಚ್ಚಾಯಿತು.












Click it and Unblock the Notifications