KKRTC Recruitment 2025: ಕೆಕೆಆರ್‌ಟಿಸಿಯಲ್ಲಿ 315 ಹುದ್ದೆಗಳ ಭರ್ತಿಗೆ ಅಧಿಸೂಚನೆ
KKRTC Recruitment 2025: ರಾಜ್ಯ ರಸ್ತೆ ಸಾರಿಗೆ ವಿಭಾಗಗಳಲ್ಲೊಂದಾ ಕೆಕೆಆರ್‌ಟಿಸಿಯಲ್ಲಿ ಖಾಲಿಯಿರುವ 315 ಹುದ್ದೆಗಳ ಭರ್ತಿಗೆ ಅಧಿಸೂಚನೆ ಸಿದ್ಧಪಡಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಏನೆಲ್ಲ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)ಲ್ಲಿನ ವಿವಿಧ 315 ಹುದ್ದೆಗಳ ಭರ್ತಿಗೆ ಅಧಿಸೂಚನೆ ಸಿದ್ಧಪಡಿಸಿಕೊಂಡಿದೆ. ಈ ಹುದ್ದೆಗಳಿಗೆ ಕೆಇಎ ಯಾವುದೇ ಕ್ಷಣದಲ್ಲಾದರೂ ಅಧಿಸೂಚಿಸಿ, ಅರ್ಜಿ ಆಹ್ವಾನಿಸುವ ಸಾಧ್ಯತೆಯಿದೆ.

ಕೆಕೆಆರ್‌ಟಿಸಿಯಲ್ಲಿ ಉದ್ಯೋಗ ಸೇರಬಯಸುವವರು, ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾಗಿರಬೇಕಾಗುತ್ತದೆ. ಈಗಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಳ್ಳಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಪ್ರಾಧಿಕಾರವಾಗಿದ್ದು, ಉದ್ಯೋಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ. ಇದರಲ್ಲಿ ಸಹಾಯಕ ಲೆಕ್ಕಿಗ, ನಿರ್ವಾಹಕ (ಕಂಡಕ್ಟರ್) ಸೇರಿ ಒಟ್ಟು 315 ಹುದ್ದೆಗಳು ಖಾಲಿಯಿವೆ. ಸಹಾಯಕ ಲೆಕ್ಕಿಗ 3 RPC, 12 HK ಅಂದರೆ ಒಟ್ಟು 15, ನಿರ್ವಾಹಕ (ಕಂಡಕ್ಟರ್) 60 RPC, 240 HK ಸೇರಿ 300 ಹುದ್ದೆಗಳು ಖಾಲಿಯಿವೆ.
* ಸಹಾಯಕ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಕಾನೂನಿನ ಮೂಲಕ ಸ್ಥಾಪಿಸಲಾದ ವಿಶ್ವ ವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ 3 ವರ್ಷಗಳ ಬ್ಯಾಚುಲರ್ ಡಿಗ್ರಿ ಉತ್ತೀರ್ಣರಾಗರಬೇಕಾಗುತ್ತದೆ. ಜೊತೆಗೆ ಕಂಪ್ಯೂಟರ್ ಜ್ಞಾನ ಅವಶ್ಯಕ. ಆದ್ದರಿಂದ ಕನಿಷ್ಠ 3 ತಿಂಗಳ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.
* ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ದ್ವಿತೀಯ ಪಿಯುಸಿ ಅಥವಾ ತತ್ಸಮಾನ (ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ) ಪಡೆದಿರಬೇಕು.
ಇನ್ನು ಕೆಕೆಆರ್‌ಟಿಸಿ ಸಹಾಯಕ ಲೆಕ್ಕಿಗ, ನಿರ್ವಾಹಕ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷಾ ವಿಧಾನವನ್ನು ಕೆಇಎ ಬಿಡುಗಡೆ ಮಾಡಿದೆ. ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021ರ ಪ್ರಕಾರ 2 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
* ಪತ್ರಿಕೆ-1 : ಸಾಮಾನ್ಯ ಜ್ಞಾನ
* ಪತ್ರಿಕೆ-2: ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಜ್ಞಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 41 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ ಮೀರಿರಬಾರದು.
ಇನ್ನು ಕೋವಿಡ್ ಹಿನ್ನೆಲೆ ಉದ್ಯೋಗ ವಂಚಿತ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಹೊರಡಿಸಿದ 3 ವರ್ಷಗಳ ವಯಸ್ಸಿನ ಸಡಿಲಿಕೆಯನ್ನು ಒಂದು ಬಾರಿಗೆ ಒಂದು ವರ್ಷದ ಅವಧಿಗೆ ಅನ್ವಯಿಸಿ ಆದೇಶಿಸಿದ ಆಧಾರದಲ್ಲಿ ನೀಡಲಾಗಿದೆ. ಒಂದು ವೇಳೆ ಸದರಿ ನಿಯಮ ಈ ಹುದ್ದೆಗಳಿಗೆ ಅನ್ವಯ ಆಗದಿದ್ದಲ್ಲಿ, ಗರಿಷ್ಠ ವಯಸ್ಸಿನ ಅರ್ಹತೆಯಲ್ಲಿ 3 ವರ್ಷ ಕಡಿಮೆ ಆಗಲಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
* ಜನ್ಮ ದಿನಾಂಕ ದಾಖಲೆ
* ಜಾತಿ ಪ್ರಮಾಣ ಪತ್ರ
* ಮೀಸಲಾತಿ ಕೋರುವ ಪ್ರಮಾಣ ಪತ್ರಗಳು












Click it and Unblock the Notifications