ಟಾಟಾ ಟೆಕ್ನಾಲಜಿಸ್ ಲಿ. ಸಹಭಾಗಿತ್ವದಲಿ ಉದ್ಯೋಗ ಯೋಜನೆ: ಅರ್ಜಿ ಆಹ್ವಾನ
ಧಾರವಾಡ, ಅಕ್ಟೋಬರ್ 9: ಧಾರವಾಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಟಾಟಾ ಟೆಕ್ನಾಲಜಿಸ್ ಲಿ. ಸಹಭಾಗಿತ್ವದಲ್ಲಿ 2021ನೇ ಸಾಲಿನಲ್ಲಿ ಉದ್ಯೋಗ ಯೋಜನೆ ಎಸ್‍ಸಿವಿಟಿ ಅಡಿಯಲ್ಲಿ ಪ್ರಾರಂಭಿಸಿದ ಹೊಸ ವೃತ್ತಿಗಳಾದ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್, ಅಡ್ವಾನ್ಸ್ ಮ್ಯಾನುಫ್ಯಾಕ್ಚರಿಂಗ್ 2 ವರ್ಷಗಳ ತರಬೇತಿ ಪಡೆಯಲು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಆಸಕ್ತ 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅಕ್ಟೋಬರ್ 21 ರೊಳಗೆ ಸಂಸ್ಥೆಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಸಬೇಕು.
Product Design and Development, Internet of Things, Advanced Machining, chining, Advanced welding, Advanced Plumbing ಎಂಬ ಅಲ್ಪಾವಧಿ ಕೋರ್ಸ್‍ಗಳನ್ನೂ ಸಹ ಪ್ರಾರಂಭಿಸಲಾಗಿದೆ.

ಆಸಕ್ತರು ತರಬೇತಿಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7899022090, 9535313400,9900469954, 9606890442 ಸಂಪರ್ಕಿಸಬಹುದೆಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ ಗುತ್ತಿಗೆದಾರರಾಗಲು ಆಹ್ವಾನ
ರಾಜ್ಯ ಸರ್ಕಾರವು 50 ಲಕ್ಷ ರೂ. ಒಳಗಿನ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವ್ಯಕ್ತಿಗಳಿಗೆ ಮೀಸಲಾತಿ ನೀಡಲು 2017ರಲ್ಲಿ ಆದೇಶ ಹೊರಡಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇತ್ತಿಚಿಗೆ ನಡೆದ ಜಿಲ್ಲಾಮಟ್ಟದ ಎಸ್‍ಸಿಪಿ ಹಾಗೂ ಟಿಎಸ್‍ಪಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವ್ಯಕ್ತಿಗಳು ಗುತ್ತಿಗೆದಾರರಾಗಲು ಅನುಸರಿಸಬೇಕಾದ ಕ್ರಮಗಳ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
50 ಲಕ್ಷ ರೂ. ಒಳಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.17.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.6.95 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ನೋಂದಾಯಿತಿ ಗುತ್ತಿಗೆದಾರರು ಅರ್ಜಿ ಸಲ್ಲಿಸಬಹುದು.
4ನೇ ದರ್ಜೆ ಗುತ್ತಿಗೆದಾರರಾಗಲು ಅಗತ್ಯ ದಾಖಲೆಗಳು
ಪಾಸ್‍ಪೋರ್ಟ್ ಅಳತೆಯ 3 ಭಾವಚಿತ್ರಗಳು, ರಾಷ್ಟ್ರೀಕೃತ ಬ್ಯಾಂಕಿನಿಂದ 50 ಸಾವಿರ ರೂ. ಮೌಲ್ಯದ ಸಾಲ್ವೆನ್ಸಿ ಪತ್ರ, ಕ್ಲಾಸ್ 1 ಅಥವಾ ಕ್ಲಾಸ್ 2 ಗುತ್ತಿಗೆದಾರರಿಂದ 50 ಸಾವಿರ ರೂ. ವರೆಗಿನ ಕಾಮಗಾರಿ ಮಾಡಿದ ಪ್ರಮಾಣ ಪತ್ರ, ತಹಶೀಲ್ದಾರರಿಂದ ಪಡೆದ ರಹವಾಸಿ ಪ್ರಮಾಣ ಪತ್ರ, ಜಿಎಸ್‍ಟಿ ಸಂಖ್ಯೆ, 20 ರೂ. ಬಾಂಡ್‍ನಲ್ಲಿ ಮುಚ್ಚಳಿಕೆ ಪತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, 4ನೇ ದರ್ಜೆ ಗುತ್ತಿಗೆದಾರರಾಗಲು 2 ಸಾವಿರ ರೂ. ನೋಂದಣಿ ಶುಲ್ಕ ಹಾಗೂ ಕ್ಷೇಮನಿಧಿಗೆ 500 ರೂ.ಗಳನ್ನು ಚಲನ್ ಮೂಲಕ ಪಾವತಿಸಬೇಕು.
ಈ ಎಲ್ಲ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿದ 10 ಕೆಲಸದ ದಿನಗಳಲ್ಲಿ ಅರ್ಹರಿಗೆ 4ನೇ ದರ್ಜೆ ಗುತ್ತಿಗೆದಾರ ನೋಂದಣಿ ಪ್ರಮಾಣ ಪತ್ರ ಹಾಗೂ ಪುಸ್ತಕ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಲೋಕೋಪಯೋಗಿ ಇಲಾಖೆಯ 0836-2747944 ದೂ. ಸಂಖ್ಯೆ ಸಂಪರ್ಕಿಸಬಹುದು.












Click it and Unblock the Notifications