Indian Railways Recruitment 2024: ಭಾರತೀಯ ರೈಲ್ವೆಯಲ್ಲಿ 1036 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Indian Railways Recruitment 2024: ಭಾರತೀಯ ರೈಲ್ವೆಯು ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಇದೀಗ ಈ ಖಾಲಿ ಇರುವ 1036 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ಅರ್ಜಿ ಸಲ್ಲಿಕೆ ಆರಂಭ ಯಾವಾಗ, ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಆಯ್ಕೆಯಾದವರಿಗೆ ಮಾಸಿಕ ವೇತನ ಎಷ್ಟು ಎನ್ನವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತೀಯ ರೈಲ್ವೆ ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 1,036 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಬಿಡುಗಡೆ ಮಾಡಿದೆ. ಜೂನಿಯರ್ ಸೋನೋಗ್ರಾಫರ್, ಜೂನಿಯರ್ ಟ್ರಾನ್ಸ್ಲೇಟರ್, ಸ್ಟಾಪ್ ಮತ್ತು ಅಸಿಸ್ಟೆಂಟ್ ಇನ್ಸ್ಪೆಕ್ಟರ್, ಮುಖ್ಯ ಕಾನೂನು ಸಹಾಯಕ ಹುದ್ದೆಗಳು ಸೇರಿದಂತೆ ಇನ್ನಿತ್ತರ ಹುದ್ದೆಗಳು ಖಾಲಿ ಇದ್ದು, ಜನವರಿ 7ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇವು ಮಿನಿಸ್ಟೇರಿಯಲ್ ಹಾಗೂ ಐಸೋಲೇಟೆಡ್ ಕೆಟಗರಿಯ ಹುದ್ದೆಗಳಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಅರ್ಜಿ ಸಲ್ಲಿಸಬಹುದಾಗಿದೆ.

ಜೂನಿಯರ್ ಸೋನೋಗ್ರಾಫರ್, ಜೂನಿಯರ್ ಟ್ರಾನ್ಸ್ಲೇಟರ್, ಸ್ಟಾಪ್ ಮತ್ತು ಅಸಿಸ್ಟೆಂಟ್ ಇನ್ಸ್ಪೆಕ್ಟರ್, ಮುಖ್ಯ ಕಾನೂನು ಸಹಾಯಕ, ದೈಹಿಕ ತರಬೇತಿ ಭೋದಕ, ಸಂಗೀತ ಶಿಕ್ಷಕ, ಪ್ರಯೋಗಾಲಯ ಸಹಾಯಕ ಹಾಗೂ ಇತರ ಹುದ್ದೆಗಳು ಸೇರಿದಂತೆ ಒಟ್ಟು ಹುದ್ದೆಗಳು 1036 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆ 7 ಜನವರಿ 2025ರಂದು ಪ್ರಾರಂಭವಾಗಲಿದ್ದು, ಕೊನೇ ದಿನಾಂಕ 6 ಫೆಬ್ರವರಿ 2025 ಆಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 18,000-85,000 ರೂಪಾಯಿ ಇರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ಮೇಲ್ಕಂಡ ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಪದವಿ, ಬಿಇಡ್, ಸಿಟಿಇಡಿ, ಡಿಪ್ಲೋಮಾ, ಇಂಜಿನಿಯರಿಂಗ್, ತಂತ್ರಜ್ಞಾನ ಡಿಪ್ಲೋಮಾ ಪದವಿ ಪಡೆದಿರಬೇಕು.
ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 48 ವರ್ಷ ದಾಟಿರಬಾರದು. ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಅರ್ಜಿ ಸಲ್ಲಿಕೆ ಶುಲ್ಕದ ವಿಚಾರಕ್ಕೆ ಬಂದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪಿ ಡಬ್ಲ್ಯೂ ಡಿ, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಮಾಜಿ ಸೈನಿಕರಿಗೆ 250 ರೂಪಾಯಿ, ಇತರ ವರ್ಗದವರಿಗೆ 500 ರೂಪಾಯಿ ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆಯನ್ನು ನೋಡುವುದಾದರೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾಡಲಾಗುತ್ತದೆ, ಬಳಿಕ ಕೌಶಲ್ಯ ಹಾಗೂ ಇತರ ಮೌಲ್ಯಮಾಪನ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಈ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಯಿರಿ.












Click it and Unblock the Notifications