Infosys Recruitment: ಬೃಹತ್ ಮಟ್ಟದಲ್ಲಿ ಉದ್ಯೋಗ ನೇಮಕಾತಿಗೆ ಇನ್ಪೋಸಿಸ್‌ ಪ್ಲಾನ್

Infosys Recruitment 2025: ದೇಶದಲ್ಲಿ ಹಲವು ಕಂನಿಗಳು ಉದ್ಯೋಗವಕಾಶಗಳನ್ನು ಕಲ್ಪಿಸುತ್ತಲೇ ಇವೆ. ಹಾಗೆಯೇ ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ 20,000ಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೃಹತ್ ಮಟ್ಟದಲ್ಲಿ ಹೊಸಬರನ್ನ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಯೋಜನೆ ರೂಪಿಸಿದೆ ಎನ್ನುವ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಭಾರತದ ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಯಾಗಿರುವ ಇನ್ಫೋಸಿಸ್ ಸಂಸ್ಥೆ 20,000ಕ್ಕೂ ಹೆಚ್ಚು ಫ್ರೆಶರ್‌ ಅಭ್ಯರ್ಥಿಗಳನ್ನು ನೇಮಕ ಮಾಡಲು ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.

Infosys Plans Recruitment for Over 20 000 Posts

2026ರ ವರ್ಷದಲ್ಲಿ ಇನ್ಫೋಸಿಸ್‌ ದೊಡ್ಡ ಮಟ್ಟದಲ್ಲಿ ನೇಮಕಾತಿ ಮಾಡುವ ಯೋಜನೆಯಲ್ಲಿದೆ. Q3 ಹಣಕಾಸು ಯೋಜನೆ ರೂಪಿಸಲಾಗಿದೆ ಎಂದು ಕಾರ್ಯನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಪೊರೇಟ್‌ನಲ್ಲಿ ಜನವರಿ-ಸೆಪ್ಟೆಂಬರ್‌​ವರೆಗೆ ತಿಂಗಳುಗಳನ್ನು ವಿಂಗಡಿಸಿ Q3 ಎಂದು ಕರೆಯಲಾಗುತ್ತದೆ.

ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್‌ ಸೇವೆಗಳ ರಫ್ತುದಾರ ಆಗಿರುವ ಇನ್ಫೋಸಿಸ್, ಪಾಶ್ಚಿಮಾತ್ಯ ರಾಷ್ಟ್ರಗಳ ಮಾರುಕಟ್ಟೆಯಿಂದ ತನ್ನ ಆದಾಯದ ಶೇಕಡ 80ರಷ್ಟಕ್ಕಿಂತ ಪ್ರತಿಶತಕ್ಕಿಂತ ಹೆಚ್ಚು ಹಣ ಗಳಿಸುತ್ತದೆ. ಮುಂದಿನ ದಿನಗಳಲ್ಲಿ ಕಂಪನಿಯನ್ನು ಇನ್ನಷ್ಟು ಬಲಯುತವಾಗಿ ಮಾಡಲು ಹೊಸಬರ ಅವಶ್ಯಕತೆ ಇದೆ. ದೊಡ್ಡ ಮಟ್ಟದ ಗೆಲುವು ಸಾಧಿಸಬೇಕಾದರೆ ಕಂಪನಿಗೆ ಉದ್ಯೋಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.

ಇದೀಗ ಹಲವು ಕಂಪನಿಗಳು ನಿಧಾನಗತಿಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿಬೆ. ಅದರಂತೆಯೇ ಇನ್ಫೋಸಿಸ್ ಸಹ 20,000ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

60 ಹುದ್ದೆಗಳಿಗೆ ಅರ್ಜಿ ಆಹ್ವಾನ: ಕೆನರಾ ಬ್ಯಾಂಕ್‌ ಖಾಲಿ ಇರುವ 60 ವಿಶೇಷಾಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು? ಕೊನೆ ದಿನಾಂಕ ಯಾವಾಗ? ಹಾಗೂ ಆಯ್ಕೆ ಆದವರಿಗೆ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

60 ವಿಶೇಷಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ಜನವರಿ 06, 2025ರಿಂದ ಆರಂಭವಾಗಿದ್ದು, ಕೊನೇ ದಿನಾಂಕ ಜನವರಿ 24 ಆಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಬಯಸುವವರು ಪದವಿ, ಬಿಸಿಎ, ಬಿಇ ಅಥವಾ B.Tech ಪದವಿ ಪಡೆದಿರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ canarabank.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಹುದ್ದೆಗೆ ವಯಸ್ಸಿನ ಮಿತಿ ಇರುತ್ತದೆ. ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿಯನ್ನು ಡಿಸೆಂಬರ್ 1, 2024 ರಂತೆ 35 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಅಲ್ಲದೆ, ಮೀಸಲಾತಿ ವರ್ಗಗಳಿಗೆ ವಯಸ್ಸಿನ ಮಿತಿ ಬದಲಾಗುತ್ತದೆ. ಈ ಹುದ್ದೆಗೆ ಲಿಖಿತ ಪರೀಕ್ಷೆ, ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಪ್ರಶ್ನೆ ಪತ್ರಿಕೆ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹಾಗೆಯೇ 100 ಅಂಕಗಳಿಗೆ ಎರಡು ಗಂಟೆಗಳ ಅವಧಿ ಇರುತ್ತದೆ. ಪ್ರತೀ ತಪ್ಪು ಉತ್ತರಗಳಿಗೆ 0.25 ಕಟ್‌ ಆಫ್‌ ಮಾರ್ಕ್ಸ್ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನಗಳು

* ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮುಂಚಿತವಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಮತ್ತು ಐಡಿ ದಾಖಲೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಬಯೋಡಟಾ, ಯಾವುದೇ ಅನುಭವ ಇರುವ ದಾಖಲೆಗಳನ್ನು ತಯಾರಿ ಮಾಡಿಕೊಳ್ಳಿ.
* ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ಸ್ ಎನ್ನುವುದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ.
* ಕೆನರಾ ಬ್ಯಾಂಕ್ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ಇರುವ ಎಲ್ಲಾ ವಿವರಗಳನ್ನು ನವೀಕರಿಸಿ.
* ನಿಮ್ಮ ಇತ್ತೀಚಿನ ಫೋಟೋಗ್ರಾಫ್ ಜೊತೆಗೆ ಅಗತ್ಯ ಪ್ರಮಾಣಪತ್ರಗಳು ಅಥವಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್‌ ಮಾಡಿ.
* ಆಯಾ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
* ಕೆನರಾ ಬ್ಯಾಂಕ್ ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್ಮಿಟ್‌ ಬಟನ್ ಅನ್ನು ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+