ನೆಟ್ ಸ್ಲೋ ಇದ್ದಿದ್ದಕ್ಕೂ ನೀನು ಲೇಟಾಗಿ ಬಂದಿದ್ದಕ್ಕೂ ಏನಮ್ಮಾ ಸಂಬಂಧ?
ಡಾಕ್ಟರ್ : ಅಲ್ಲಮ್ಮಾ.. ನಿಮ್ಮತ್ತೆಗೆ ಮೊದ್ಲೇ ಒಂದ್ಸಾರಿ heart ಅಟ್ಯಾಕ್ ಆಗಿತ್ತು ಇದೇ ರೀತಿ ಮತ್ತೆ ಅಟ್ಯಾಕ್ ಆದ್ರೆ ಅರ್ಧ ಗಂಟೆಯೊಳಗೆ ಆಸ್ಪತ್ರೆಗೆ ಬರಬೇಕು ಅಂತ ಅಷ್ಟು ಹೇಳಿದ್ರುನೂ, ಆಸ್ಪತ್ರೆ ಇಷ್ಟು ಹತ್ತಿರ ಇದ್ರೂ ಯಾಕಮ್ಮಾ ಇಷ್ಟು ಲೇಟಾಗಿ ಕರ್ಕೋಬಂದೆ?
ಸೊಸೆ : ಬೇಗ ಬರಬೇಕೂ ಅಂತಾನೇ ಇದ್ದೆ ಡಾಕ್ಟ್ರೇ.. ಆದ್ರೆ ನೆಟ್ ಸ್ಲೋ ಆಗಿತ್ತು ಅದಕ್ಕೆ .. ಲೇಟಾಯ್ತು .
ಡಾಕ್ಟರ್ : ಏನು ? net slow ಆಗಿರೋದಕ್ಕು ನೀನು ಲೇಟಾಗಿದ್ದಕ್ಕೂ ಏನಮ್ಮಾ ಸಂಬಂಧ?
ಸೊಸೆ : ಅತ್ತೆ ಜೊತೆ ಒಂದ್ ಸೆಲ್ಫಿ ತಗೊಂಡ್ 'going to hospital with ಅತ್ತೆ very serious condition' ಅಂತ ಪೋಸ್ಟ್ ಮಾಡ್ತಿದ್ದೆ, ಮನೆಯಿಂದ ಆಚೆ ಬಂದ್ರೆ ವೈಫೈ ಕನೆಕ್ಷನ್ ಕಟ್ ಆಗತ್ತೆ ಅಂತ ಮನೇಲೆ ಇದ್ದು ಪೋಸ್ಟ್ ಮಾಡಿ ಆಮೇಲೆ ಬಂದೆ.
ಡಾಕ್ಟರ್ : ಕರ್ಮ .. ಕರ್ಮ..ಅದ್ಸರಿ ನಿಮ್ ಗಂಡ ಎಲ್ಲಿ ಕರೀರಿ ..
ಸೊಸೆ :- ಡಾಕ್ಟ್ರೇ.. ಆ ಪೋಸ್ಟ್ ಅನ್ನು ಅವ್ರಿಗೂ ಟ್ಯಾಗ್ ಮಾಡಿದೀನಿ ...
ಡಾಕ್ಟರ್ : ಸೋ?
ಸೊಸೆ :- ಅವ್ರೂ ನನ್ ಜೊತೆ ಬಂದ್ಬಿಟ್ರೆ, ಆ ನನ್ನ ಪೋಸ್ಟಿಗೆ ಬರೋ ಕಮೆಂಟಿಗೆಲ್ಲ ಯಾರು ರಿಪ್ಲೈ ಮಾಡೋದು . ಈಗ ನಮ್ಮತ್ತೆ ಹೇಗಿದ್ದಾರೆ ಡಾಕ್ಟ್ರೇ?
ಡಾಕ್ಟರ್ : ಒಂದ್ ಪಕ್ಷ ಬೇಗ ಕರ್ಕೊಂಡ್ ಬಂದಿದ್ರೆ...... ಅವ್ರಿಗೆ ನೀವು ಬರೋ ವರ್ಷ ತಿಥಿ ಮಾಡೋದು ತಪ್ಪುತ್ತಿತ್ತೇನೋ.. but now. she is no more
ಸೊಸೆ : ಡಾಕ್ಟ್ರೇ ನಿಮ್ ಆಸ್ಪತ್ರೆ ವೈಫೈ ಕನೆಕ್ಷನ್ ಪಾಸ್ವರ್ಡ್ ಹೇಳ್ತೀರಾ?
ಡಾಕ್ಟರ್ : ಯಾಕಮ್ಮ?
ಸೊಸೆ :- ಅದೇ ನಮ್ಮತ್ತೆ ಹೋಗ್ಬಿಟ್ರಲ್ಲ ಅದನ್ನ ಫೇಸ್ಬುಕ್ಕಿಗೆ ಹಾಕೋದ್ ಬೇಡ್ವಾ.. ಅಂದ ಹಾಗೆ ಐಸಿಯುನಲ್ಲಿ ಸೆಲ್ಫಿ ತಗೋಬಹುದಾ ಡಾಕ್ಟ್ರೇ .
ಡಾಕ್ಟರ್ : ಜಾಗ ಖಾಲಿ ಮಾಡಮ್ಮಾ ಮೊದ್ಲು ಇಲ್ಲಿಂದಾ... (ವಾಟ್ಸಾಪ್ ನಲ್ಲಿ ಬಂದಿದ್ದು)












Click it and Unblock the Notifications