NWKRTC: ಬಸ್ ಚಾಲನಾ ವೃತ್ತಿ ಪರೀಕ್ಷೆ ತರಬೇತಿ ಅಪ್ಡೇಟ್, ಅಭ್ಯರ್ಥಿಗಳು ಗಮನಿಸಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಚಾಲನಾ ವೃತ್ತಿ ಪರೀಕ್ಷೆ ತರಬೇತಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಮಾಡಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಗೆ ಬರುವ ಜಿಲ್ಲೆಗಳ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆ ಕಡ್ಡಾಯವಾಗಿದೆ. ಈ ಅಭ್ಯರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು. ಇನ್ನೊಮ್ಮೆ ಈ ಅವಕಾಶ ಕಲ್ಪಿಸುವುದಿಲ್ಲ ಎಂದೂ ಹೇಳಲಾಗಿದೆ. ಈಗಾಗಲೇ ವೃತ್ತಿ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಮನಾಬಾದ್ ಪ್ರಾದೇಶಿಕ ತರಬೇತಿ ಕೇಂದ್ರ ಚಾಲನಾ ಪಥದಲ್ಲಿ 2025ನೇ ಸಾಲಿನ ಡಿಸೆಂಬರ್ 14 ರಿಂದ ಪ್ರಾರಂಭಿಸಿರುವುದಾಗಿ ಹೇಳಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

NWKRTC Bus Driving Education Exam Training Update Candidates Take Note

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಚಾಲನಾ ವೃತ್ತಿ ಪರೀಕ್ಷೆ ತರಬೇತಿಗೆ ಸಂಬಂಧಿಸಿದಂತೆ ಅಪ್‌ಡೇಟ್‌ವೊಂದನ್ನು ಕೊಟ್ಟಿದೆ. ಇದರಂತೆ ಸಂಖ್ಯೆ:01/2019 ದಿನಾಂಕ: 10-12-2019 ರನ್ವಯ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಲ್ಲಿ ಪ್ರಥಮ ಹಂತವಾಗಿ ಚಾಲಕ-ಕಂ-ನಿರ್ವಾಹಕ (ಪಜಾ-ಹಿಂಬಾಕಿ) ಹಾಗೂ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ(ಎರಡೂ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಸಂಬಂಧಿಸಿದೆ. ಈ ರೀತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಚಾಲನಾ ವೃತ್ತಿ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಮನಾಬಾದ್ ಪ್ರಾದೇಶಿಕ ತರಬೇತಿ ಕೇಂದ್ರ ಚಾಲನಾ ಪಥದಲ್ಲಿ ಡಿಸೆಂಬರ್ 14 ರಿಂದ ಪ್ರಾರಂಭಿಸಿರುವುದಾಗಿ ಹೇಳಲಾಗಿದೆ.

ಸಂಸ್ಥೆಯ ಅಧಿಕೃತ ವೆಬ್ ಸೈಟ್ www.nwkrtc.karnataka.gov.in ನಲ್ಲಿ ಅಭ್ಯರ್ಥಿಗಳು ಅವರ ಅರ್ಜಿ ಸಂಖ್ಯೆ, ಜನ್ಮ ದಿನಾಂಕವನ್ನು ನಮೂದಿಸಿ ಕರೆ ಪತ್ರವನ್ನು ಮುದ್ರಿಸಿಕೊಳ್ಳಲು ಹೇಳಲಾಗಿತ್ತು. ಅಲ್ಲದೆ ನಿಗದಿತ ಸ್ಥಳ,ದಿನಾಂಕ, ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯು 2025ರ ಜನವರಿ 7 ರವರೆಗೆ ಮಾತ್ರ ನಡೆಯಲಿದೆ. ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ಅಂತಿಮ ಅವಕಾಶ ನೀಡಿ 2025ರ ಜನವರಿ 8 ರಿಂದ 13 ರವರೆಗೆ (ಭಾನುವಾರ ಹೊರತುಪಡಿಸಿ) ಹಾಜರಾಗುವಂತೆ ತಿಳಿಸಲಾಗಿದೆ.

2025ರ ಜನವರಿ 13 ರ ನಂತರ ಚಾಲನಾ ವೃತ್ತಿ ಪರೀಕ್ಷೆಗೆ ಮರಳಿ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಡಿಸೆಂಬರ್ 27ಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಘೋಷಣೆ ಆಗಿದ್ದರಿಂದ ಡಿಸೆಂಬರ್ 27ಕ್ಕೆ ನಿಗದಿಯಾಗಿದ್ದ ಚಾಲನಾ ವೃತ್ತಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅಭ್ಯರ್ಥಿಗಳಿಗೆ ಜನವರಿ 7ರಂದು ಚಾಲನಾ ವೃತ್ತಿ ಪರೀಕ್ಷೆಯನ್ನು ಮರು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೇ ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗುವಂತೆ ವಾಕರಸಾ ಸಂಸ್ಥೆ ಪ್ರಕಟಣೆ ತಿಳಿಸಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜಾಹೀರಾತು ಸಂಖ್ಯೆ 01/2019, ದಿ.10/12/2019 ರನ್ವಯ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಗೆ ಬರುವ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಚಾಲನಾ ವೃತ್ತಿ ಪರೀಕ್ಷೆಯನ್ನು 2025ರ ಜನವರಿ 15 ರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹುಮನಾಬಾದ್ ಪ್ರಾದೇಶಿಕ ತರಬೇತಿ ಕೇಂದ್ರ ಚಾಲನಾ ಪಥದಲ್ಲಿ ಪ್ರಾರಂಭಿಸಲಾಗುವುದು.

ಸಂಸ್ಥೆಯ ವೆಬ್ಸೈಟ್ ವಿಳಾಸ www.nwkrtc.karnataka.gov.in ನಲ್ಲಿ ತಮ್ಮ ಅರ್ಜಿ ಸಂಖ್ಯೆ, ಜನ್ಮ ದಿನಾಂಕವನ್ನು ನಮೂದಿಸಿ ಕರೆ ಪತ್ರವನ್ನು ಮುದ್ರಿಸಿಕೊಂಡು ನಿಗದಿತ ಸ್ಥಳ, ದಿನಾಂಕ, ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ವಾಕರಸಾ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+