ಅಯ್ಯೋ ಬಿಡ್ತೀನಾ, ಯಾರ ಮಗ ನಾನು?

ಮರಿಗುಂಡ : ಬರೀ ಗೊತ್ತಿಲ್ಲದ ಪ್ರಶ್ನೇನೆ ಕೇಳಿದ್ರಪ್ಪಾ..
ಗುಂಡ : ಹೌದಾ.. ಮತ್ತೇನು ಮಾಡ್ದೆ?
ಮರಿಗುಂಡ : ನಾನು ನಿನ್ನ ಮಗ ಅಪ್ಪಾ.. ಬಿಡ್ತೀನಾ, ಟೀಚರ್ ಗೆ ಗೊತ್ತಿಲ್ಲದೇ ಇರುವ ಉತ್ತರ ಬರೆದು ಬಂದೆ.
***
ಮರಿಗುಂಡ : ಅಪ್ಪಾ.. ಗುಲಾಬಿ ಗಿಡ ನೆಟ್ಟು ಒಂದು ವಾರ ಆದ್ರೂ ಇನ್ನೂ ಬೇರು ಬೆಳೆದಿಲ್ಲ.
ಗುಂಡ : ಅದು ನಿನಗೆ ಹೇಗೆ ಗೊತ್ತು?
ಮರಿಗುಂಡ : ಗಿಡಾನಾ ನಾನು ಡೈಲಿ ಕಿತ್ತು ನೋಡ್ತಾ ಇದ್ದೆ ಅಪ್ಪಾ!
***
ಗುಂಡ ಬಸ್ ನಲ್ಲಿ ಊರಿಗೆ ಹೋರಾಟ.
ಗುಂಡ : ರೀ.. ಗಾಡಿ ಸ್ಟಾರ್ಟ್ ಮಾಡ್ರೀ.
ಕಂಡಕ್ಟರ್ : 15 ಜನ ಪ್ಯಾಸೆಂಜರ್ ಬಂದ ಮೇಲೆನೇ ಬಸ್ ಸ್ಟಾರ್ಟ್ ಮಾಡೋದು.. ಅದಕ್ಕೆ ಮುಂಚೆ ಆಗಲ್ಲ.
ಗುಂಡ : ಯಾಕೆ?
ಕಂಡಕ್ಟರ್ : ಈ ಬಸ್ ತಳ್ಳಿದ್ರೇನೆ ಸ್ಟಾರ್ಟ್ ಆಗೋದು.. ಅದಕ್ಕೆ ಜನ ಬೇಡ್ವಾ? ಬರೀ ನಿಮ್ಮೊಬ್ರ ಕೈಯಲ್ಲಿ ತಳ್ಳಕ್ಕಾಗುತ್ತಾ?
***
ಗುಂಡ : ನನಗೆ ಗೊತ್ತು ನಿನಗೆ ಚೆನ್ನಾಗಿ ಕನ್ನಡ ಬರುತ್ತೆ ಅಂತಾ..
ತಿಮ್ಮ : ಹೌದು ಏನಿವಾಗ?
ಗುಂಡ : ಸರಿ.. nari nuri kori tiri..
ಈ ಮೇಲಿನದ್ರಲ್ಲಿ "ri" ತೆಗೆದು ಬಿಟ್ಟು ಓದು..












Click it and Unblock the Notifications