GECB Vijayapura jobs 2023: ವಿಜಯಪುರ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ, ವೇತನ, ಆಯ್ಕೆ ತಿಳಿದು ಅರ್ಜಿ ಹಾಕಿ

ಬೆಂಗಳೂರು, ಅಕ್ಟೋಬರ್ 29: ವಿಜಯಪುರದ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ (GECB Vijayapura) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಿದೆ. ಬ್ಯಾಂಕಿಂಗ್ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬೇಕು.

ವಿಜಯಪುರದ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ನಲ್ಲಿ ಒಟ್ಟು 8 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕವೇ (Offline) ನಾಳೆ ಅಕ್ಟೋಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳು ವಿಜಯಪುರದಲ್ಲಿ ಕಾರ್ಯ ನಿರ್ವಹಿಸಬಹುದು. ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ.

Government Employees Cooperative Bank Vijayapura Jobs: Tomorrow Last For Applying by Eligible

IT Dept Recruitment 2023: ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವೇತನ, ಕೊನೆ ದಿನಾಂಕ, ಆಯ್ಕೆ ವಿವರ
ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್, ವಿಜಯಪುರ
ಹುದ್ದೆ ಹೆಸರು: ಜೂನಿಯರ್ ಸಹಾಯಕ
ಖಾಲಿ ಹುದ್ದೆ ಸಂಖ್ಯೆ: ಎಂಟು
ತಿಂಗಳ ವೇತನ: 30,350 ನಿಂದ 58,250 ರೂಪಾಯಿ.
ಉದ್ಯೋಗದ ಸ್ಥಳ: ವಿಜಯಪುರ
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 30

ವಿದ್ಯಾರ್ಹತೆ ಏನಿರಬೇಕು?
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಬೇಕು ಎಂದು ಬ್ಯಾಂಕ್ ಅಧಿಸೂಚನೆ ತಿಳಿಸಿದೆ.

ವಯೋಮಿತಿ ಮಾಹಿತಿ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಇದೇ ಅಕ್ಟೋಬರ್ 30 ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು. ಇನ್ನೂ ವಯೋಮಿತಿಯಲ್ಲಿ ಸಡಲಿಕೆ ನೋಡುವುದಾದರೆ ಪರಿಶಿಷ್ಟ ಜಾತಿ-ಪಂಗಡಕ್ಕೆ, ಪ್ರವರ್ಗ I ರ ಅಭ್ಯರ್ಥಿಗಳಿಗೆ ಐದು ವರ್ಷ, ಪ್ರವರ್ಗ-2A/2B/3A & 3B ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.

ಪರಿಶಿಷ್ಠ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.500 ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 1000 ರೂಪಾಯಿ ನಿಗದಿ ಮಾಡಲಾಗಿದ್ದು. ಆಫ್‌ಲೈನ್ ಮೂಲಕ ಪಾವತಿಸಬೇಕು ಎಂದು ಬ್ಯಾಂಕ್ ತಿಳಿಸಿದೆ.

Government Employees Cooperative Bank Vijayapura Jobs: Tomorrow Last For Applying by Eligible

ಲಿಖಿತ ಪರೀಕ್ಷೆ-ಸಂದರ್ಶನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತವಾಗಿ ಪರೀಕ್ಷೆ ನಡೆಸಲಿರುವ ಸಹಕಾರಿ ಬ್ಯಾಂಕ್ ನಂತರ ಅಲ್ಲಿ ಆಯ್ಕೆ ಆಗುವವರಿಗೆ ನೇರ ಸಂದರ್ಶನ ನಡೆಸಲಿದೆ. ಅಲ್ಲಿ ಆಯ್ಕೆ ಆಗುವವರಿಗೆ ಗರಿಷ್ಠ 58,250 ರೂಪಾಯಿ ವೇತನವರೆಗೆ ನೀಡಿ ವಿಜಯಪುರದಲ್ಲಿ ಪೋಸ್ಟಿಂಗ್ ನೀಡಲಿದೆ.

ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳ ಸಹಿತ ' ನೇಮಕಾತಿ ವ್ಯವಸ್ಥಾಪಕರು ಮತ್ತು ಜನರಲ್ ಮ್ಯಾನೇಜರ್, ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ಲಿಮಿಟೆಡ್, ವಿಜಯಪುರ - 586101, ಕರ್ನಾಟಕ' ಈ ವಿಳಾಸಕ್ಕೆ ಕಳಹಿಸಬೇಕು ಎಂದು ಸಹಕಾರಿ ಬ್ಯಾಂಕ್ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+