ಗಂಡ ಕಳೆದು ಹೋಗಿದ್ದಾರೆ.. ಇನ್ನೊಂದು ಗಂಡ ಬೇಕು

ಹೆಂಡತಿ: ಪೇಪರ್ ನಲ್ಲಿ ಜಾಹೀರಾತು ನೀಡುತ್ತೇನೆ..
ಗಂಡ: Very Good, ಏನೂಂತಾ?
ಹೆಂಡತಿ: ಗಂಡ ಕಳೆದು ಹೋಗಿದ್ದಾರೆ.. ಇನ್ನೊಂದು ಗಂಡ ಬೇಕೂಂತಾ..
***
ಗಂಡ: ಅಲ್ವೇ..ಮನೆ ಕೆಲಸಕ್ಕೆ ಹೆಂಗಸರು ಬೇಡಾಂತ ಯಾಕೆ ಹಠ ಹಿಡಿತ್ತಿದ್ದೀಯಾ?
ಹೆಂಡತಿ: ನಿಮ್ಮ ಬುದ್ದಿ ನನಗೆ ಗೊತ್ತಿಲ್ವಾ
ಗಂಡ: ನಾನೇನು ಮಾಡ್ದೆ?
ಹೆಂಡತಿ: ನಾನು ಕೂಡಾ ಮನೆ ಕೆಲಸದವಳಾಗಿಯೇ ಬಂದಿದ್ದು..
***
ಹೆಂಡತಿ: ರೀ.. ಬನ್ರೀ ಇಲ್ಲಿ..
ಗಂಡ: ಏನು?
ಹೆಂಡತಿ: ಅಲ್ಲಾರೀ.. ನಿಮಗೆ ರಾಣಿ ಅಂತ ಮೊದಲನೇ ಹೆಂಡತಿ ಇದ್ದ ವಿಷಯ ನನಗೆ ಯಾಕೆ ಹೇಳಿಲ್ಲ?
ಗಂಡ: ಮೊದಲೇ ಹೇಳಿಲ್ವೇನೆ ನಿನಗೆ.. ನಿನ್ನನ್ನ ರಾಣಿ ತರ ನೋಡ್ಕೋತೀನಿ ಅಂತಾ..












Click it and Unblock the Notifications