RRB Recruitment 2025: ಭಾರತೀಯ ರೈಲ್ವೆ ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
RRB Recruitment 2025: ಭಾರತೀಯ ರೈಲ್ವೆಯು ಖಾಲಿಯಿರುವ 32,438 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆಗೊಳಿಸಿತ್ತು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜನವರಿ 23ರಿಂದ ಆರಂಭಿಸಲಾಗಿದ್ದು, ಫೆಬ್ರವರಿ 22ಕ್ಕೆ ಕೊನೆಗೊಂಡಿತ್ತು. ಆದರೆ, ಇದೀಗ ಈ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಹಾಗಾದರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಮಾರ್ಚ್ 1, 2025ರ ವರೆಗೆ ಅವಕಾಶ ಕಲ್ಪಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ರೈಲ್ವೆ ಇಲಾಖೆ ಬರುವುದರಿಂದ ದೇಶದ ಯಾವುದೇ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಸಿದ್ಧರಾಗಿರಬೇಕು. ಹಲವು ವರ್ಷಗಳಿಂದ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ರೈಲ್ವೆ ಇಲಾಖೆಯ ಗ್ರೂಪ್- ಡಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 18,000 ರೂಪಾಯಿಯಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸಬಯಸುವವರು 10ನೇ ತರಗತಿ ಉತ್ತೀರ್ಣರಾಗಿರಬೇಕಾಗುತ್ತದೆ. ಅರ್ಜಿ ಸಲ್ಲಿಕೆ ಶುಲ್ಕದ ವಿಚಾರಕ್ಕೆ ಬಂದರೆ, ಎಸ್ಸಿ, ಎಸ್ಟಿ, ಮಹಿಳೆ, ವಿಶೇಷ ಚೇತನ- 250 ರೂಪಾಯಿ, ಜನರಲ್, ಇಡಬ್ಲುಎಸ್, ಒಬಿಸಿ ವರ್ಗದವರು 500 ರೂಪಾಯಿ ಪಾವತಿಸಬೇಕಾಗುತ್ತದೆ.
ಬೇಕಾದ ಪ್ರಮುಖ ದಾಖಲೆಗಳು: ಅರ್ಜಿ ಸಲ್ಲಿಸಬಯಸುವವರು ಯಾವುದಾದರೂ ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳು, ಜಾತಿ ಪ್ರಮಾಣ ಪತ್ರ ಅಂಗವೈಕಲ್ಯ ಪ್ರಮಾಣಪತ್ರ (ವಿಶೇಷ ಚೇತನರು ಆಗಿದ್ದರೆ), ಪಾಸ್‌ಪೋಟೋಗಳು, ಸಹಿಯ ದಾಖಲೆಗಳನ್ನು ತರಬೇಕಾಗುತ್ತದೆ. ಈ ಹುದ್ದೆಗಳಿಗೆ 18 ವರ್ಷದಿಂದ 33 ವರ್ಷದವರೆಗಿನವರು ಅರ್ಜಿ ಸಲ್ಲಿಕೆ ಮಾಡಬಹುದು.
ವಯೋಮಿತಿ ಸಡಿಲಿಕೆ ವಿಚಾರಕ್ಕೆ ಬಂದರೆ, ಎಸ್ಸಿ, ಎಸ್ಟಿ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಶೇಷ ಚೇತನ ಅಭ್ಯರ್ಥಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅಭ್ಯರ್ಥಿಗಳನ್ನು ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ), ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪುರುಷರು- 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1000 ಮೀಟರ್ ಓಡಬೇಕು, ಮಹಿಳೆಯರು- 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1000 ಮೀಟರ್ ಓಡಬೇಕಾಗುತ್ತದೆ. 23 ಜನವರಿ 2025ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 01 ಮಾರ್ಚ್ 2025 ಆಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
6 ಹುದ್ದೆಗಳಿಗೆ ಅರ್ಜಿ ಆಹ್ವಾನ: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯಲ್ಲಿ ಖಾಲಿಯಿರುವ 6 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಭಾರತೀಯ ಪ್ರವಾಸೋದ್ಯಮ ವಿಭಾಗವಾಗಿರುವ ಐಆರ್‌ಸಿಟಿಸಿ ಹಾಸ್ಪಿಟಾಲಿಟಿ ಮಾನಿಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಹುದ್ದೆಗಳು ಖಾಲಿ ಇದ್ದು, ಹಾಸ್ಪಿಟಾಲಿಟಿ/ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಬಿಎಸ್ಸಿ ಅಥವಾ ಬಿಬಿಎ/ಎಂಬಿಎ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬೇಕೆಂದರೆ ಗರಿಷ್ಠ 28 ವರ್ಷಗಳು ಆಗಿರಬೇಕಾಗುತ್ತದೆ. ಇನ್ನು ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಮಾರ್ಚ್ 4ರೊಳಗೆ ಅಧಿಕೃತ ವೆಬ್‌ಸೈಟ್ irctc.comಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಫಾರ್ಮ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು 6 ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, 2 ಹುದ್ದೆಗಳು ಸಾಮಾನ್ಯ ವರ್ಗ, 3 ಒಬಿಸಿ ಮತ್ತು 1 ಹುದ್ದೆ ಎಸ್‌ಸಿ ವರ್ಗಕ್ಕೆ ಮೀಸಲಿವೆ. ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷಗಳು ಆಗಿದ್ದು, ಗರಿಷ್ಠ ವಯೋಮಿತಿಯಲ್ಲಿ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ. ಅಂಗವಿಕಲ ವರ್ಗಕ್ಕೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.












Click it and Unblock the Notifications