ಜೋಕ್ಸ್: ಅಲ್ಲಾ ಗುರು.. ನಾವು ಗಂಡಸ್ರು ಅಷ್ಟು ಕೇವಲಾಗಿ ಬಿಟ್ವಾ?
ಗುಂಡ: ಅಲ್ಲಾ ಗುರು.. ನಾವು ಗಂಡಸ್ರು ಅಷ್ಟು ಕೇವಲಾಗಿ ಬಿಟ್ವಾ?
ತಿಮ್ಮ: ಏನೋ ಆಯ್ತು?
ಗುಂಡ: ಹೊಸಾದ್ ಇರ್ಲಿ ಅಂತ ಮನೆಗ್ ಕುಕ್ಕರ್ ತಗೊಂಡ್ ಹೋಗ್ತಿದ್ರೇ.. ಬೀದಿ ಜನ ಎಲ್ಲ.. ಎಲ್ ಕೊಡ್ತಾವ್ರೇ? ಲಕ್ಷ್ಮಿ ಅವ್ವ ಕೊಟ್ರಾ? ಯಾವ್ ಪಕ್ಷದೋರು ಕೊಡ್ತಾವ್ರೆ? ನಮ್ಗೊಂದ್ ಕೊಡ್ಸಿ ಅಂತಾ ಕೇಳ್ತಾವ್ರಲ್ಲ ನಮ್ ದುಡ್ಗೇ ಬೆಲೆ ನೇ ಇಲ್ವಾ ಗುರು?
--
ಹೆಂಡತಿ ಗಂಡನ ಸಮಾಧಿಯ ಬಳಿ ಬಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದಳು.....
"ರೀ ನಿಮ್ಮ ಮಗಳು ನೆಕ್ಲೆಸ್ ಕೇಳ್ತಿದ್ದಾಳೆ, ಎಲ್ಲಿಂದ ತಂದುಕೊಡಲಿ...?
"ನಿಮ್ಮ ಮಗ ಕಾರ್ ಕೇಳ್ತಿದ್ದಾನೆ, ಎಲ್ಲಿಂದ ತಂದು ಕೊಡಲಿ...?
"ನಿಮ್ಮ. ಎರಡನೆಯ ಮಗ ಬೈಕ್ ಕೇಳ್ತಿದ್ದಾನೆ, ಹೇಗೆ ಕೊಡಿಸಲಿ.....?
ನನ್ಗೂ ಒಂದು ಡೈಮಂಡ್ ನೆಕ್ಲೆಸ್ ಬೇಕು, ನಾನೇನ್ ಮಾಡ್ಲಿ....?
ಸಮಾಧಿ ಒಳಗಿನಿಂದ ಗಂಡ ಹೇಳಿದ....
" ಲೇ.. ನಾನು 'ಸಮಾಧಿ' ಲಿ ಇರೋದು ಕಣೇ, 'ಸೌದಿ' ಲಿ ಅಲ್ಲ..
---
ಗಂಡ ಮತ್ತು ಹೆಂಡತಿ ನಡುವೆ ಸಂಭಾಷಣೆ ನಡೆಯುತ್ತಿತ್ತು..
ಹೆಂಡತಿ: ಶಿವ- ಪಾರ್ವತಿ ಫೋಟೊದಾಗ ಶಿವ ತ್ರಿಶೂಲ ಹಿಡ್ಕೊಂಡು ನಿಂತಾನ... ವಿಷ್ಣು- ಲಕ್ಷ್ಮಿ ಫೋಟೊದಾಗ ವಿಷ್ಣು ಚಕ್ರ ಹಿಡ್ಕೊಂಡು ನಿಂತಾನ.. ರಾಮ-ಸೀತಾ ಫೋಟೊದಾಗ ರಾಮ ಬಿಲ್ಲುಬಾಣ ಹಿಡ್ಕೊಂಡಾನ.. ಅಂದರೆ....
ಎಲ್ಲಾ ದೇವರು ತಮ್ಮ ಪತ್ನಿ ಕೂಡ ಏನಾದರು ಒಂದ ಅಸ್ತ್ರ- ಶಸ್ತ್ರ ಹಿಡ್ಕೊಂಡಾನ.... ಆದ್ರೆ?
ಗಂಡ: ಏನು ಆದ್ರೆ?
ಹೆಂಡತಿ: ಆದರೆ....
ಕೃಷ್ಣ- ರಾಧೆಯರ ಫೋಟೊದಾಗ ಕೃಷ್ಣ ಕೊಳಲ ನುಡಿಸಕೊಂಡು ನಿಂತಾನ....ಯಾಕೆ?
ಗಂಡ: ಎಲ್ಲಾ ದೇವರು ತಮ್ಮ ತಮ್ಮ ಹೆಂಡತಿ ಜೊತೆ ನಿಂತಾರ.. ಅದಕ್ಕ ಅವರ ಕೈಯಾಗ ಶಸ್ತ್ರ ಅದಾವ... ಆದರೆ ಕೃಷ್ಣ ಮಾತ್ರ...ತನ್ನ ಗರ್ಲಫ್ರೆಂಡ್ ಜೊತೆಗೆ ಅದಾನ..ಅದಕ್ಕ ಸಂತೋಷದಿಂದ ಮಜವಾಗಿ ಕೊಳಲು ನುಡಸಾಕ ಹತ್ತಾನ..
ಹೆಂಡ್ತಿ ಸುಸ್ತೊ ಸುಸ್ತು.. (ವಾಟ್ಸಾಪ್ ಜೋಕ್ಸ್)












Click it and Unblock the Notifications