ಯಾಕೆ ನೀವು ಈ ರೀತಿ ಜಗಳ ಆಡುತ್ತಿದ್ದೀರಾ?

ಸರ್: ಯಾಕೆ ನೀವು ಈ ರೀತಿ ಜಗಳ ಆಡುತ್ತಿದ್ದೀರಾ?
ಮರಿತಿಮ್ಮ: ಈ ಮರಿಗುಂಡ ಪರೀಕ್ಷೆಯಲ್ಲಿ ಖಾಲಿ ಪೇಪರ್ ಕೊಟ್ಟು ಬಂದಿದ್ದಾನೆ.
ಸರ್: ಅದಕ್ಕೆ ಏನಂತೆ ಈವಾಗ?
ಮರಿತಿಮ್ಮ: ಸಾರ್.. ನಿಮಗೆ ಅರ್ಥ ಆಗಲ್ಲ. ನಾನು ಕೂಡಾ ಖಾಲಿ ಪೇಪರೆ ಕೊಟ್ಟಿದ್ದು. ಟೀಚರ್ ಈಗ ನಾವಿಬ್ಬರು ಕಾಪಿ ಮಾಡಿದ್ದಾರೆ ಅನ್ಕೊಂಡು ನನ್ನನ್ನು ಡಿಬಾರ್ ಮಾಡಿದ್ರೆ..
***
ಗುಂಡನ ಮನೆಕೆಲಸದಾಕೆ : ಅಮ್ಮಾವ್ರೇ ನಾಳೆಯಿಂದ ನಾನು ಕೆಲಸಕ್ಕೆ ಬರೋಲ್ಲ..
ಗುಂಡಿ: ಯಾಕೆ..?
ಗುಂಡನ ಮನೆಕೆಲಸದಾಕೆ : ನನಗೆ ನಿಮ್ಯಾನ್ಸ್ ನಲ್ಲಿ ಕೆಲಸ ಸಿಕ್ಕಿದೆ.
ಗುಂಡಿ: ನಿಮ್ಯಾನ್ಸ್ ನಲ್ಲಿ ಕೆಲಸ ಮಾಡೋಕೆ ನಿನಗೆ ಏನು ಅನುಭವವಿದೆ?
ಗುಂಡನ ಮನೆಕೆಲಸದಾಕೆ :ಹತ್ತು ವರ್ಷದಿಂದ ನಿಮ್ಮ ಮನೇಲೆ ಕೆಲಸ ಮಾಡುತ್ತಿಲ್ವಾ, ಆ ಅನುಭವ ಸಾಕು.
***
ಗುಂಡ, ತಿಮ್ಮ ಮತ್ತು ಮರಿಗುಂಡ ತ್ರಿಬಲ್ಸ್ ನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದರು..
ಟ್ರಾಫಿಕ್ ಪೋಲೀಸ್: ಯೋ.. ನಿಲ್ಸಯ್ಯಾ..
ಗುಂಡ: ರೀ ನಿಮಗೆ ಬುದ್ದಿ ಇದೆಯಾ? ಈಗಲೇ ಮೂರು ಜನ ಕೂತಿದ್ದೀವಿ, ನಿಮ್ಮನ್ನು ಕೂರ್ಸ್ಕೊಂಡು ಹೇಗೆ ಹೋಗಲಿ.












Click it and Unblock the Notifications