ನೇಣಿಗೆ ನಿಂತಿರುವ ಗುಂಡನ ಕೊನೆಯ ಆಸೆ?

ಕೈದಿ ಗುಂಡ : ನನ್ನ ಮಕ್ಕಳನ್ನು ನೋಡಬೇಕು..
ಜೈಲರ್ : ಸರಿ ಕರಿಸ್ತೀವಿ..
ಕೈದಿ ಗುಂಡ : ಹಾ..ಹಾ.. ಯಾಕಿಷ್ಟು ಅವಸರ, ನನಗಿನ್ನೂ ಮದುವೆನೇ ಆಗಿಲ್ಲಾ.. ಮದುವೆ ಆಗಿ ಮಕ್ಕಳಾಗುವವರೆಗೆ ವೈಟ್ ಮಾಡಿ..
***
ಗುಂಡ ಡಬಲ್ ಡೆಕ್ಕರ್ ಬಸ್ ನಲ್ಲಿ ಸಿಟಿ ರೌಂಡ್ ಗೆ ಹೋದ.. ಬಸಿನಲ್ಲಿ ಮೇಲೆ ಕೂತ..
ಬಸ್ ಸ್ಟಾರ್ಟ್ ಆಯ್ತು.. ಒಮ್ಮೆಲೇ ಎದ್ದೋ ಬಿದ್ದೋ ಕೆಳಗೆ ಬಂದ..
ಕಂಡಕ್ಟರ್ : ಯಾಕ್ರೀ ಸ್ವಾಮಿ ಏನಾಯ್ತು?
ಗುಂಡ : ಸುಮ್ನಿರಿ.. ಏನ್ ಆಟ ಆಡ್ತಾ ಇದ್ದೀರಾ? ಮೇಲೆ ಡ್ರೈವರೇ ಇಲ್ಲ!
***
ರೋಗಿ : ಏನ್ ಡಾಕ್ಟ್ರೆ. ನಂಗೆ ಇಲಿ ಜ್ವರಾಂತ ಹೇಗೆ ಹೇಳ್ತೀರಿ?
ಡಾಕ್ಟರ್ : ಇನ್ನೆನಯ್ಯಾ.. ನೀನ್ ಕೊಡೊ ಚಿಲ್ರೆ ದುಡ್ಡಿಗೆ ಹುಲಿ ಜ್ವರಾಂತಾ ಹೇಳೋಕಾಗುತ್ತಾ?
***
ಗುಂಡ : ಹುಡುಗೀನಾ ಅರ್ಥ ಮಾಡಿಕೊಳ್ಳೋದಂದ್ರೆ ಏನೋ?
ತಿಮ್ಮ : 1 ಜಿಬಿ ಫೈಲ್ ಅನ್ನು 2 ಕೆಬಿಪಿಎಸ್ ಸ್ಪೀಡ್ ನಲ್ಲಿ ಡೌನ್ ಲೋಡ್ ಮಾಡಬೇಕಾದ್ರೆ 95% ಕಂಪ್ಲೀಟ್ ಆದಾಗ ಎರರ್ ಅಂತ ಬರುತ್ತೆ ನೋಡು ಅದು.












Click it and Unblock the Notifications