ಲೋ ಶಿಷ್ಯಾ..ನಿನ್ ಡವ್ ಯಾರ್ ಜೊತೆನೋ ಇದ್ದಾಳೋ
ಗುಂಡನಿಗೆ ತುಂಬಾ ಹೊಟ್ಟೆ ಹಸಿತಿತ್ತು. ಒಂದು ರೆಸ್ಟೋರೆಂಟ್ ಗೆ ಹೋದ, ಅಲ್ಲಿ ಎಲ್ಲಾ ಟೇಬಲ್ ಫುಲ್.. ಪ್ರತೀ ಟೇಬಲ್ ನಲ್ಲೂ ಹುಡುಗಿ ಹುಡುಗ. ಮುಂದೇನಾಯ್ತು?
ಗುಂಡನಿಗೆ ತುಂಬಾ ಹೊಟ್ಟೆ ಹಸಿತಿತ್ತು. ಒಂದು ರೆಸ್ಟೋರೆಂಟ್ ಗೆ ಹೋದ, ಅಲ್ಲಿ ಎಲ್ಲಾ ಟೇಬಲ್ ಫುಲ್.. ಪ್ರತಿಯೊಂದು ಟೇಬಲ್ ನಲ್ಲೂ ಒಂದು ಹುಡುಗಿ ಒಂದು ಹುಡುಗ.
ಗುಂಡನಿಗೆ ಒಂದು ಕಡೆ ಹಸಿವು, ತಲೆಕೆಟ್ಟೋಯ್ತು. ಕೂಡಲೇ ಗುಂಡನಿಗೆ ಒಂದು ಐಡಿಯಾ ಬಂತು, ಮೊಬೈಲ್ ತಗೊಂಡು ಜೋರಾಗಿ ಒಂದು ಡೈಲಾಗ್ ಬಿಸಾಕ್ದ..
'ಲೇ ಮಚ್ಚಾ ನಿನ್ ಡವ್ ಇಲ್ಲಿ ಯಾರ್ ಜೊತೆನೋ ಬಿರಿಯಾನಿ ತಿಂತಾ ಇದ್ದಾಳೋ.. ಎಲ್ಲೋ ಇದ್ದೀಯಾ.. ಬಾರೋ ಬೇಗಾ.. [ಮಹಿಳೆ ಕೈಬೀಸಿ ಕರೆದಳೂಂತಾ ಮನೆಯೊಳಗೆ ಹೋದ]
ಫೋನ್ ಇಟ್ಟು ನೋಡಿದ್ರೆ ಅಲ್ಲಿದ್ದ ಎಲ್ಲ ಹುಡ್ಗಿರೂ ಎಸ್ಕೇಪ್...
----
ಗಂಡ ಹೆಂಡತಿ ಊಟ ಮಾಡುತ್ತಿದ್ದರು. ಊಟ ಆದ ಕೂಡಲೇ ಗಂಡ ಎರಡೂ ತಟ್ಟೆ ತೊಳೆದು ತಂದಿಟ್ಟ. ಆಗ ಪತ್ನಿ ಗಂಡನನ್ನೇ ದುರುಗುಟ್ಟಿ ನೋಡಿ...
ಪತ್ನಿ: ಅಲ್ಲಾರೀ.. ನನ್ನ ಮರ್ಯಾದೆನೇ ತೆಗೆದು ಬಿಟ್ರಲ್ಲರೀ..
ಗಂಡ: ಅಯ್ಯೋ ಶಿವನೇ! ನಾನೇನು ಮಾಡ್ದೆ ಕಣೇ..
ಪತ್ನಿ: ನಾವೀಗ ಊಟ ಮಾಡಿದ್ದು ಹೋಟೆಲಲ್ಲಿ ಅನ್ನೋ ಸ್ವಲ್ಪಾನೂ ಕಾಮನ್ ಸೆನ್ಸ್ ಇಲ್ವೇನ್ರೀ.. ನಿಮ್ಗೆ
---
ತರಕಾರಿ ಅಂಗಡಿಯವ ಬಾಗಿಲು ತೆರೆದು ಎಲ್ಲಾ ತರಕಾರಿಗೆ ನೀರು ಸಿಂಪಡಿಸುವುದರಲ್ಲಿ ಮಗ್ನನಾಗಿದ್ದ.
ಬಹಳ ಹೊತ್ತಿನಿಂದ ನಿಂತು ಇದನ್ನು ಗಮನಿಸುತ್ತಿದ್ದ ಗುಂಡ...
"ಸ್ವಾಮಿ ಬೆಂಡೆಕಾಯಿಗೆ ಎಚ್ಚರವಾಗಿದ್ದರೆ ಒಂದೂವರೆ ಕಿಲೊ ಕೊಡಿ" ಎಂದ...












Click it and Unblock the Notifications