ಸ್ವಾಮಿ..ಹೆಂಡ್ತಿ ಪ್ರೀತಿಸೋ ಬದಲು ಪಕ್ಕದ್ಮನೆಯವಳು...

Jokes for the day
ಗುಂಡ ಒಬ್ಬ ಮಂತ್ರವಾದಿ ಹತ್ತಿರ ಹೋಗುತ್ತಾನೆ..
ಮಂತ್ರವಾದಿ: ಭಕ್ತಾ.. ನಾನು ಕೊಟ್ಟ ತಾಯಿತ ಹೇಗಿದೆ?
ಗುಂಡ: ಸ್ವಾಮಿ.. ಹೆಂಡತಿ ನನ್ನನ್ನು ಪ್ರೀತಿಸುವ ಬದಲು, ಪಕ್ಕದಮನೆಯವಳು ಪ್ರೀತಿಸುತ್ತಾ ಇದ್ದಾಳೆ..
ಮಂತ್ರವಾದಿ: ಓಹೋ.. ಎಲ್ಲೋ ಸೈಡ್ ಎಫೆಕ್ಟ್ ಆಗಿರಬೇಕು..
***
ಒಬ್ಬ ಸೋಮಾರಿ ಯುವಕ ಜ್ಯೋತಿಷ್ಯ ಕೇಳಲು ಸ್ವಾಮೀಜಿ ಬಳಿ ಹೋಗುತ್ತಾನೆ..
ಯುವಕ: ನಿಮ್ಮ ದಯೆಯಿಂದ ನನಗೆ ಒಂದು ಕೆಲಸ ಕೊಡಿಸಿ.
ಸ್ವಾಮೀಜಿ: ನಿನಗೆ ಯಾವ ರೀತಿಯ ಕೆಲಸ ಬೇಕು?
ಯುವಕ: ಅಲ್ಲಿ ನಾನು ಕೆಲಸ ಮಾಡಬಾರದು.. ಆದರೆ ಜನ ಅಲ್ಲಿ ತಮ್ಮ ತಮ್ಮ ಕೆಲಸ ಮುಗಿಸಿ ನನಗೆ ಹಣ ಕೊಡಬೇಕು..
ಸ್ವಾಮೀಜಿ: ಹೋಗು.. ಒಂದು ಶೌಚಾಲಯ ಓಪನ್ ಮಾಡ್ಕೋ..
***
ತಂದೆ: ಮಗನೇ.. ನಿನಗೊಂದು ಒಳ್ಳೆ ಹುಡುಗಿಯನ್ನು ನೋಡಿದ್ದೇನೆ..
ಮಗ: ಹೌದಾ..
ತಂದೆ: ಅವಳು ರೂಪವತಿ. ಗುಣವತಿ.. ಭಾಗ್ಯವತಿ ಕೂಡಾ.
ಮಗ: ನಿನಗ್ಯಾಕೆ ಕಷ್ಟ ಅಪ್ಪಾ. ನಾನೊಂದು ಹುಡುಗಿಯನ್ನು ಈಗಾಗಲೇ ನೋಡಿದ್ದೇನೆ. ಅವಳು ರೂಪವತಿ, ಗುಣವತಿ ಜೊತೆ ಗರ್ಭವತಿ ಕೂಡಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+