ಹುಡುಗನ ಒಂದೇ ಆಟ ಹುಡುಗಿಗೆ ಸೀಮಂತದ ಊಟ

ಗುಂಡ : ಹುಡುಗಿಯ ಒಂದು ನೋಟ.. ಹುಡುಗನಿಗೆ ಪಾಯಸದ ಊಟ..
ತಿಮ್ಮ : ವಾ..ವಾ.
ಗುಂಡ : ಹುಡುಗನ ಒಂದೇ ಆಟ, ಹುಡುಗಿಗೆ ಸೀಮಂತದ ಊಟ
***
ಒಬ್ಬ ಹುಡುಗ ಒಬ್ಬಾಕೆಯನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ತನ್ನ ಪ್ರೀತಿಯನ್ನು ಆಕೆಗೆ ತಿಳಿಸಲು ಹೆದರುತ್ತಿದ್ದ. ಒಂದು ದಿನ ಅವಳ ಬರ್ತಡೇ ದಿನ ಗಟ್ಟಿ ಮನಸು ಮಾಡಿ ಮಧ್ಯರಾತ್ರಿ 12 ಗಂಟೆಗೆ "ಐ ಲವ್ ಯು" ಎಂದು ಮೆಸೇಜ್ ಮಾಡಿದ. ಕೆಲವೇ ಕ್ಷಣದಲ್ಲಿ ರಿಪ್ಲೈ ಬಂತು. ಆದರೆ ಅದನ್ನು ಮರುದಿನ ಬೆಳಗ್ಗೆ ನೋಡಲು ನಿರ್ಧರಿಸಿದ, ಬೆಳಗ್ಗೆ ಎದ್ದು ನೋಡಿದರೆ, ಏನೂಂತ ರಿಪ್ಲೈ ಬಂದಿತ್ತು ಗೊತ್ತಾ..
"Your account balance is insufficient, message cannot be delivered!"
***
ಅಣ್ಣಾ ಹಜಾರೆಯವರನ್ನು ನೋಡಿ ನಾಲ್ಕು ವರ್ಷದ ಮಗು ಹೇಳಿತು....
ಯಾರಾದ್ರೂ ಇವರ ಸತ್ಯಾಗ್ರಹವನ್ನು ನಿಲ್ಲಿಸಿ.. ಇಲ್ಲದಿದ್ದರೆ..
ನನ್ನ ಮುಂದಿನ ಸ್ಕೂಲಿನ ಹಿಸ್ಟರಿ ಕ್ಲಾಸಿಗೆ ಇನ್ನೊಂದು ಅಧ್ಯಾಯ ಸೇರಿಕೊಳ್ಳುತ್ತೆ..












Click it and Unblock the Notifications