ಜೋಕ್ಸ್: ಮನೇಲಿ ಇಲ್ಲದಿದ್ದಾಗ ಎಷ್ಟು ಬಾರಿ ಮೋಸ ಮಾಡಿದ್ಯಾ, ಹೆಂಡತಿಗೆ ಗಂಡ ಆವಾಜ್!
ಜೋಕ್ಸ್: ಗಂಡ ಮತ್ತು ಹೆಂಡತಿಯ ನಡುವಿನ ಸಂವಾದ. ಮನೇಲಿ ಇಲ್ಲದಿದ್ದಾಗ ಎಷ್ಟು ಬಾರಿ ಮೋಸ ಮಾಡಿದ್ಯಾ, ಹೆಂಡತಿಗೆ ಗಂಡ ಆವಾಜ್!
ಸಕ್ರಿಯ ರಾಜಕಾರಣಿಯೊಬ್ಬ ತನ್ನ ಹೆಂಡತಿಯನ್ನು ಗದರಿಸಿ ಕೇಳುತ್ತಿದ್ದ
ಗಂಡ: ನಿಜಾ.. ಹೇಳು ನಾನು ಇಲ್ಲದಿದ್ದಾಗ ಎಷ್ಟು ಬಾರಿ ನನಗೆ ವಿಶ್ವಾಸದ್ರೋಹದ ಕೆಲಸ ಮಾಡಿದ್ಯಾ?
ಹೆಂಡತಿ: ಮೂರು ಸಲ.. [ಹೆಂಡತಿ ವಿಷಯದಲ್ಲಿ ಬದಲಾಯಿತಲ್ಲಾ ನಿನ್ನ ನಿಯತ್ತು]

ಗಂಡ: ಯಾವಾಗಾವಾಗ? ಯಾರ ಜೊತೆ?
ಹೆಂಡತಿ: ಒಮ್ಮೆ ನಿಮಗೆ ಸರ್ಜರಿ ಆದಾಗ ಡಾಕ್ಟರ್ ಜೊತೆ, ಒಮ್ಮೆ ನೀವು ಜೈಲಿಗೆ ಹೋಗಿದ್ದಾಗ ಜಡ್ಜ್ ಜೊತೆ..
ಗಂಡ: ಮೂರನೇದ್ದು..
ಹೆಂಡತಿ: ನಿಮಗೆ ಬಹುಮತ ಸಾಬೀತು ಪಡಿಸಲು 76 ಶಾಸಕರ ಕೊರತೆಯಿದ್ದಾಗ...
ಗಂಡ ತಲೆಸುತ್ತಿ ತಿರುಗಿಬಿದ್ದ..
------
ಯುವ ಪ್ರೇಮಿಗಳಾದ ತಿಮ್ಮ ಮತ್ತು ತಿಮ್ಮಿ ಕಬ್ಬನ್ ಪಾರ್ಕಿನಲ್ಲಿ ಕೈಕೈ ಹಿಡಿದುಕೊಂಡು ಸುತ್ತಾಡುತ್ತಿದ್ದರು. ತನ್ನ ಮನಸ್ಸಿನಲ್ಲಿದ್ದ ವಿಷಯವನ್ನು ಹೇಳಲು ಇದೇ ಸೂಕ್ತ ಸಮಯವೆಂದ ತಿಮ್ಮ..
ತಿಮ್ಮ: ಲೇ.. ತಿಮ್ಮಿ ನಿನಗೊಂದು ಸತ್ಯ ಹೇಳಬೇಕು
ತಿಮ್ಮಿ: ಏನ್ ಹೇಳು..
ತಿಮ್ಮ: ನೀನು ನನ್ನ ಮೇಲೆ ಸಿಟ್ಟು ಮಾಡ್ಕೋಬಾರ್ದು
ತಿಮ್ಮಿ: ಇಲ್ಲ ಹೇಳು..
ತಿಮ್ಮ: ನನಗೊಬ್ಳು ಗರ್ಲ್ ಫ್ರೆಂಡ್ ಇದ್ದಾಳೆ..
ತಿಮ್ಮಿ: ಈಡಿಯಟ್.. ನಾನೆಷ್ಟು ಭಯಪಡ್ಕೊಂಡೆ ಗೊತ್ತಾ.. ನಿನ್ನಲ್ಲಿ ದುಡ್ಡು ಇಲ್ಲಾ ಅನ್ಕೊಂಡೇ...
-----
ಇನ್ನೇನು ಪರೀಕ್ಷೆಯ ಸಮಯ. ಗುಂಡ ಮತ್ತು ರಾಜ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರು..
ಗುಂಡ: ಅಲ್ವೋ ಪರೀಕ್ಷೆ ಕಷ್ಟ ಇದ್ರೆ ಏನೋ ಮಾಡೋದು..
ರಾಜ: ನನ್ನಲ್ಲೊಂದು ಐಡಿಯಾ ಇದೆ..
ಗುಂಡ: ಏನದು?
ರಾಜ: ಪರೀಕ್ಷೆ ಬರೆಯಲು ಹೋಗು.. ಸಬ್ಜೆಕ್ಟ್ ತುಂಬಾ ಕಷ್ಟ ಇದ್ರೆ.. ಕಣ್ ಮುಚ್ಕೊಂಡು, ಜೋರಾಗಿ ಉಸಿರೆಳೆದು.. ಇದೊಂದು ತುಂಬಾ ಕುತೂಹಲಕಾರಿಯಾದ ಸಬ್ಜೆಕ್ಟ್. ಹಾಗಾಗಿ ನೆಕ್ಸ್ಟ್ ಟೈಮ್ ಬರೀತೀನಿ ಎಂದು ಜೋರಾಗಿ ಕೂಗಿ ಎಕ್ಸಾಮ್ ಹಾಲ್ ನಿಂದ ಹೊರಗೆ ಬಾ.. ನಾನೂ ಕಾಯ್ತಾ ಇರ್ತೀನಿ.. (ವಾಟ್ಸಾಪ್)












Click it and Unblock the Notifications