ಬಾತ್ ರೂಂನಿಂದ ಹೆಂಡತಿ ವಯ್ಯಾರದಿಂದ ಗಂಡನನ್ನು ಕರೆದಾಗ
ಬಾತ್ ರೂಂನಿಂದ ಹೆಂಡತಿ ವಯ್ಯಾರದಿಂದ ಗಂಡನನ್ನು ಕರೆದು, ರೀ.. ಬನ್ನಿ ಸ್ವಲ್ಪ
ಇಲ್ಲಿಗೆ.. ಎಲ್ಲದಕ್ಕೂ ಸೋಪ್ ಹಾಕಿದ್ದೇನೆ, ಬಂದು ಸ್ವಲ್ಪ ಉಜ್ಜಿ ಎಂದು ಹೇಳಿದಾಗ..
ಕಾಲ್ ಮೇಲೆ ಕಾಲ್ ಹಾಕಿ ಪೇಪರ್ ಓದುತ್ತಿದ್ದ ಗಂಡ ಎದ್ದೋಬಿದ್ನೋ ಅಂತಾ ಬಾತ್ ರೂಂಗೆ ಹೋದ್ರೆ...
ರೀ... ಎಲ್ಲಾ ಬಟ್ಟೆಗೂ ಸೋಪ್ ಹಾಕಿದ್ದೇನೆ.. ಸ್ವಲ್ಪ ಉಜ್ಜಿ ಆಮೇಲೆ ಒಣಗೋಕೆ ಹಾಕ್ರೀ..
ಎಂದಾಗ ಗಂಡನ ಮುಖ ನೋಡ್ಬೇಕಿತ್ತು..
------
ಹೆಂಡತಿ: ರೀ.. ಸ್ಟೋರ್ ರೂಂನಿಂದ ಟೇಬಲ್ ಸಾಲ್ಟ್ ತೆಗೆದುಕೊಂಡು ಬನ್ನಿ..
ಗಂಡ: (ಅಲ್ಲೆಲ್ಲಾ ಹುಡುಕಿದಾದ ಮೇಲೆ) ಇಲ್ಲಿ ಎಲ್ಲೂ ಇಲ್ಲ ಕಣೇ..
ಹೆಂಡತಿ: ನಂಗೆ ಗೊತ್ತುರೀ. ನೀವು ಬರೀ ನಾಲಾಯಕ್ .. ಕಾಮ್ ಚೋರ್ ಅಂತಾ.. ಅದಕ್ಕೆ ಮೊದಲೇ
ಇಲ್ಲಿ ತಂದು ಇಟ್ಟುಕೊಂಡಿದ್ದೆ..
ಗಂಡ: ಅಯ್ಯೋ ನಿನ್ನಾ..
-----
ಜಡ್ಜ್: ನೀನೆಂತಾ ಗಂಡಸು ಕಣಯ್ಯಾ.. ಹೆಂಡತಿಯನ್ನು ಯಾಕೋ ಮಾರಿದೆ?
ಗಂಡ: ಅವಳೇ ಹೇಳಿದ್ದು ಸಾರ್..
ಜಡ್ಜ್: ಏನೂಂತಾ?
ಗಂಡ: ನಾನು ಒಲಿದರೆ ನಾರಿ.. ಮುನಿದರೆ ಮಾರಿ.. ಅಂತಾ..
ಜಡ್ಜ್: ಅದಕ್ಕೆ?
ಗಂಡ: ಮೊನ್ನೆ ಮುನಿದಿದ್ಳು ಸಾರ್.. ಅದಕ್ಕೆ ಮಾರಿ ಬಿಟ್ಟೆ












Click it and Unblock the Notifications