ರಾಜ್ಯದ ಸರ್ಕಾರಿ ಕಾಲೇಜುಗಳಿಗೆ 10,419 ಅತಿಥಿ ಉಪನ್ಯಾಸಕರು, 3,853 ಶಿಕ್ಷಣ ಸಂಯೋಜಕರ ನೇಮಕಾತಿಗೆ ಗ್ರೀನ್ ಸಿಗ್ನಲ್

ರಾಜ್ಯಾದ್ಯಂತ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂರು ವರ್ಷಗಳ ಅವಧಿಗೆ ಒಟ್ಟು 10,419 ಅತಿಥಿ ಉಪನ್ಯಾಸಕರ ನೇಮಕ ಮಾಡಲು ಉನ್ನತ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 2024 ರಲ್ಲಿ ಹೈಕೋರ್ಟ್ ನೀಡಿದ ಆದೇಶದ ಅನ್ವಯ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಸಂಭಾವ್ಯ ಅಭ್ಯರ್ಥಿಗಳಿಗೆ ಆನ್‌ಲೈನ್ ಕೌನ್ಸೆಲಿಂಗ್ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಇದಲ್ಲದೆ, ನಿಗದಿತ ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಮಾನದಂಡಗಳನ್ನು ಪೂರೈಸದ 3,853 ಅತಿಥಿ ಉಪನ್ಯಾಸಕರನ್ನು 2026-27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ 'ಶಿಕ್ಷಣ ಸಂಯೋಜಕರು' (Education Coordinators) ಆಗಿ ನೇಮಿಸಲು ಇಲಾಖೆ ತೀರ್ಮಾನಿಸಿದೆ. ಈ ಹುದ್ದೆಯು ಪ್ರಯೋಗಾಲಯಗಳಲ್ಲಿ (ಲ್ಯಾಬ್) ಇತರ ಉಪನ್ಯಾಸಕರಿಗೆ ಸಹಾಯ ಮಾಡುವುದು ಮತ್ತು ಕಾಲೇಜುಗಳಲ್ಲಿ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ನೆರವಾಗುವ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ. ಈ ಮೂಲಕ ಯುಜಿಸಿ ನಿಯಮಾವಳಿಗಳ ಪ್ರಕಾರ ಅರ್ಹತೆ ಹೊಂದಿಲ್ಲದಿದ್ದರೂ, ಸುದೀರ್ಘ ಕಾಲ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಮಾನವೀಯ ನೆಲೆಯಲ್ಲಿ ಸರ್ಕಾರ ಆಸರೆಯಾಗಿದೆ.

Karnataka Government

ಈ ಕುರಿತು ಗುರುವಾರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, "ರಾಜ್ಯ ಸರ್ಕಾರವು ಒಟ್ಟು 11,100 ಅತಿಥಿ ಉಪನ್ಯಾಸಕರನ್ನು ನೇಮಿಸಲು ನಮಗೆ ಅನುಮತಿ ನೀಡಿತ್ತು. ಅದರಂತೆ ನಾವು ಆನ್‌ಲೈನ್ ಕೌನ್ಸೆಲಿಂಗ್ ಮೂಲಕ 10,419 ಅಭ್ಯರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿದ್ದೇವೆ. ಈ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾಯಂ ಸಿಬ್ಬಂದಿಯಾಗಿ ಪರಿಗಣಿಸುವುದಿಲ್ಲ, ಬದಲಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಮಾತ್ರ ನೇಮಿಸಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಸಂಯೋಜಕರ ವೇತನದ ಕುರಿತು ಮುಂದುವರಿದು ಮಾತನಾಡಿದ ಸಚಿವರು, "ಮಾನವೀಯತೆಯ ಆಧಾರದ ಮೇಲೆ, 3,853 ಅತಿಥಿ ಉಪನ್ಯಾಸಕರನ್ನು ಸರ್ಕಾರವು ಶಿಕ್ಷಣ ಸಂಯೋಜಕರನ್ನಾಗಿ ನೇಮಿಸಿದೆ. ಇವರ ವೇತನವನ್ನು ಅವರ ಬೋಧನಾ ಅನುಭವದ ಆಧಾರದ ಮೇಲೆ ನಿಗದಿಪಡಿಸಲಾಗಿದೆ. 5 ರಿಂದ 10 ವರ್ಷಗಳ ಬೋಧನಾ ಅನುಭವ ಇರುವವರಿಗೆ ಮಾಸಿಕ 28,000 ರೂಪಾಯಿ, 10 ರಿಂದ 15 ವರ್ಷಗಳ ಅನುಭವ ಇರುವವರಿಗೆ 29,000 ರೂಪಾಯಿ ಹಾಗೂ 15 ವರ್ಷಗಳಿಗಿಂತ ಹೆಚ್ಚು ಅನುಭವ ಇರುವವರಿಗೆ 30,000 ರೂಪಾಯಿಗಳ ವೇತನವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಈ ಎಲ್ಲಾ ಸಿಬ್ಬಂದಿಗೆ ವಾರ್ಷಿಕ ವೈದ್ಯಕೀಯ ವಿಮೆಯನ್ನು ಕೂಡ ಒದಗಿಸಲಾಗುವುದು" ಎಂದು ತಿಳಿಸಿದ್ದಾರೆ.

ರಾಜ್ಯದ ಹಲವು ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ವರ್ಷಗಳಿಂದಲೂ ಉಪನ್ಯಾಸಕರ ಕೊರತೆ ಎದುರಾಗಿತ್ತು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಇದೀಗ 10 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಣ ಸಂಯೋಜಕರ ನೇಮಕದಿಂದಾಗಿ ಕಾಲೇಜುಗಳಲ್ಲಿ ಬೋಧನಾ ಗುಣಮಟ್ಟ ಗಣನೀಯವಾಗಿ ಸುಧಾರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+