SBI Good News: ಮಹಿಳೆಯರಿಗೆ ಎಸ್‌ಬಿಐ ಬ್ಯಾಂಕ್ ಭರ್ಜರಿ ಶುಭಸುದ್ದಿ!
State Bank Of India Good News: ದೇಶದ ಅತೀ ದೊಡ್ಡ ಬ್ಯಾಂಕ್ ಎಸ್‌ಬಿಐ (State Bank Of India) ಆಗಾಗ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿರುತ್ತದೆ. ಈ ನಡುವೆಯೇ ಇದೀಗ ಮಹಿಳೆಯರಿಗೆ ಭರ್ಜರಿ ಶುಭಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬ್ಯಾಂಕ್‌ಗಳ ಉದ್ಯೋಗಿಗಳಲ್ಲಿ ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿರುತ್ತಾರೆ. ಆದರೆ, ಇದೀಗ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಎಸ್‌ಬಿಐ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಮೂಲಕ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಭಾರತದ ಅತಿದೊಡ್ಡ ಬ್ಯಾಂಕ್ ಆದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಉದ್ಯೋಗಿಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಳ ಮಾಡಲು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. 2030ರ ವೇಳೆಗೆ ತನ್ನ ಒಟ್ಟು ಉದ್ಯೋಗಿಗಳಲ್ಲಿ ಮಹಿಳೆಯರ ಪ್ರಮಾಣವನ್ನು ಶೇಕಡ 30ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಟ್ಟು 2.4 ಲಕ್ಷ ಉದ್ಯೋಗಿಗಳಲ್ಲಿ ಶೇಕಡ 27ರಷ್ಟು ಮಹಿಳೆಯರು ಇದ್ದಾರೆ. ಆದರೆ, ಮುಂಚೂಣಿ ಸಿಬ್ಬಂದಿಯಲ್ಲಿ ಈ ಪ್ರಮಾಣವು ಈಗಾಗಲೇ ಶೇಕಡ 33ರಷ್ಟು ಇದೆ. ಈ ಅಂತರವನ್ನು ಕಡಿಮೆ ಮಾಡಿ, ಸಂಸ್ಥೆಯ ಎಲ್ಲಾ ಹಂತಗಳಲ್ಲಿ ಲಿಂಗ ವೈವಿಧ್ಯತೆಯನ್ನು ಬಲಪಡಿಸಲು ಬ್ಯಾಂಕ್ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಸ್‌ಬಿಐನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಕುಮಾರ್ ಪೊಲುದಾಸು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲದೆ, ಜೊತೆಗೆ ಮಹಿಳಾ ಉದ್ಯೋಗಿಗಳಿಗೆ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಸಾಧಿಸಲು ಅನುಕೂಲ ಆಗುವಂತೆ ಎಸ್‌ಬಿಐ ಹಲವು ಮಹತ್ವದ ಯೋಜನೆಗಳನ್ನು ಸಹ ಜಾರಿಗೊಳಿದೆ. ಕೆಲಸದ ವೇಳೆ ತಾಯಂದಿರಿಗೆ ಮಕ್ಕಳ ಪಾಲನಾ ಕೇಂದ್ರಕ್ಕಾಗಿ ವಿಶೇಷ ಭತ್ಯೆ ನೀಡಲಾಗುತ್ತಿದೆ. ಜೊತೆಗೆ ಹೆರಿಗೆ ರಜೆ, ದೀರ್ಘ ರಜೆ ಅಥವಾ ಅನಾರೋಗ್ಯದ ನಂತರ ಕೆಲಸಕ್ಕೆ ಮರಳುವ ಮಹಿಳೆಯರಿಗಾಗಿ ವಿಶೇಷ ತರಬೇತಿ ಮತ್ತು ಪುನಶ್ಚೇತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಎಂಪವರ್ ಹರ್ ಎಂಬ ಮಹತ್ವದ ಯೋಜನೆಯ ಮೂಲಕ ಮಹಿಳಾ ಉದ್ಯೋಗಿಗಳನ್ನು ಗುರುತಿಸಿ, ಅವರಿಗೆ ಮಾರ್ಗದರ್ಶನ ನೀಡಿ ನಾಯಕತ್ವದ ಪಾತ್ರಗಳಿಗೆ ಹೊಂದಿಕೊಳ್ಳುವಂತೆ ಅವರನ್ನು ತಯಾರಿ ಮಾಡಲಾಗುತ್ತಿದೆ. ಅಲ್ಲದೆ, ಮಹಿಳಾ ಉದ್ಯೋಗಿಗಳ ಆರೋಗ್ಯದ ಬಗ್ಗೆಯೂ ಬ್ಯಾಂಕ್ ವಿಶೇಷ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಹಲವು ಆರೋಗ್ಯ ಉಪಕ್ರಮಗಳನ್ನು ಆರಂಭಿಸಲಾಗಿದೆ.
ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ನಿಯಮಿತ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಜೊತೆಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಇನ್ನು ಗರ್ಭಿಣಿ ಉದ್ಯೋಗಿಗಳಿಗೆ ವಿಶೇಷ ಪೌಷ್ಟಿಕಾಂಶ ಭತ್ಯೆ ನೀಡಲಾಗುತ್ತಿದೆ. ದೇಶಾದ್ಯಂತ ಎಸ್‌ಬಿಐ 340ಕ್ಕೂ ಹೆಚ್ಚು ಸಂಪೂರ್ಣ ಮಹಿಳಾ ಶಾಖೆಗಳಿದ್ದು, ಇವು ಯಶಸ್ವಿಯಾಗಿ ನಿರ್ವಹಿಸುತ್ತಿವೆ.
ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಳ ಮಾಡಲಿ ಎಸ್‌ಬಿಐ ಯೋಜನೆ ರೂಪಿಸಿದೆ. ಈ ಎಲ್ಲಾ ಕ್ರಮಗಳ ಮೂಲಕ ಮಹಿಳೆಯರಿಗೆ ಸುರಕ್ಷಿತ, ಸಬಲೀಕರಣದ ವಾತಾವರಣ ನಿರ್ಮಾನ ಮಾಡಲು ಎಸ್‌ಬಿಐ ಬದ್ಧವಾಗಿದೆ ಎಂದು ಮಾನವ ಸಂಪನ್ಮೂಲ ವಿಭಾಗ ತಿಳಿಸಿದೆ. ಒಟ್ಟಿನಲ್ಲಿ ಹೇಳುವುದಾದ್ರೆ, ಈ ನಿರ್ಧಾರ ಉತ್ತಮ. ಇದನ್ನು ಎಲ್ಲಾ ಬ್ಯಾಂಕ್‌ಗಳು ಅಳವಡಿಸಿಕೊಳ್ಳಬೇಕು ಎನ್ನುವ ಕೂಗುಗಳು ಜೋರಾಗಿ ಎದ್ದಿವೆ. ಯಾಕಂದ್ರೆ, ಇದು ಮಹಿಳೆಯರ ಹಿತದೃಷ್ಟಿಯಿಂದ ತುಂಬಾ ಅನುಕೂಲ ಎಂದು ಹೇಳಲಾಗುತ್ತಿದೆ.












Click it and Unblock the Notifications