Wipro Recruitment: 10,000ಕ್ಕೂ ಹೆಚ್ಚು ಉದ್ಯೋಗಗಳ ನೇಮಕಾತಿಗೆ ಯೋಜನೆ ರೂಪಿಸಿದ ದೇಶದ ಪ್ರತಿಷ್ಠಿತ ಕಂಪನಿ
Wipro Recruitment: ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ವಿಪ್ರೋ ಕೂಡ ಒಂದಾಗಿದೆ. ಇದೀಗ ಈ ಕಂಪನಿ ಬೃಹತ್ ಸಖ್ಯೆಯಲ್ಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ, ಈ ಪ್ರಕ್ರಿಯೆ ಯಾವಾಗಿನಿಂದ ಆರಂಭವಾಗಲಿದೆ ಹಾಗೂ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹಲವು ಕಂಪನಿಗಳು ಉದ್ಯೋಗವಕಾಶಳನ್ನು ಸೃಷ್ಟಿಸುತ್ತಲೇ ಇವೆ. ಹಾಗೆಯೇ ದೇಶದ ಪ್ರತಿಷ್ಠಿತ ಕಂಪನಿಗಳಲ್ಲೊಂದಾದ ವಿಪ್ರೋ 2025-26ರ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್‌ಗಳಿಂದ 10,000-12,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ವಿಪ್ರೋ ಜನವರಿ 17ರಂದು ಮಾಹಿತಿ ಹೊರಹಾಕಿದೆ.

ಆದರೆ ಪ್ರತಿ ಹಣಕಾಸು ವರ್ಷದಲ್ಲಿ 10,000-12,000 ಫ್ರೆಶರ್‌ಗಳನ್ನು ನೇಮಕ ಮಾಡಲಾಗುವುದು ಎಂದು ವಿಪ್ರೋದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಕ್ಯೂ3 ಎಫ್ವೈ 25 ಫಲಿತಾಂಶಗಳನ್ನು ಘೋಷಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಕ್ಯಾಂಪಸ್ ನೇಮಕಾತಿ ಸುಮಾರು 10,000 ಆಗಿರುತ್ತದೆ ಎಂದು ಅವರು ಹೇಳಿದರು.
ನಾವು ಸರಿಸುಮಾರು 7,000 ಮೂರನೇ ತ್ರೈಮಾಸಿಕದವರೆಗೆ ನೇಮಕಾತಿ ಮಾಡಿಕೊಂಡಿದ್ದೇವೆ. ಮತ್ತು ಮುಂದಿನ ತ್ರೈಮಾಸಿಕದಲ್ಲಿ ನಾವು 2,500-3,000 ನಡುವೆ ನೋಡುತ್ತಿದ್ದೇವೆ. ವಿಪ್ರೋದ ಪ್ರತಿಸ್ಪರ್ಧಿ ಇನ್ಫೋಸಿಸ್ ಜನವರಿ 16ರಂದು ಐಟಿ ಸೇವೆಗಳ ಮೇಜರ್ 2026ರ ಹಣಕಾಸು ವರ್ಷದಲ್ಲಿ 20,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಿದೆ.
ಆದರೆ, ನಾವು ಅಷ್ಟೊಂದು ನೇಮಕಾತಿ ಮಾಡಿಕೊಂಡು ತೊಂದರೆ ಮಾಡಿಕೊಳ್ಳಲು ಮುಂದಾಗುವುದಿಲ್ಲ. ಆದ್ದರಿಂದ ನಾವು ಪಾಠ ಕಲಿತಿದ್ದೇವೆ. ನಾವು ಹೆಚ್ಚು ಜಾಗರೂಕರಾಗಲು ಬಯಸುತ್ತೇವೆ, ಅದು ನಮ್ಮ ವಿಧಾನವಾಗಿದೆ ಎಂದು ಗೋವಿಲ್ ಹೇಳಿದರು.
ಬೃಹತ್ ಮಟ್ಟದ ಉದ್ಯೋಗ ನೇಮಕಾತಿ: ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ 20,000ಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೃಹತ್ ಮಟ್ಟದಲ್ಲಿ ಹೊಸಬರನ್ನ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಯೋಜನೆ ರೂಪಿಸಿದೆ ಎನ್ನುವ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಭಾರತದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಾಗಿರುವ ಇನ್ಫೋಸಿಸ್ ಸಂಸ್ಥೆ 20,000ಕ್ಕೂ ಹೆಚ್ಚು ಫ್ರೆಶರ್ ಅಭ್ಯರ್ಥಿಗಳನ್ನು ನೇಮಕ ಮಾಡಲು ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
2026ರ ವರ್ಷದಲ್ಲಿ ಇನ್ಫೋಸಿಸ್ ದೊಡ್ಡ ಮಟ್ಟದಲ್ಲಿ ನೇಮಕಾತಿ ಮಾಡುವ ಯೋಜನೆಯಲ್ಲಿದೆ. Q3 ಹಣಕಾಸು ಯೋಜನೆ ರೂಪಿಸಲಾಗಿದೆ ಎಂದು ಕಾರ್ಯನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಪೊರೇಟ್‌ನಲ್ಲಿ ಜನವರಿ-ಸೆಪ್ಟೆಂಬರ್ವರೆಗೆ ತಿಂಗಳುಗಳನ್ನು ವಿಂಗಡಿಸಿ Q3 ಎಂದು ಕರೆಯಲಾಗುತ್ತದೆ.
ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್ ಸೇವೆಗಳ ರಫ್ತುದಾರ ಆಗಿರುವ ಇನ್ಫೋಸಿಸ್, ಪಾಶ್ಚಿಮಾತ್ಯ ರಾಷ್ಟ್ರಗಳ ಮಾರುಕಟ್ಟೆಯಿಂದ ತನ್ನ ಆದಾಯದ ಶೇಕಡ 80ರಷ್ಟಕ್ಕಿಂತ ಪ್ರತಿಶತಕ್ಕಿಂತ ಹೆಚ್ಚು ಹಣ ಗಳಿಸುತ್ತದೆ. ಮುಂದಿನ ದಿನಗಳಲ್ಲಿ ಕಂಪನಿಯನ್ನು ಇನ್ನಷ್ಟು ಬಲಯುತವಾಗಿ ಮಾಡಲು ಹೊಸಬರ ಅವಶ್ಯಕತೆ ಇದೆ. ದೊಡ್ಡ ಮಟ್ಟದ ಗೆಲುವು ಸಾಧಿಸಬೇಕಾದರೆ ಕಂಪನಿಗೆ ಉದ್ಯೋಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.
ಇದೀಗ ಹಲವು ಕಂಪನಿಗಳು ನಿಧಾನಗತಿಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿಬೆ. ಅದರಂತೆಯೇ ಇನ್ಫೋಸಿಸ್ ಸಹ 20,000ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications