ಜೋಕ್ಸ್ : ಗುಂಡಾ ಗುಂಡಿ ಹನಿಮೂನ್ ಗಂಡಾ ಗುಂಡಿ

ಗುಂಡ : ಯಾರ್ರೀ ಅಲ್ಲಿ, ಬನ್ನಿ ಬೇಗ.. ನನ್ನ ಹೆಂಡತಿ ಕಿಟಕಿಯಿಂದ ಧುಮುಕಿ ಸಾಯಬೇಕೆಂದಿದ್ದಾಳೆ..
ರಿಸೆಪ್ಸನಿಸ್ಟ್ : ಅದಕ್ಕೆ ನಾವು ಏನು ಮಾಡಕ್ಕಾಗುತ್ತೆ ಹೇಳಿ?
ಗುಂಡ : ಕಿಟಕಿ ತುಂಬಾ ಬಿಗಿಯಾಗಿದೆ.. ಬಂದು ಸ್ವಲ್ಪ ಓಪನ್ ಮಾಡ್ರೀ..
***
ಗುಂಡ : ಸಾರ್.. ನನ್ನ ಹೆಂಡತಿ ಕಾಣೆಯಾಗಿದ್ದಾಳೆ.
ಪೋಸ್ಟ್ ಮ್ಯಾನ್ : ಇದು ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡಿ.
ಗುಂಡ : ಒಹ್.. ಸಾರಿ.. ನನಗಾಗಿರುವ ಖುಷಿಗೆ ಎಲ್ಲಿಗೆ ಹೋಗುತ್ತಿದ್ದೇನೆಂದು ಅರ್ಥಾನೆ ಆಗ್ತಿಲ್ಲ.
***
ರೋಗಿ : ಡಾಕ್ಟರ್ ನನ್ನ ಮಗಳಿಗೆ ಐದು ದಿನದಿಂದ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ..
ಡಾಕ್ಟರ್ : ಏನು? ಐದು ದಿನದಿಂದ ಜ್ವರ ಇಟ್ಟುಕೊಂಡು ಇವತ್ತು ಬರ್ತಾ ಇದ್ದೀರಲ್ಲಾ
***
ಗುಂಡ : ಬೊಗೊಳೊ ನಾಯಿ ಯಾಕೋ ಕಚ್ಚಲ್ಲಾ?
ತಿಮ್ಮ : ನನಗೆ ಗೊತ್ತಿಲ್ಲಾ.. ನೀನೆ ಹೇಳಪ್ಪಾ..
ಗುಂಡ : ಪೆದ್ದ, ಒಂದೇ ಸಮಯದಲ್ಲಿ ಎರಡು ಕೆಲಸ ಹೇಗೋ ಮಾಡಕ್ಕಾಗುತ್ತೆ?












Click it and Unblock the Notifications