ಬೆಂಗಳೂರು ಕಲ್ಯಾಣ ಮಂಟಪದ ಮದುವೇಲಿ ಹೆಣ್ಣೇ ಇಲ್ಲ. ಎರಡೂ ಗಂಡೇ
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡಲ್ಲಿ ಸಾಲಾಗಿ ಇರೋ ಕಲ್ಯಾಣಮಂಟಪಗಳಲ್ಲೊಂದರಲ್ಲಿ ನಡೆಯುತ್ತಿದ್ದ ಮದುವೆ ಹಾಲ್ ನಲ್ಲಿ
ಅವ್ರು: "ಸಾರ್, ನೀವು ಯಾರು ಅಂತಾ ಗೊತ್ತಾಗ್ಲಿಲ್ವಲ್ಲಾ!?
ಪುಗಸಟ್ಟೆ ಊಟಕ್ಕೆ ನುಗ್ಗಿದ್ದವರು: ಅಯ್ಯೋ, ಗೊತ್ತಾಗ್ಲಿಲ್ವಾ!! ನಾವು ಹೆಣ್ಣಿನ ಕಡೆಯವರು ಸಾರ್. ಹೆಣ್ಣಿನ ತಂಗಿಯ ಸೋದರಳಿಯ ನಾನು. ನಿಶ್ಚಿತಾರ್ಥದಲ್ಲಿ ಸಿಕ್ಕಿದ್ವಿ. ಮೋದಿ-ರಾಹುಲ್ ಬಗ್ಗೆಯೆಲ್ಲಾ ಚರ್ಚೆ ಮಾಡಿದ್ವಿ ನೋಡಿ..
ಅವ್ರು: ಪಟಾರ್ ಅಂತಾ ಕಪಾಳಕ್ಕೆ ಬಾರ್ಸಿ "ಏನ್ರೀ, ನಮ್ಮನ್ನೇ ಯಾಮಾರಿಸ್ತಾ ಇದ್ದೀರಾ? ಊಟ ಒಂದೆಲೆಗೆ 410 ರೂಪಾಯಿ ಆಗಿದೆ. ಪುಗಸಟ್ಟೆ ಊಟಕ್ಕೆ ನುಗ್ಗಿದ್ದೀರಾ?

ಪುಗಸಟ್ಟೆ ಊಟಕ್ಕೆ ನುಗ್ಗಿದ್ದವರು: ಕಣ್ಣೀರು ಒತ್ತಿ ಹಿಡಿದುಕೊಳ್ಳುತ್ತಾ "ನಿಮಗೆ ಹೆಂಗ್ ಗೊತ್ತಾಯ್ತು ಸಾರ್?
ಅವ್ರು: ನನ್ ಮಕ್ಳಾ. ಸುಪ್ರೀಂಕೋರ್ಟ್ ಆದೇಶ ಮರೆತು ಬಿಟ್ರಾ. ಈ ಮದುವೆಯಲ್ಲಿ ಹೆಣ್ಣೇ ಇಲ್ಲ. ಎರಡೂ ಗಂಡೇ. ನಾವು ಹೆಣ್ಣಿನ ಕಡೆಯವರು ಅಂತಾ ಹೇಳಿಬಿಟ್ರೆ, ನಮಗೆ ಗೊತ್ತಾಗಲ್ವಾ?
ಪುಗಸಟ್ಟೆ ಊಟಕ್ಕೆ ನುಗ್ಗಿದ್ದವರು: ಸಾರಿ ಸರ್.. ಹೊರಗಡೆ ಬೋರ್ಡಲ್ಲಿ ಶಮಂತ್ ವೆಡ್ಸ್ ವಸಂತ ಅನ್ನೋದರಲ್ಲಿ ವಸಂತ ಹುಡುಗಿ ಅಂದ್ಕೊಂಡು ಕಥೆ ರೆಡಿ ಮಾಡ್ಕಂಡು ನುಗ್ಗಿಬಿಟ್ವಿ. ಕಥೆ ಹಿಂಗೆ ಅಂತಾ ಗೊತ್ತಿರ್ಲಿಲ್ಲ. ಬರ್ತೀವಿ ಸಾರ್
(ವಾಟ್ಸಾಪ್ ನಲ್ಲಿ ಬಂದಿದ್ದು)












Click it and Unblock the Notifications