ಮಧ್ಯರಾತ್ರಿ ಗಂಡನನ್ನು ಎಬ್ಬಿಸಿ ಹೆಂಡತಿ ಕೇಳಿದ್ದೇನು ಗೊತ್ತಾ?

ಮಧ್ಯರಾತ್ರಿ ಹನ್ನೆರಡು ಗಂಟೆ ಕಳೆದ ಕೂಡಲೇ ಗಂಡನನ್ನು ಎಬ್ಬಿಸಿದ ಹೆಂಡತಿ ಕೇಳಿದ್ದೇನು ಗೊತ್ತಾ, ಪಕದ್ಮನೆ ಸೊಸೆ ಯಾವ ಡ್ರೆಸ್ ಹಾಕೊಂಡ್ಲಿದ್ಲೂಂತಾ...

ಹೆಂಡತಿ: ಎರಡು ಕನಸು ಚಿತ್ರದಲ್ಲಿನ ಹೀರೋಯಿನ್ ಗಳು ಯಾರು?
ಗಂಡ: ಮಂಜುಳಾ ಮತ್ತು ಕಲ್ಪನಾ..

ಹೆಂಡತಿ: ಬಂಧನ ಚಿತ್ರದ ನಾಯಕಿಯಾರು ಹೇಳಿ..
ಗಂಡ: ಸುಹಾಸಿನಿ ಅಲ್ವೇನೇ..
ಹೆಂಡತಿ: ಪಕ್ಕದ್ಮನೆ ಸರೋಜಮ್ಮ ಸೊಸೆ ನಿನ್ನೆ ಯಾವ ಚೂಡಿದಾರ್ ಹಾಕ್ ಕೊಂಡ್ಲಿದ್ಳು..ಹೇಳೀ...
ಗಂಡ: ಪಿಂಕ್ ಚೂಡಿದಾರ್ ಗೆ, ಬ್ಲ್ಯಾಕ್ ದುಪ್ಪಟ್ಟಾ.. ಅಲ್ಲಾ ಕಣೇ... ಇಷ್ಟು ಹೊತ್ತಲ್ಲಿ ಇದನ್ನೆಲ್ಲಾ ಯಾಕೇ ಕೇಳ್ತಾ ಇದ್ದೀಯಾ...
ಹೆಂಡತಿ: ಅಯ್ಯೋ.. ನಿಮ್ಮಾ.. ನನ್ನ ಬರ್ಥಡೇಗೆ ವಿಷ್ ಮಾಡಿದ್ದೇರೇನ್ರೀ.. ನೀವು..
--
ಹೊಸದಾಗಿ ಮದುವೆಯಾದ ಗಂಡ, ಹೆಂಡತಿ ಊಟ ಮಾಡುತ್ತಾ ಮಾತನಾಡಿಕೊಳ್ಳುತ್ತಿದ್ದರು...
ಹೆಂಡತಿ: ಅಲ್ಲಾರೀ.. ಮದುವೆಯಾಗುವ ಮುಂಚೆ ದೇವಸ್ಥಾನಕ್ಕೆ ದಿನಾಲೂ ಹೋಗುತ್ತಿದ್ದೀರಿ!
ಗಂಡ: ಹೌದು..
ಹೆಂಡತಿ: ಮತ್ಯಾಕೆ ಮದುವೆಯಾದ ಮೇಲೆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿದ್ದೀರಾ?
ಗಂಡ: ನಿನ್ನನ್ನು ಮದುವೆಯಾದ ಮೇಲೆ, ದೇವರ ಮೇಲೆ ನಂಬಿಕೆಯೇ ಹೋಗಿದೆ ಕಣೇ..

---
ಗಂಡ: ಅಯ್ಯೋ.. ಯಾಕೋ ನಿದ್ದೇನೇ ಬರ್ತಾ ಇಲ್ಲಾ ಕಣೇ..
ಹೆಂಡತಿ: ಹೌದಾ.. ಹಾಗಿದ್ರೆ, ಸಿಂಕ್ ನಲ್ಲಿ ಪಾತ್ರಗಳು ಬಿದ್ದಿವೆ.. ತೊಳೆಯಿರಿ..
ಗಂಡ: ಅಯ್ಯೋ.. ನಿನ್ನಾ.. ನಾನು ನಿದ್ದೇಲಿ ಮಾತಾಡ್ತಾ ಇದ್ದೀನಿ ಕಣೇ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+