IT Dept Recruitment 2023: ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವೇತನ, ಕೊನೆ ದಿನಾಂಕ, ಆಯ್ಕೆ ವಿವರ
ಬೆಂಗಳೂರು, ಅಕ್ಟೋಬರ್ 29: ಭಾರತದ ಆದಾಯ ತೆರಿಗೆ ಇಲಾಖೆಯು ತನ್ನಲ್ಲಿ ಖಾಲಿ ಹಲವು ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಭಾರತದ ಆದಾಯ ತೆರಿಗೆ ಇಲಾಖೆ (IT Department jobs) ನಲ್ಲಿ ಒಟ್ಟು ಎಂಟು ಯಂಗ್ ಪ್ರೊಫೆಶನಲ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಮುಂದಿನ ನವೆಂಬರ್ 17ರಂದು ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಅಂಚೆ ಮೂಲಕ (ಆಫ್ಲೈನ್) ಅರ್ಜಿ ಸಲ್ಲಿಸಬೇಕ ಎಂದು ಇಲಾಖೆ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ನೇಮಕಾತಿ ಕುರಿತು ಪೂರ್ಣ ವಿವರ ತಿಳಿದು ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಕ್ರಿಯೆಯ ಮಾಹಿತಿ
ಸಂಸ್ಥೆ ಹೆಸರು: ಆದಾಯ ತೆರಿಗೆ ಇಲಾಖೆ
ಹುದ್ದೆ ಹೆಸರು: ಯಂಗ್ ಪ್ರೊಫೆಶನಲ್
ಖಾಲಿ ಹುದ್ದೆಗಳು: 8
ಮಾಸಿಕ ಸಂಬಳ: 40,000 ರೂಪಾಯಿ
ಪೋಸ್ಟಿಂಗ್ ಸ್ಥಳ: ದೆಹಲಿ
ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ: ನವೆಂಬರ್ 17
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಲ್ಲಿ ಕಾನೂನು ವಿಭಾಗದಲ್ಲಿ ಪದವಿ, ಎಲ್ಎಲ್ಬಿ ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಇದೇ ಅಕ್ಟೋಬರ್ 26ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ ಎಂದು ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ಆಯ್ಕೆ ಹೇಗೆ ನಡೆಯುತ್ತದೆ?
ಮೊದಲು ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಇಲಾಖೆಯು ಸ್ಕ್ರೀನಿಂಗ್ ನಡೆಸಲಿದೆ. ನಂತರ ಶಾರ್ಟ್ಲಿಸ್ಟ್ ಮಾಡಿ ಬಳಿಕ ಅವರನ್ನು ಸಂದರ್ಶನ ನಡೆಸಿ ಆಯ್ಕೆ ಮಾಡುತ್ತದೆ. ಇಲ್ಲಿ ಆಯ್ಕೆ ಆಗುವವರಿಗೆ ತಿಂಗಳಿಗೆ ₹ 40,000 ವೇತನ ಕೊಟ್ಟಿ ದೆಹಲಿಯಲ್ಲಿ ಪೋಸ್ಟಿಂಗ್ ನೀಡಲಿದೆ.
ಅರ್ಜಿ ಸಲ್ಲಿಸುವುದು ಹೇಗೆ
ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಭರ್ತಿ ಮಾಡಿದ ಅರ್ಜಿಯನ್ನು ಆದಾಯ ತೆರಿಗೆ ಅಧಿಕಾರಿ (ಆಡಳಿತ) (ಕಾನೂನು ಮತ್ತು ಸಂಶೋಧನೆ), ಆದಾಯ ತೆರಿಗೆ ನಿರ್ದೇಶನಾಲಯ (ಕಾನೂನು ಮತ್ತು ಸಂಶೋಧನೆ), ಕೊಠಡಿ ಸಂಖ್ಯೆ- 413
4 ನೇ ಮಹಡಿ, ಡ್ರಮ್ ಆಕಾರದ ಕಟ್ಟಡ, I. P. ಎಸ್ಟೇಟ್, ನವದೆಹಲಿ-110002 ಇಲ್ಲಿಗೆ ಕಳುಹಿಸಬೇಕು.
ಅರ್ಜಿಯ ಸಾಫ್ಟ್ ಕಾಪಿಯನ್ನು ಈ ಇ-ಮೇಲ್ [email protected] ಗೆ ಕಳುಹಿಸಬೇಕು ಎಂದು ಇಲಾಖೆ ಸೂಚಿಸಿದೆ.












Click it and Unblock the Notifications