ಉಡುಪಿಯಲ್ಲಿ ಜನವರಿ 12 ಮತ್ತು 13ರಂದು ಉದ್ಯೋಗ ಮೇಳ

ಉಡುಪಿ, ಡಿಸೆಂಬರ್ 24 : ಸಂಚಾಲನ ಸಂಸ್ಥೆ ಉಡುಪಿಯಲ್ಲಿ 2 ದಿನಗಳ ಕಾಲ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. 'ಉಡುಪಿ ಉದ್ಯೋಗ ಮೇಳ' ಎಂಬ ಹೆಸರಿನಲ್ಲಿ ಜನವರಿ 12 ಮತ್ತು 13ರಂದು ಉದ್ಯೋಗ ಮೇಳ ನಡೆಯಲಿದೆ.

ಉಡುಪಿಯ ಅಜ್ಜರಕಾಡುವಿನ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. ರಾಷ್ಟ್ರೀಯ ಯುವಕರ ದಿನಾಚರಣೆ, ಸ್ವಾಮಿ ವಿವೇಕಾನಂದರ 156 ಹುಟ್ಟು ಹಬ್ಬದ ಪ್ರಯುಕ್ತ ಮೇಳ ಆಯೋಜನೆ ಮಾಡಲಾಗಿದೆ.

150 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಉಡುಪಿ ಜಿಲ್ಲೆಯ 18 ರಿಂದ 40 ವರ್ಷದ ನಿರುದ್ಯೋಗಿ ಯುವಕ/ಯುವತಿಯರು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

Two days maga job fair in Udupi on January 12 and 13

ಎಸ್‌ಎಸ್‌ಎಲ್‌ಸಿ ಪಾಸು/ಫೇಲ್, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ ವಿದ್ಯಾರ್ಹತೆ ಹೊಂದಿರುವ ಯುವಕ/ಯುವತಿಯರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಯಸುವ ಅಭ್ಯರ್ಥಿಗಳು Ashachandra Trade Centre, II Floor, PPC First Cross Road, Opposite District Court Complex, Udupi 576101 ಈ ವಿಳಾಸಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು 5 ರೆಸ್ಯೂಮ್ ಪ್ರತಿಗಳು, ವಿದ್ಯಾರ್ಹತೆಯ ಪ್ರಮಾಣ ಪತ್ರದೊಂದಿಗೆ ಆಗಮಿಸಬೇಕು. ಜನವರಿ 5ರೊಳಗೆ ಆಸ್ತಕರು ನೋಂದಣಿ ಮಾಡಿಕೊಳ್ಳಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+