ಜ್ಯಾಕ್‌ಪಾಟ್ ಹೊಡೆದ IIT ವಿದ್ಯಾರ್ಥಿಗಳು: 25 ಮಂದಿಗೆ ₹1 ಕೋಟಿಗೂ ಅಧಿಕ ಪ್ಯಾಕೇಜ್
ಚೆನ್ನೈ/ ಗುವಾಹಟಿ, ಡಿಸೆಂಬರ್ 02: 2022-23 ಶೈಕ್ಷಣಿಕ ವರ್ಷದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ವಿದ್ಯಾರ್ಥಿಗಳಿಗೆ ಕಂಪನಿಗಳಿಂದ ಜ್ಯಾಕ್‌ಪಾಟ್ ಸಿಕ್ಕಿದೆ.
2022-23 ಶೈಕ್ಷಣಿಕ ವರ್ಷದಲ್ಲಿ IIT- ಮದ್ರಾಸ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್ ಆರಂಭಿಸಿದೆ.
ಈ ವರ್ಷದಲ್ಲಿ ಒಟ್ಟು 25 ವಿದ್ಯಾರ್ಥಿಗಳು 1 ಕೋಟಿ ರೂಪಾಯಿಗೂ ಅಧಿಕ ಪ್ಯಾಕೇಜ್ ಪಡೆದು, ಜ್ಯಾಕ್‌ಪಾಟ್ ಅನ್ನು ಹೊಡೆದಿದ್ದಾರೆ. ಒಟ್ಟು 445 ವಿದ್ಯಾರ್ಥಿಗಳನ್ನು ಪ್ಲೆಸ್‌ಮೆಂಟ್ ಪ್ರಕ್ರಿಯೆಯ ಮೊದಲ ದಿನ ಸಂದರ್ಶನ ಮಾಡಲಾಯಿತು.

IIT-ಮದ್ರಾಸ್ ಸಂಸ್ಥೆಯು ಈ ವರ್ಷ ಅತ್ಯಧಿಕ ಪ್ರಿ-ಪ್ಲೇಸ್‌ಮೆಂಟ್ ಕೊಡುಗೆಗಳನ್ನು ತನ್ನದಾಗಿಸಿಕೊಂಡಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು 10 ಶೇಕಡಾ ಹೆಚ್ಚಾಗಿದೆ.
ಈ ವರ್ಷ, IIT- ಮದ್ರಾಸ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಉನ್ನತ ಕಂಪನಿಗಳೆಂದರೆ:
Texas Instruments (14 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್), Bajaj Auto Ltd. & Chetak Tech. Ltd (10 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್), Qualcomm ( 8 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್), J P Morgan Chase & Co (9 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್), Proctor & Gamble ( 7 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್), Morgan Stanley (6 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್), Graviton (6 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್), McKinsey & Company (5 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್) ಹಾಗೂ Cohesity (5 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್)

IIT ಗುವಾಹಟಿ ಕೂಡ ಇಂದು ತನ್ನ ಪ್ಲೆಸ್‌ಮೆಂಟ್ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಇದರಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್, ಡೇಟಾ ಸೈನ್ಸ್, Quant, ಕೋರ್ ಇಂಜಿನಿಯರ್, UX ಡಿಸೈನರ್, VLSI, ವೆಹಿಕಲ್ ಇಂಜಿನಿಯರಿಂಗ್, Analyst ಮುಂತಾದ ಕ್ಷೇತ್ರಗಳಲ್ಲಿ 46 ಕಂಪನಿಗಳು ಒಟ್ಟು 168 ವಿದ್ಯಾರ್ಥಿಗಳಿಗೆ ಪ್ಲೆಸ್‌ಮೆಂಟ್ ನೀಡಿವೆ.

IIT ಗುವಾಹಟಿಯ ಪ್ಲೆಸ್‌ಪೆಂಟ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಕೆಲವು ಪ್ರಮುಖ ಕಂಪನಿಗಳೆಂದರೆ:
Microsoft, Texas Instruments, Google, Uber, Qualcomm, C-DOT, Enphase Energy, Oracle, Nutanix, Thoughtspot MTS-2, Squarepoint SDE/Quant, American Express, JP Morgan Chase, Bajaj, Rippling, Tibra, Cohesity, and Sprinklr Platform + Product












Click it and Unblock the Notifications