ನಾನು... ತಿಮ್ಮನ ಹೆಂಡತಿ... ಅದು ಹಾಗಲ್ಲ ಕಣೇ
ಗುಂಡಿ : ರೀ, ಥೂ... ನಾಚಿಕೆ ಆಗಬೇಕು ನಿಮಗೆ. ತಿಮ್ಮನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಕೊತೀರಲ್ಲಾ.
ಗುಂಡ : ಬೆಬೆಬೆಬೆ... ನಾನು... ತಿಮ್ಮನ ಹೆಂಡತಿ... ಅದು ಹಾಗಲ್ಲ ಕಣೇ...
ಗುಂಡಿ : ಸಾಕು ಸುಮ್ನಿರಿ, ಎಲ್ಲ ಗೊತ್ತಿದೆ ನನಗೆ.
ಗುಂಡ : ಐಐಐ... ಆಮ್ ಸಾರಿ ಕಣೇ, ಹೌದು ನಿನಗೆ ಹೇಗೆ ಗೊತ್ತಾಯಿತು?
ಗುಂಡಿ : ತಿಮ್ಮ ನಿನ್ನೆ ಮನೆಗೆ ಬಂದಿದ್ದ. ನಿಮ್ಮ ಅಂಡರ್ ವೇರ್ ಅವ್ನು ಹಾಕ್ಕೊಂಡಿದ್ದ!
***
ಮರಿಗುಂಡ ಸ್ಕೂಲಿನಲ್ಲಿ ಪಾಠದ ಮೇಲೆ ಗಮನ ಕೊಡುತ್ತಿರಲಿಲ್ಲ. ಇದನ್ನು ಗಮನಿಸಿದ ಟೀಚರ್...
ಟೀಚರ್ : ಲೇ ಮರಿಗುಂಡ, ಈ ಎರಡು ವಾಕ್ಯವನ್ನು ಜೋಡಿಸಿ ಹೇಳು.
ಮರಿಗುಂಡ : ಹೇಳಿ ಟೀಚರ್.
ಟೀಚರ್ : I was cycling to school. I saw a dead body. ಹೇಳು ಇದನ್ನು ಒಂದೇ ವಾಕ್ಯದಲ್ಲಿ ಹೇಳು.
ಮರಿಗುಂಡ : I saw a dead body cycling to school.
***
ಚಂದ್ರನ ಬಳಿ ಮಾನವನನ್ನು ಕಳುಹಿಸಲು 'ನಾಸಾ' ಸಂದರ್ಶನ ನಡೆಸುತ್ತಿತ್ತು. ಅಮೆರಿಕಾ, ರಷ್ಯ ಮತ್ತು ಭಾರತದಿಂದ ಒಬ್ಬೊಬ್ಬರು ಸಂದರ್ಶನಕ್ಕೆ ಬಂದಿದ್ದರು.
ಸಂದರ್ಶಕ : ನಿಮ್ಮನ್ನು ಚಂದ್ರನ ಬಳಿ ಕಳುಹಿಸಬೇಕೆಂದಿದ್ದೇವೆ. ಅದಕ್ಕೆ ನೀವು ಅಪೇಕ್ಷೆ ಪಡುವ ಮೊತ್ತವೆಷ್ಟು?
ಅಮೆರಿಕದವ : ಒಂದು ಮಿಲಿಯನ್ ಡಾಲರ್
ರಷ್ಯಾದವ : ಒಂದು ಮಿಲಿಯನ್ ಡಾಲರ್
ಭಾರತದವ : ಮೂರು ಮಿಲಿಯನ್ ಡಾಲರ್
ಸಂದರ್ಶಕ : ಅವರಿಬ್ಬರೂ ಒಂದು ಮಿಲಿಯನ್ ಡಾಲರ್ ಕೇಳುತ್ತಿದ್ದಾರೆ. ನೀವ್ಯಾಕೆ ಮೂರು ಮಿಲಿಯನ್ ಡಾಲರ್ ಕೇಳುತ್ತಿದ್ದೀರಾ?
ಭಾರತದವ : ಒಂದು ಮಿಲಿಯನ್ ಡಾಲರ್ ನಿಮಗೆ, ಒಂದು ಮಿಲಿಯನ್ ಡಾಲರ್ ನನಗೆ, ಇನ್ನೊಂದು ಮಿಲಿಯನ್ ಡಾಲರ್ ಅಮೆರಿಕದವನಿಗೆ ಕೊಟ್ಟು ಚಂದ್ರನ ಬಳಿ ಕಳುಹಿಸುತ್ತೇನೆ.












Click it and Unblock the Notifications