ಹೆಂಡತಿ ಮಾತ್ರ ಸಾವನ್ನಪ್ಪುವ ಹಳೇ ಕಾರನ್ನು ಖರೀದಿಸಿದ ತಿಮ್ಮ
ಮನಸ್ಸಿಗೆ ಮುದ ನೀಡುವ ಜೋಕ್ಸುಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿರುತ್ತವೆ. ಅಂತಹ ಕೆಲವೊಂದು ಆಯ್ದ ಜೋಕ್ಸುಗಳು ನಮ್ಮ ಓದುಗರಿಗಾಗಿ..
ಹಳೆಯ ಕಾರೊಂದನ್ನು ಹರಾಜು ಹಾಕಲಾಗುತ್ತಿತ್ತು. ಹರಾಜು ಪ್ರಕ್ರಿಯೆಯಲ್ಲಿ ತುಂಬಾ ಜನ ಭಾಗವಹಿಸಿದ್ದರು. ಒಂದು ಲಕ್ಷ.. ಎರಡು ಲಕ್ಷ.. ಎಂದು ಕಾರಿನ ಬಿಡ್ ಆಶ್ಚರ್ಯ ರೀತಿಯಲ್ಲಿ ಏರಿಕೆಯಾಗುತ್ತಲೇ ಇತ್ತು..
ಇದರಿಂದ ಗಾಬರಿಗೊಂಡ ತಿಮ್ಮ, ಲಕ್ಷ ಲಕ್ಷ ರೂಪಾಯಿಗೆ ಈ ಹಳೇ ಕಾರು ಬಿಡ್ ಆಗ್ತಾ ಇದೆಯಲ್ಲಾ, ಏನಿದರ ಮರ್ಮ ಎಂದು ಬಿಡ್ ನಲ್ಲಿ ಭಾಗವಹಿಸಿದವನ ಬಳಿ ಕೇಳಿದ..
ಸರ್, ಈ ಕಾರು ಐದು ಬಾರಿ ಅಪಘಾತಕ್ಕೀಡಾಗಿದೆ. ಐದು ಬಾರಿ ಆಕ್ಸಿಡೆಂಟ್ ಆದಾಗಲೂ ಕಾರಿನಲ್ಲಿ ಇದ್ದವರ ಪೈಕಿ ಕೇವಲ ಹೆಂಡತಿ ಮಾತ್ರ ಸಾವನ್ನಪ್ಪಿದ್ದಾಳೆ ಎಂದಾಗ ತಿಮ್ಮ ದೂಸ್ರಾ ಮಾತನಾಡದೇ ಎಂಟು ಲಕ್ಷಕ್ಕೆ ಕಾರನ್ನು ಬಿಡ್ ನಲ್ಲಿ ಖರೀದಿಸಿದ... ತಿಮ್ಮನ ಮುಖದಲ್ಲಿ ಅದೇನೋ ಸಾಧನೆ ಮಾಡಿದ ಮಂದಹಾಸ...
--
ನಾನು ಕೇಳಿದ್ದೆಲ್ಲಾ ಕೊಟ್ಟೆ, ಆದರೆ ನನ್ನ ಈ ಕೋರಿಕೆಯನ್ನು ಯಾಕೆ ಈಡೇರಿಸಿಲ್ಲ ಎಂದು ತಿಮ್ಮ ದೇವರ ಫೋಟೋ ಮುಂದೆ ಗೋಗರಿಯುತ್ತಿದ್ದ...
ತಿಮ್ಮನ ಹೆಂಡತಿ ಹೊರ ಹೋದಾಗಲೆಲ್ಲಾ ತಿಮ್ಮ ಯಾಕೆ ದೇವ್ರ ಮುಂದೆ ಅಳುತ್ತಾನೆಂದು ಮನೆ ಓನರ್ ಕದ್ದುಮುಚ್ಚಿ ತಿಮ್ಮನ ಮನೆಗೆ ಬಂದಾಗ ತಿಮ್ಮ ಈ ರೀತಿ ಪ್ರಾರ್ಥಿಸುತ್ತಿದ್ದ..
ನೀನು ಬಾಲ್ಯ ಕೊಟ್ಟೆ.. ವಾಪಸ್ ತೆಗೊಂಡೆ..
ಯೌವ್ವನ ಕೊಟ್ಟೆ.. ವಾಪಸ್ ತೆಗೊಂಡೆ..
ಒಳ್ಳೆ ಕೆಲ್ಸಾ ಕೊಟ್ಟೆ, ಒಳ್ಳೆ ಆರೋಗ್ಯ ಕೊಟ್ಟೆ, ಐಶ್ವರ್ಯ ಕೊಟ್ಟೆ.. ಅದನ್ನೂ ವಾಪಸ್ ತೆಗೊಂಡೆ
ಆದ್ರೆ ಹೆಂಡತಿ ಕೊಟ್ಟೆ.. ಅದನ್ಯಾಕೆ ಎಂದಾಗ ಅಲ್ಲೇ ಬಚ್ಚಿ ಕೇಳಿಸಿ ಕೊಳ್ಳುತ್ತಿದ್ದ ಮನೆ ಓನರಿಗೆ ತಡೆದುಕೊಳ್ಳಲಾಗದೇ, ತಿಮ್ಮನನ್ನು ಬಿಗಿದಪ್ಪಿ.. ಅಳಬೇಡಪ್ಪಾ... ನಾನೂ ನಿನ್ನ ಜೊತೆಗಿದ್ದೇನೆ ಎಂದಾಗ ತಿಮ್ಮನ ಅಳು ಇಮ್ಮಡಿಯಾಯಿತು..
--
ಬಲಗಾಲಿಟ್ಟು ಬಂದ ಮನೆ ಸೊಸೆಗೆ ಅತ್ತೆ ಮನೆಯ ಬಗ್ಗೆ ವಿವರಿಸುತ್ತಾ...
ನಾನು ಈ ಮನೆಯ ಗೃಹ ಸಚಿವೆ, ನಿನ್ನ ಮಾವ ಹಣಕಾಸು ಸಚಿವ, ನನ್ನ ಮಗಳು ಸಾಮಾಜಿಕ ಅಭಿವೃದ್ದಿ ಸಚಿವೆ..
ಮಗ ಅಂದರೆ ನಿನ್ನ ಗಂಡ ನಾಗರಿಕ ಪೂರೈಕೆ ಅಥವಾ ಮನೆ ಅಗತ್ಯ ಪೂರೈಕೆ ಸಚಿವ..
ಈಗ ಹೇಳು.. ನೀನು ಯಾವ ಖಾತೆಯನ್ನು ಹೊರುತ್ತೀಯಾ.. ಎಂದಾಗ..
ಸೊಸೆ ಮಂದಹಾಸ ಬೀರುತ್ತಾ.. ನಾನು ವಿರೋಧ ಪಕ್ಷದ ನಾಯಕಿಯಾಗುತ್ತೇನೆಂದಾಗ ಅತ್ತೆ ಸುಸ್ತೋ.. ಸುಸ್ತು..












Click it and Unblock the Notifications