ಜೋಕ್ಸ್ : ಟಿವಿ ತಗೊಂಡ್ರೆ 10 ಕರ್ಚಿಫ್ ಫ್ರೀ!

ಸೇಲ್ಸ್ ಮ್ಯಾನ್ : ಮೇಡಂ ಅದರ ಬೆಲೆ ಕೇವಲ 12 ಸಾವಿರ ರೂಪಾಯಿ. ಅದು ತೆಗೊಂಡ್ರೆ ಆಫರ್ ಬೇರೆ ಇದೆ.
ಗುಂಡಿ : ಏನು ಆಫರ್?
ಸೇಲ್ಸ್ ಮ್ಯಾನ್ : ಹತ್ತು ಕರ್ಚೀಫ್ ಫ್ರೀ ಮೇಡಂ.
ಗುಂಡಿ : ಕರ್ಚೀಫ್ ಆಫರ್ ಯಾಕೆ?
ಸೇಲ್ಸ್ ಮ್ಯಾನ್ : ಮೇಡಂ ಅದೇ.. ಧಾರವಾಹಿ ನೋಡಿದ ಮೇಲೆ ಕಣ್ಣೊರೆಸಿ ಕೊಳ್ಳೋಕೆ!
***
ಗುಂಡ : ಹೋಗೋ.. ಸುಮ್ನೆ ಟಿವಿ ನೋಡ್ಕೊಂಡು ಇರಬೇಡಾ.. ಹೋಗಿ ಗಿಡಗಳಿಗೆ ನೀರು ಹಾಕು..
ಮರಿಗುಂಡ : ನೀರಾ.. ಅಪ್ಪಾ ಹೊರಗೆ ಜೋರಾಗಿ ಮಳೆ ಬೀಳ್ತಾ ಇದೇ..
ಗುಂಡ : ಪರವಾಗಿಲ್ಲ.. ಕೊಡೆ ಇಟ್ಕೊಂಡು ಹೋಗಿ ನೀರು ಹಾಕು.
***
ಗುಂಡ (ಪೋಲೀಸ್ ಸ್ಟೇಷನ್ ನಲ್ಲಿ) : ಸಾರ್.. ನಿನ್ನೆ ನನ್ನ ಮನೆಯಲ್ಲಿ ಕಳ್ಳತನವಾಯಿತು. ಕಳ್ಳ ಟಿವಿ ಒಂದು ಬಿಟ್ಟು ಮಿಕ್ಕದನ್ನೆಲ್ಲಾ ಕದ್ದಿದ್ದ..
ಪೋಲೀಸ್ : ಹೌದಾ. ಬಹಳ ಇಂಟರೆಸ್ಟಿಂಗ್ ಆಗಿದೆಯಲ್ಲಾ. ಕಳ್ಳ ಟಿವಿನಾ ಮಾತ್ರ ಯಾಕೆ ಬಿಟ್ಟು ಹೋದ?
ಗುಂಡ : ನಂಗೇನು ಗೊತ್ತು ಸ್ವಾಮಿ? ನಿನ್ನೆ ರಾತ್ರಿ ಇಡೀ ನಾನು ಟೀವಿಲಿ ಕಾರ್ಟೂನ್ ನೋಡ್ತಿದ್ದೆ.
***
ರೋಗಿ : ಡಾಕ್ಟರ್.. ನನಗೆ ಕ್ಯಾನ್ಸರ್ ಇರೋದು ಗ್ಯಾರಂಟೀನಾ?
ಡಾಕ್ಟರ್ : ಹೌದಪ್ಪಾ.. ಯಾಕೆ?
ರೋಗಿ : ಇಲ್ಲಾ ಡಾಕ್ಟರ್, ಕಳೆದ ಸಲ ಇದೇ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದ ನನ್ನ ಸ್ನೇಹಿತ ಟಿಬಿ ಕಾಯಿಲೆಯಲ್ಲಿ ಸತ್ತ..
ಡಾಕ್ಟರ್ : ಚಿಂತೆ ಮಾಡಬೇಡ.. ಒಂದು ವೇಳೆ ನೀನು ಸತ್ತರೆ ಕ್ಯಾನ್ಸರ್ ಕಾಯಿಲೆಯಿಂದಲೇ ಸಾಯುತ್ತೀಯಾ.











Click it and Unblock the Notifications