ನಿನ್ನ ಹೆಂಡತಿ ಯಾಕೋ ಓಡಿ ಹೋದಳು?

ತಿಮ್ಮ: ಗೊತ್ತಿಲ್ಲ ಕಣೋ, ಸ್ನಾನ ಮಾಡೋಕೆ ಹೋಗಿದ್ದೆ. ಆವಾಗ ಓಡಿ ಹೋಗಿದ್ದಾಳೆ.
ಗುಂಡ: ಬಹುಷಃ ಇಂತಹ ಸಮಯಕ್ಕೆ ಅವ್ಳು ಬಹಳ ದಿನದಿಂದ ಕಾಯ್ತಾ ಇದ್ಳೋ ಏನೋ
--
ಗುಂಡ: ನಿನ್ನೆ ನನಗೆ ಎಂಟು ಜನ ಬಂದು ಚೆನ್ನಾಗಿ ಹೊಡೆದ್ರು.
ತಿಮ್ಮ: ನೀನು ಏನೂ ಹೇಳಿಲ್ವಾ?
ಗುಂಡ: ಹೇಳ್ದೆ, ಧಮ್ ಇದ್ದರೆ ಒಬ್ಬೊಬ್ಬರೇ ಬನ್ನಿ ಅಂತ..
ತಿಮ್ಮ; ಆಮೇಲೆ?
ಗುಂಡ: ಒಬ್ಬಬ್ಬರೇ ಬಂದು ನನಗೆ ಚೆನ್ನಾಗಿ ಹೊಡೆದ್ರು ಕಣೋ
--
ಗುಂಡ ಬಾರ್ ನಲ್ಲಿ ಕೂತಿದ್ದ, ಅಕಸ್ಮಾತ್ತಾಗಿ ಪಾಕ್ ಮತ್ತು ಬಾಂಗ್ಲಾದೇಶದ ಇಬ್ಬರು ಗುಂಡ ಕೂತ ಟೇಬಲ್ ನಲ್ಲೇ ಕೂತರು. ಪಾಕಿಸ್ತಾನದವನು ಬೀರ್ ಕುಡಿದು ಬಾಟಲ ಅನ್ನು ಮೇಲಕ್ಕೆ ಬಿಸಾಕಿ ಎಕೆ47 ಗನ್ ನಲ್ಲಿ ಗ್ಲಾಸ್ ಅನ್ನು ಪೀಸ್ ಪೀಸ್ ಮಾಡಿ.. "ನನ್ನ ದೇಶದಲ್ಲಿ ಗ್ಲಾಸ್ ಎಷ್ಟು ಅಗ್ಗ ಎಂದರೆ ಕುಡಿದ ಗ್ಲಾಸ್ ನಲ್ಲೇ ಮತ್ತೆ ಕುಡಿಯಬೇಕಾಗಿಲ್ಲ' ಎಂದ..
ಬಾಂಗ್ಲಾದೇಶದವನೂ ಬೀರ್ ಕುಡಿದು ಬಾಟಲ ಅನ್ನು ಮೇಲಕ್ಕೆ ಬಿಸಾಕಿ ಲೋಕಲ್ ಗನ್ ನಲ್ಲಿ ಗ್ಲಾಸ್ ಅನ್ನು ಪೀಸ್ ಪೀಸ್ ಮಾಡಿ.. "ನನ್ನ ದೇಶದಲ್ಲಿ ಮರಳು ಎಷ್ಟು ಚೀಪ್ ಅಂದರೆ ಅದರಿಂದ ಬೇಕಾದಷ್ಟು ಗ್ಲಾಸ್ ಮಾಡಬಹುದು, ಕುಡಿದ ಗ್ಲಾಸ್ ನಲ್ಲೇ ಮತ್ತೆ ಕುಡಿಯಬೇಕಾಗಿಲ್ಲ" ಎಂದ.
ನಮ್ಮ ಗುಂಡ ಎದ್ದವನೇ ಬೀರ್ ಕುಡಿದು ಬಾಟಲ ಅನ್ನು ಮೇಲಕ್ಕೆ ಬಿಸಾಕಿ ಗನ್ ತೆಗೆದುಕೊಂಡು ಇಬ್ಬರನ್ನೂ ಶೂಟ್ ಮಾಡಿ.. " ನಮ್ಮ ದೇಶದಲ್ಲಿ ಪಾಕ್ ಮತ್ತು ಬಾಂಗ್ಲಾ ದೇಶದ ತುಂಬಾ ಜನ ಇದ್ದಾರೆ, ಮತ್ತೆ ನಿಮ್ಮ ಜೊತೆ ಕುಡಿಯಬೇಕಾಗಿಲ್ಲ" ಎಂದ.












Click it and Unblock the Notifications