NHAI Recruitment 2025: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಸಿಕ ₹2,00,000 ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ

NHAI Recruitment 2025: ಇದೀಗ ಹಲವು ಕಂಪನಿಗಳು ಉದ್ಯೋಗವಕಾಶಗಳನ್ನು ಒದಗಿಸುತ್ತಲೇ ಇವೆ. ಹಾಗೆಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುತ್ತಿಗೆ ಆಧಾರದ ಮೇಲೆ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹಾಗೂ ಆಯ್ಕೆ ಆದವರಿಗೆ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿಗಳು ಮಾತ್ರ ಈ ಕೆಲಸಗಳಿಗೆ ಆನ್‌ಲೈನ್‌​ ಮೂಲಕ ಅರ್ಜಿ ಸಲ್ಲಿಸಬುದಾಗಿದೆ. ಮಾಡಬಹುದಾಗಿದೆ. ಗರಿಷ್ಠ 65 ವರ್ಷಗಳ ಒಳಗಿನವರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬುದಾಗಿದೆ. ಅರ್ಜಿ ಸಲ್ಲಿಸಲಿ ಕೊನೇ ದಿನಾಂಕ ಫೆಬ್ರವರಿ 6, 2025 ಆಗಿದೆ.

National Highways Authority of India Invites Applications for Monthly 2 00 000 Salary Posts

ಸಲಹೆಗಾರ, ಜಂಟಿ ಸಲಹೆಗಾರ ಸೇರಿ ಒಟ್ಟು 3 ಹುದ್ದೆಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ. ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಅಲ್ಲದೇ ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರಬೇಕು. ಅಂತಹವರಿಗೆ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಗರಿಷ್ಠ 3 ವರ್ಷಗಳವರೆಗೆ ಮಾತ್ರ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತೆ. ಈಗಾಗಲೇ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ ಎಲ್ಲ ಮಾನದಂಡಗಳನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಎನ್‌ಎಚ್‌ಎಐ ಹೆಡ್ ಕ್ವಾರ್ಟರ್ ಪಾಟ್ನಾ ಮತ್ತು ಚೆನ್ನೈನ ಕಚೇರಿಗಳಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ. ಯಾವುದೇ ಸಮಯದಲ್ಲಾದರೂ ಒಪ್ಪಂದವನ್ನು ರದ್ದು ಮಾಡಿ ಹುದ್ದೆ ಕೊನೆಗೊಳಿಸುವ ಹಕ್ಕನ್ನು ಸಂಸ್ಥೆ ಹೊಂದಿರುತ್ತದೆ. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 75,000-2,00,000 ರೂಪಾಯಿವರೆಗೆ ವೇತನ ಇರಲಿದೆ. ಜೊತೆಗೆ ಭತ್ಯೆಗಳನ್ನ ನೀಡಲಾಗುತ್ತದೆ ಎಂದು ಎನ್‌ಎಚ್‌ಎಐ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ https://nhai.gov.in/nhai/sites/default/files/vacancy_files/Notification_for_the_post_of_Advisior_Utility.pdfಗೆ ಭೇಟಿ ನೀಡಬಹುದಾಗಿದೆ.

10,000ಕ್ಕೂ ಉದ್ಯೋಗಗಳ ನೇಮಕಾತಿಗೆ ಯೋಜನೆ: ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ವಿಪ್ರೋ ಕೂಡ ಒಂದಾಗಿದೆ. ಇದೀಗ ಈ ಕಂಪನಿ ಬೃಹತ್ ಸಖ್ಯೆಯಲ್ಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಲವು ಕಂಪನಿಗಳು ಉದ್ಯೋಗವಕಾಶಳನ್ನು ಸೃಷ್ಟಿಸುತ್ತಲೇ ಇವೆ. ಹಾಗೆಯೇ ದೇಶದ ಪ್ರತಿಷ್ಠಿತ ಕಂಪನಿಗಳಲ್ಲೊಂದಾದ ವಿಪ್ರೋ 2025-26ರ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್‌ಗಳಿಂದ 10,000-12,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ವಿಪ್ರೋ ಜನವರಿ 17ರಂದು ಮಾಹಿತಿ ಹೊರಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+