Railway Recruitment 2025: ಬೃಹತ್ ಮಟ್ಟದಲ್ಲಿ ಹುದ್ದೆಗಳ ನೇಮಕಾತಿಗೆ ಭಾರತೀಯ ರೈಲ್ವೆ ಅರ್ಜಿ ಆಹ್ವಾನ
Railway Recruitment 2025: ಭಾರತೀಯ ರೈಲ್ವೆಯು ಆಗಾಗ ಉದ್ಯೋಗವಕಾವಕಾಶಗಳನ್ನು ಕಲ್ಪುಸುತ್ತಲೇ ಇರುತ್ತದೆ. ಇದೀಗ ಖಾಲಿಯಿರುವ ಡಿ ಗ್ರೂಪ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಹಾಗಾದರೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೂ ಆಯ್ಕೆ ಆದವರಿಗೆ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆರ್‌ಆರ್‌ಬಿಯು ಈ ಸಂಬಂಧ ನೋಟಿಫಿಕೆಶನ್ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ 23 ಜನವರಿ 2025ರಿಂದ ಆರಂಭವಾಗಲಿದ್ದು, ಕೊನೇ ದಿನ 22 ಫೆಬ್ರವರಿ 2025 ಆಗಿದೆ. 33 ವರ್ಷದ ಒಳಗಿನ ಎಲ್ಲಾ ಅಭ್ಯರ್ಥಿಗಳು ಡಿ ಗ್ರೂಪ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ರೈಲ್ವೆ ಇಲಾಖೆಯು ಕೇಂದ್ರ ಸರ್ಕಾರದಡಿ ಬರುವುದರಿಂದ ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವುದೇ ಪ್ರದೇಶದಲ್ಲಿ ಕೆಲಸಕ್ಕೆ ನೇಮಕ ಮಾಡಬಹುದು ಎಂದು ತಿಳಿಸಿದೆ.

ಆರ್‌ಆರ್‌ಬಿಯು 2025ರ ಜವವರಿಯಲ್ಲಿ ದೊಡ್ಡ ಮಟ್ಟದ ನೇಮಕಾತಿ ಮಾಡುತ್ತಿರುವುದು ಆಕಾಂಕ್ಷಿಗಳಿಗೆ ಸಂತಸ ಸುದ್ದಿಯಾಗಿದೆ. ತುಂಬಾ ವರ್ಷಗಳಿಂದ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇದು ಉತ್ತಮವಾದ ಅವಕಾಶವಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿದ್ದು, ಈ ಹಿನ್ನೆಲೆ ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಸ್ವೀಕಾರ ಮಾಡಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಈ ಡಿ ಗ್ರೂಪ್ ಉದ್ಯೋಗಕ್ಕೆ ಭಾರತದಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್ ಡಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಆರಂಭಿಕ ಮಾಸಿಕ ಸಂಬಳ 18,000 ರೂಪಾಯಿ ಆಗಿರುತ್ತದೆ. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಎಸ್‌ಎಸ್‌ಎಲ್ ಉತ್ತೀರ್ಣರಾಗಿರಬೇಕು. ಐಟಿಐ ಅಥವಾ ಡಿಪ್ಲೋಮಾ ಮಾಡಿಕೊಂಡಿದ್ದರೆ ಇನ್ನೂ ಉತ್ತಮ ಎಂದು ತಿಳಿಸಿದೆ.
ಜನರಲ್, ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿ ಆಗಿದ್ದು, ಎಸ್ಸಿ, ಎಸ್ಟಿ, ಮಹಿಳೆ, ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂಪಾಯಿ ಆಗಿದೆ.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು
* ಯಾವುದಾದರೂ ಗುರುತಿನ ಚೀಟಿ
* ಶೈಕ್ಷಣಿಕ ಪ್ರಮಾಣಪತ್ರಗಳು
* ಜಾತಿ ಪ್ರಮಾಣ ಪತ್ರ
* ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
* ಪಾಸ್ ಪೋಸ್ ಅಳತೆಯ ಪೋಟೋಗಳು
* ಅರ್ಜಿ ಸಲ್ಲಿಸುವವರ ಸಹಿ
ವಯೋಮಿತಿ ವಿವರ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ವರ್ಷದಿಂದ 33 ವರ್ಷ ವಯಸ್ಸು ಆಗಿರಬೇಕಾಗುತ್ತದೆ. ವಯೋಮಿತಿ ಸಡಿಲಿಕೆ ವಿಚಾರಕ್ಕೆ ಬಂದರೆ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ 3 ವರ್ಷ, ವಿಶೇಷ ಚೇತನರಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ), ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ನಡೆಸಲಾಗುತ್ತದೆ. ಪುರುಷರು 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1,000 ಮೀಟರ್ ಓಡಬೇಕಾಗುತ್ತದೆ. ಇನ್ನು ಮಹಿಳೆಯರು 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1,000 ಮೀಟರ್ ಓಟವನ್ನು ಓಡಬೇಕು. ಬಳಿಕ ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.












Click it and Unblock the Notifications