UPSC Recruitment 2023: 1312 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ; ಅರ್ಜಿ ಸಲ್ಲಿಕೆ ದಿನಾಂಕ, ಶುಲ್ಕ ವಿವರ
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ದೇಶದಲ್ಲಿ ಖಾಲಿ ಹುದ್ದೆಗಳಿರುವ 1312 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಆರ್ಥಿಕ ಸೇವೆ, ಸಂಯೋಜಿತ ವೈದ್ಯಕೀಯ ಸೇವಾ ಹುದ್ದೆಗಳಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸಲಿದೆ.
ಯುಪಿಎಸ್‌ಸಿ ಹುದ್ದೆಗಳಿಗೆ ಈಗಾಗಲೇ ಏಪ್ರಿಲ್ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಯುಪಿಎಸ್‌ಸಿಯಲ್ಲಿನ ಉದ್ಯೋಗವಕಾಶವನ್ನು ಬಳಸಿಕೊಳ್ಳಬಹುದು.

ಕೇಂದ್ರ ಲೋಕಸೇವಾ ಆಯೋಗ ಆಹ್ವಾನಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಗಳ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಈ ಕೆಳಗೆ ತಿಳಿಯಬಹುದು.
ಯುಪಿಎಸ್‌ಸಿ ಹುದ್ದೆಗಳ ಮಾಹಿತಿ
ಭಾರತೀಯ ಆರ್ಥಿಕ ಸೇವೆ / ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ- 51 ಹುದ್ದೆಗಳು
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ - 1261 ಹುದ್ದೆಗಳು
ಯುಪಿಎಸ್‌ಸಿ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ
ಭಾರತೀಯ ಆರ್ಥಿಕ ಸೇವೆ/ ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಹುದ್ದೆಗಳು - ಸ್ನಾತಕೋತ್ತರ ಪದವಿ
ಸಂಯೋಜಿತ ವೈದ್ಯಕೀಯ ಸೇವಾ ಹುದ್ದೆಗಳು - ಎಂಬಿಬಿಎಸ್

ವಯೋಮಿತಿ
ಭಾರತೀಯ ಆರ್ಥಿಕ ಸೇವೆ/ ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಹುದ್ದೆಗಳಿಗೆ - 21ರಿಂದ 30 ವರ್ಷ
ಸಂಯೋಜಿತ ವೈದ್ಯಕೀಯ ಸೇವಾ ಹುದ್ದೆಗಳಿಗೆ - 32 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ- 5 ವರ್ಷ
PwBD (ವಿಕಲಚೇತನ) ಅಭ್ಯರ್ಥಿಗಳಿಗೆ - 10 ವರ್ಷ
ವೇತನ:
ಭಾರತೀಯ ಆರ್ಥಿಕ ಸೇವೆ / ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ- ನಿಗದಿಯಾಗಿಲ್ಲ
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ- ಮಾಸಿಕ 56,100 ರೂ.ನಿಂದ 1,77,500 ರೂ.
ಯುಪಿಎಸ್‌ಸಿ ಪರೀಕ್ಷಾ ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಮಹಿಳಾ/ PwBD (ವಿಕಲ ಚೇತನ) ಅಭ್ಯರ್ಥಿಗಳು - ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ - 200 ರೂ.
ಅರ್ಜಿ ಶುಲ್ಕ ಪಾವತಿ - ಆನ್ಲೈನ್ ಮೂಲಕ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ನಡೆಯಲಿದ್ದು, ನಂತರ ಸಂದರ್ಶನ ಇರಲಿದೆ.
ಉದ್ಯೋಗದ ಸ್ಥಳ: ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ಮಾಡಲಾಗುತ್ತದೆ.
ಯುಪಿಎಸ್‌ಸಿ ಪರೀಕ್ಷೆಯ ದಿನಾಂಕ
ಭಾರತೀಯ ಆರ್ಥಿಕ ಸೇವೆ/ ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ - ಜೂನ್ 23, 2023
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ - ಜುಲೈ 16, 2023












Click it and Unblock the Notifications